ಬೆಂಗಳೂರು : Surya Gochar in May 2022: ಸೂರ್ಯನ ರಾಶಿಚಕ್ರ ಬದಲಾವಣೆಯು ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಏಕೆಂದರೆ ಸೂರ್ಯನು ವ್ಯಕ್ತಿಯ ವೃತ್ತಿ, ಆರೋಗ್ಯ, ಯಶಸ್ಸು ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತಾನೆ. ಸೂರ್ಯನು ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಮೇ 15 ರಂದು, ಸೂರ್ಯನು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಜೂನ್ 15 ರವರೆಗೆ ವೃಷಭ ರಾಶಿಯಲ್ಲಿಯೇ ಇರುತ್ತಾನೆ. ಈ ಸಮಯದಲ್ಲಿ 6 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುವುದು ಸಾಧ್ಯವಾಗುತ್ತದೆ.


COMMERCIAL BREAK
SCROLL TO CONTINUE READING

ಮೇಷ :  ವೃಷಭ ರಾಶಿಗೆ ಸೂರ್ಯನ ಪ್ರವೇಶವು ಮೇಷ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಆಸ್ತಿ ಖರೀದಿಸಬಹುದು.ಮಾತ್ರವಲ್ಲ,  ಆದಾಯದ ಬಹು ಪಾಲನ್ನು ಉಳಿಸುವುದು ಕೂಡಾ ಸಾಧ್ಯವಾಗುತ್ತದೆ. 


ಇದನ್ನೂ ಓದಿ :  ರಾತ್ರಿ ವೇಳೆ ಏಕೆ ಉಗುರು ಕತ್ತರಿಸಬಾರದು? ಅದರ ಹಿಂದಿನ ವೈಜ್ಞಾನಿಕ-ಧಾರ್ಮಿಕ ಕಾರಣಗಳಿವು


ವೃಷಭ ರಾಶಿ : ಸೂರ್ಯನು ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದು, ಈ ರಾಶಿಯವರಿಗೆ ದೊಡ್ಡ ಲಾಭವನ್ನೇ ನೀಡಲಿದ್ದಾನೆ.  ಈ ರಾಶಿಯವರು ಕೆಲಸದಲ್ಲಿ ದೊಡ್ಡ ಸ್ಥಾನವನ್ನು ಪಡೆಯಬಹುದು.  ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಪಡೆಯಬಹುದು. ಆದಾಯದಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ. 


ಕರ್ಕ ರಾಶಿ : ಸೂರ್ಯನ ಸಂಚಾರವು ಕರ್ಕ ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡುತ್ತದೆ . ಉದ್ಯೋಗವಿರಲಿ, ವ್ಯಾಪಾರವಿರಲಿ   ಎರಡರಲ್ಲಿಯೂ ಪ್ರಗತಿಯನ್ನು ಪಡೆಯುತ್ತಾರೆ. ಹಣಕಾಸಿನ ವಿಷಯದಲ್ಲಿ ಪ್ರಯೋಜನಕಾರಿಯಾಗಲಿದೆ. ಗೌರವ ಹೆಚ್ಚಾಗಲಿದೆ. 


ಸಿಂಹ :  ಸೂರ್ಯನ ರಾಶಿಯ ಬದಲಾವಣೆಯು ಸಿಂಹ ರಾಶಿಯವರಿಗೆ ಗೌರವ, ಹಣ, ಸ್ಥಾನಮಾನವನ್ನು ತರುತ್ತದೆ. ಪ್ರಯಾಣ ಬೆಳೆಸುವ ಅವಕಾಶವಿರುತ್ತದೆ. ಪ್ರಯಾಣವು  ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ. 


ಇದನ್ನೂ ಓದಿ :  Name Astrology: ಐಶಾರಾಮಿ ಬದುಕು, ಧನ ಸಂಪತ್ತು ವೃತ್ತಿಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ ಈ ಹೆಸರಿನವರು..!


ಕನ್ಯಾರಾಶಿ : ಕನ್ಯಾ ರಾಶಿಯ ಜನರು ಸೂರ್ಯನ ರಾಶಿಚಕ್ರದ ಚಿಹ್ನೆಯ ಬದಲಾವಣೆಯೊಂದಿಗೆ ಅದೃಷ್ಟವನ್ನು ಪಡೆಯುತ್ತಾರೆ. ಈ ರಾಶಿಯವರಿಗೆ ಈ 1 ತಿಂಗಳಲ್ಲಿ ಅದೃಷ್ಟವು ಉಜ್ವಲವಾಗಿ ಬೆಳಗುತ್ತದೆ ಮತ್ತು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಲಭಿಸುತ್ತದೆ. ಜೀವನದಲ್ಲಿ ಸಂತೋಷ ಬರುತ್ತದೆ. 


ಮೀನ ರಾಶಿ  :  ವೃಷಭ ರಾಶಿಗೆ ಸೂರ್ಯನ ಪ್ರವೇಶವು ಮೀನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ನಿಂತು ಹೋಗಿದ್ದ ಕೆಲಸ ಈ ಸಮಯದಲ್ಲಿ ಪೂರ್ಣಗೊಳ್ಳುತ್ತದೆ.   ಹಳೆಯ ಪ್ರಕರಣಗಳು ಇತ್ಯರ್ಥವಾಗಲಿವೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.