ನವದೆಹಲಿ: Sunday Remedies For Wealth - ಸೂರ್ಯನನ್ನು ಆರಾಧಿಸಲು ಭಾನುವಾರ ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಜಾತಕದ ದೋಷಗಳನ್ನು ಹೋಗಲಾಡಿಸಲು ಭಾನುವಾರದಂದು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದಲ್ಲದೆ, ಸೂರ್ಯ ದೇವರ ಅನುಗ್ರಹವನ್ನು ಪಡೆಯಲು ಈ ದಿನದಂದು ಉಪವಾಸ ಕೈಗೊಳ್ಳುವುದು ಕೂಡ ಉತ್ತಮ ಎನ್ನಲಾಗಿದೆ. ಸಾಮಾನ್ಯವಾಗಿ ಭಾನುವಾರ ರಜಾ ದಿನ. ಹೆಚ್ಚಿನ ಜನರು ಈ ದಿನದಂದು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಆದರೆ ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಭಾನುವಾರದಂದು ಕೆಲವು ವಸ್ತುಗಳನ್ನು(Sunday Remedies For Money) ಖರೀದಿಸುವುದನ್ನು ನಿಷೇಧಿಸಲಾಗಿದೆ.


COMMERCIAL BREAK
SCROLL TO CONTINUE READING

ಭಾನುವಾರದಂದು ಈ ವಸ್ತುಗಳನ್ನು ಖರೀದಿಸುವುದು ಅಶುಭ
ಹೆಚ್ಚಿನ ಜನರು ಭಾನುವಾರದಂದು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದಂದು ಕಬ್ಬಿಣದ ವಸ್ತುಗಳನ್ನು ಖರೀದಿಸುವುದು ಅಶುಭ. ಅದನ್ನು ಖರೀದಿಸುವುದರಿಂದ ಆರ್ಥಿಕ ನಷ್ಟವಾಗುತ್ತದೆ. ಇದೇ ವೇಳೆ, ಲಕ್ಷ್ಮಿ ದೇವಿಯು ಮನೆ ತೊರೆಯುತ್ತಾಳೆ ಎನ್ನಲಾಗುತ್ತದೆ. ಇದರ ಹೊರತಾಗಿ ಹಾರ್ಡ್‌ವೇರ್, ಕಾರ್ ಆಕ್ಸೆಸರೀಸ್, ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು ಮತ್ತು ತೋಟಗಾರಿಕೆ ವಸ್ತುಗಳನ್ನು ಸಹ ಈ ದಿನ ಖರೀದಿಸಬಾರದು.


ಇದನ್ನೂ ಓದಿ-2022 ರ ಮೊದಲ ದಿನದಿಂದ, 5 ರಾಶಿಚಕ್ರ ಚಿಹ್ನೆಗಳ ಜನರು ಸಾಕಷ್ಟು ಹಣವನ್ನು ಗಳಿಸುತ್ತಾರೆ, ಕಾರಣ ತುಂಬಾ ವಿಶೇಷ.!


ಭಾನುವಾರ ಏನು ಮಾಡುವುದನ್ನು ನಿಷೇಧಿಸಲಾಗಿದೆ
ಭಾನುವಾರ ಉಪ್ಪು ತಿನ್ನಬಾರದು. ಏಕೆಂದರೆ ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರೊಂದಿಗೆ ಕೆಲಸದಲ್ಲಿ ಅಡೆತಡೆಗಳು ಎದುರಾಗುತ್ತವೆ. ಭಾನುವಾರದಂದು ಕಪ್ಪು, ನೀಲಿ, ಕಂದು ಮತ್ತು ಬೂದು ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಭಾನುವಾರದಂದು ತಾಮ್ರದ ವಸ್ತುಗಳ ಮಾರಾಟ ಮಾಡಬಾರದು. ಭಾನುವಾರದಂದು ಕ್ಷೌರವು ಜಾತಕದಲ್ಲಿ ಸೂರ್ಯನನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಭಾನುವಾರದಂದು ಕೂದಲು ಕತ್ತರಿಸುವುದನ್ನು ತಪ್ಪಿಸಬೇಕು. ಇದರ ಹೊರತಾಗಿ ಭಾನುವಾರದಂದು ಮಾಂಸ ಮತ್ತು ಮದ್ಯ ಸೇವಿಸಬಾರದು. ಈ ದಿನ ಶನಿಗೆ ಸಂಬಂಧಿಸಿದ ವಸ್ತುಗಳನ್ನು ಸೇವಿಸಬಾರದು ಎಂದು ನಂಬಲಾಗಿದೆ. ಮತ್ತೊಂದೆಡೆ, ಭಾನುವಾರದಂದು ಕೆಂಪು ಬಣ್ಣದ ವಸ್ತುಗಳು, ವಾಲೆಟ್, ಕತ್ತರಿ, ಗೋಧಿ ಇತ್ಯಾದಿಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಭಾನುವಾರದಂದು ಈ ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸಮೃದ್ಧಿ ಬರುತ್ತದೆ  ಎಂದು ನಂಬಲಾಗಿದೆ.


ಇದನ್ನೂ ಓದಿ-Garuda Purana: ದಿನದ ಯಾವುದೇ ಸಮಯದಲ್ಲಿ ಈ 4 ಸಂಗತಿಗಳು ಕಂಡರೆ, ಕೆಟ್ಟ ಕಾಲ ತೊಲಗಿ ಜೀವನ ಸುಖಮಯವಾಗುತ್ತದೆ


(Disclaimer:ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್  ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನ್ಸುಸರಿಸುವ ಮೊದಲು ವಿಷಯ ತಜ್ಞರ ಸಲಹೆ ಪಡೆಯಿರಿ)


ಇದನ್ನೂ ಓದಿ-Black Pepper Tricks : ಕರಿಮೆಣಸಿನ ಈ 5 ಟ್ರಿಕ್ಸ್ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ! ಹೇಗೆ ಇಲ್ಲಿದೆ ನೋಡಿ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.