Vastu Tips For Turmuric Plant : ಹಿಂದೂ ಧರ್ಮದಲ್ಲಿ, ಕೆಲವು ಮರಗಳು ಮತ್ತು ಸಸ್ಯಗಳಿಗೆ ದೈವಿಕ ಶಕ್ತಿಯ ಸ್ಥಾನವನ್ನು ನೀಡಲಾಗಿದೆ. ಅವುಗಳನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ. ಭಕ್ತರ ಎಲ್ಲಾ ದುಃಖ-ಕಷ್ಟಗಳು ನಾಶವಾಗುತ್ತವೆ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಅಂಥದ್ದೇ ಕೆಲವು ಸಸ್ಯಗಳ ಬಗ್ಗೆ ಹೇಳಲಾಗಿದೆ. ಆ ಸಸ್ಯಗಳನ್ನು ಮನೆಯಲ್ಲಿ ನೆಡುವುದರಿಂದ ಧನಾತ್ಮಕತೆ ನೆಲೆಯಾಗುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ.
ವಾಸ್ತು ಶಾಸ್ತ್ರದಲ್ಲಿ ಅರಿಶಿನ ಗಿಡಕ್ಕೆ ವಿಶೇಷ ಒತ್ತು ನೀಡಲಾಗಿದೆ. ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಈ ಗಿಡವನ್ನು ನೆಟ್ಟರೆ ಲಕ್ಷ್ಮೀ ನಾರಾಯಣನ ಆಶೀರ್ವಾದ ಸಿಗುತ್ತದೆ. ಅಲ್ಲದೆ, ಲಕ್ಷ್ಮೀ ಪ್ರಸನ್ನಳಾಗಿ ಭಕ್ತರನ್ನು ಆಶೀರ್ವದಿಸುತ್ತಾಳೆ. ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿ ಅರಿಶಿನ ಗಿಡವನ್ನು ನೆದುವನ್ಯೇ ಸಲಹೆ ನೀಡಲಾಗಿದೆ. ಅರಶಿನ ಗಿಡವನ್ನು ಮನೆಯಲ್ಲಿ ನೆಟ್ಟು ಆ ಸಸ್ಯದ ಆರೈಕೆ ಮಾಡಿದರೆ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ ಎನ್ನಲಾಗಿದೆ.
ಇದನ್ನೂ ಓದಿ : Zodiac Sign : ಈ ರಾಶಿಯವರ 'ಐಕ್ಯೂ' ಅದ್ಭುತವಾಗಿರುತಂತೆ : ಇವರ ಬಳಿ ಎಲ್ಲದಕ್ಕೂ ಉತ್ತರವಿರುತ್ತೆ!
ಈ ದಿಕ್ಕಿನಲ್ಲಿ ಅರಿಶಿನದ ಗಿಡವನ್ನು ನೆಡಿ :
ಅರಿಶಿನ ಸಸ್ಯದ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬೇಕಾದರೆ ಅದನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಬಹಳ ಮುಖ್ಯ. ಈ ಸಸ್ಯವನ್ನು ಮನೆಯ ಅಗ್ನಿಕೋನದಲ್ಲಿ ಇಡುವುದರಿಂದ ವಾಸ್ತು ದೋಷಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಮನೆಯ ಸಮಸ್ಯೆಗಳನ್ನು ಹೋಗಲಾಡಿಸಲು ಇದನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಹೇಳಲಾಗುತ್ತದೆ.
ಅರಿಶಿನ ಸಸ್ಯದ ಪ್ರಯೋಜನಗಳು :
ಇದನ್ನು ಮನೆಯ ಅಂಗಳದಲ್ಲಿ ನೆಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಕುಟುಂಬ ಸದಸ್ಯರ ನಡುವೆ ಪರಸ್ಪರ ಪ್ರೀತಿ ಉಳಿಯುತ್ತದೆ. ವಿಷ್ಣುವಿಗೆ ಅರಿಶಿನದ ತಿಲಕವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ಅರಿಶಿನ ಗಿಡವನ್ನು ನೆಟ್ಟರೆ ವಿಷ್ಣುವಿನ ಆಶೀರ್ವಾದವೂ ದೊರೆಯುತ್ತದೆ. ಇದು ಗುರು ಗ್ರಹವನ್ನು ಬಲಪಡಿಸುತ್ತದೆ.
ಇದನ್ನೂ ಓದಿ : Guru Purnima 2022: ಗುರು ಪೂರ್ಣಿಮಾ ದಿನ ಸೂರ್ಯ, ಬುಧ ಹಾಗೂ ಶುಕ್ರರಿಂದ ನಿರ್ಮಾಣಗೊಳ್ಳುತ್ತಿದೆ ಈ ಯೋಗ, 3 ರಾಶಿಗಳ ಜನರಿಗೆ ಭಾರಿ ಲಾಭ
(ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.