Surya Grahan 2021 : ಡಿ. 4 ರಂದು ವರ್ಷದ ಕೊನೆಯ ಸೂರ್ಯಗ್ರಹಣ : ಅಂದು ಏನು ಮಾಡಬೇಕು, ಮಾಡಬಾರದು?
ಈ ಬಾರಿ ಸೂರ್ಯನು ಭಾಗಶಃ ಆವೃತವಾಗಿ ಕಾಣಿಸಿಕೊಳ್ಳಲಿದ್ದು, ಭಾಗಶಃ ಗ್ರಹಣವನ್ನು `ಖಂಡಗ್ರಾಸ್ ಗ್ರಹಣ` ಎಂದು ಕರೆಯಲಾಗುತ್ತದೆ. ಈ ಖಗೋಳ ದೃಶ್ಯ ನೋಡಲು ವಿಜ್ಞಾನಿಗಳು ಮತ್ತು ಜನರು ಕುತೂಹಲದಿಂದ ಕಾಯುತ್ತಿದ್ದಾರೆ.
ನವದೆಹಲಿ : 2021 ರ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 4 ರಂದು ಸಂಭವಿಸಲಿದೆ. ಈ ಬಾರಿ ಸೂರ್ಯನು ಭಾಗಶಃ ಆವೃತವಾಗಿ ಕಾಣಿಸಿಕೊಳ್ಳಲಿದ್ದು, ಭಾಗಶಃ ಗ್ರಹಣವನ್ನು 'ಖಂಡಗ್ರಾಸ್ ಗ್ರಹಣ' ಎಂದು ಕರೆಯಲಾಗುತ್ತದೆ. ಈ ಖಗೋಳ ದೃಶ್ಯ ನೋಡಲು ವಿಜ್ಞಾನಿಗಳು ಮತ್ತು ಜನರು ಕುತೂಹಲದಿಂದ ಕಾಯುತ್ತಿದ್ದಾರೆ.
ಸೂರ್ಯಗ್ರಹಣ ನಾಲ್ಕು ಗಂಟೆಗಳ ಕಾಲ ಇರುತ್ತದೆ
ಈ ಸೂರ್ಯಗ್ರಹಣ(Surya Grahan)ವು ಡಿಸೆಂಬರ್ 4 ರಂದು ಬೆಳಿಗ್ಗೆ 10:49 ರಿಂದ ಪ್ರಾರಂಭವಾಗಿ ಮಧ್ಯಾಹ್ನ 3:7 ಕ್ಕೆ ಕೊನೆಗೊಳ್ಳಲಿದೆ. ಅಂದರೆ, ಸೂರ್ಯಗ್ರಹಣದ ಒಟ್ಟು ಅವಧಿಯು ಸುಮಾರು ನಾಲ್ಕು ಗಂಟೆಗಳಿರುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಸೂರ್ಯಗ್ರಹಣದ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಇ, ಸೌರ ಗ್ರಹಣವನ್ನು ದಕ್ಷಿಣ ಅಮೆರಿಕಾ, ಅಂಟಾರ್ಟಿಕಾ, ಆಸ್ಟ್ರೇಲಿಯಾ, ಅಟ್ಲಾಂಟಿಕ್‌ನ ದಕ್ಷಿಣ ಭಾಗ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಾಣಬಹುದು.
ಇದನ್ನೂ ಓದಿ : Solar Eclipse 2021: ಗ್ರಹಣದ ಮಧ್ಯೆ ರೂಪುಗೊಳ್ಳುತ್ತಿದೆ ಸೂರ್ಯ ಕೇತು ಯೋಗ, ಈ ಆರು ರಾಶಿಯವರು ಎಚ್ಚರಿಕೆಯಿಂದ ಇರಬೇಕು
ಗ್ರಹಣದ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಏನು ಮಾಡಬೇಕು?
ಗ್ರಹಣದ ನಂತರ ದೇವಾಲಯದಲ್ಲಿ ಗಂಗಾಜಲವನ್ನು ಸಿಂಪಡಿಸಿ
-ದೇವತೆಗಳಿಗೆ ಗಂಗಾಜಲದಿಂದ ಅಭಿಷೇಕ ಮಾಡಿ
- ಹಸುವಿಗೆ ರೊಟ್ಟಿ ನೀಡಿ
- ಮಂತ್ರಗಳನ್ನು ಪಠಿಸಿ
ಏನು ಮಾಡಬಾರದು
- ಗರ್ಭಿಣಿಯರು(Pregnant Women) ಹೊರಗೆ ಹೋಗಬಾರದು
- ಸೂಜಿಯಲ್ಲಿ ದಾರವನ್ನು ಹಾಕಬಾರದು
- ಯಾವುದನ್ನೂ ಕತ್ತರಿಸಬಾರದು, ಸಿಪ್ಪೆ ತೆಗೆಯಬಾರದು
- ಏನನ್ನೂ ಸುರಿಯಬಾರದು
ಇದನ್ನೂ ಓದಿ : ನಿಮ್ಮ ಜಾತಕದಲ್ಲಿ ಈ 4 ಯೋಗಗಳಿದ್ದರೆ, ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು ನಿಮ್ಮದೆ
ಸೂರ್ಯಗ್ರಹಣ ಎಂದರೇನು?
ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ ಮತ್ತು ಭೂಮಿಯಿಂದ ನೋಡಿದಾಗ ಸೂರ್ಯನನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಆವರಿಸಿದಾಗ ಸೂರ್ಯಗ್ರಹಣ(Surya Grahan) ಸಂಭವಿಸುತ್ತದೆ. ಆದರೆ ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಸಮಯದಲ್ಲಿ ರಾಹು ಮತ್ತು ಕೇತುಗಳ ದುಷ್ಟ ನೆರಳು ಭೂಮಿಯ ಮೇಲೆ ಬೀಳುತ್ತದೆ, ಇದು ಗ್ರಹಣಕ್ಕೆ ಕಾರಣವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.