ನಿಮ್ಮ ಜಾತಕದಲ್ಲಿ ಈ 4 ಯೋಗಗಳಿದ್ದರೆ, ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು ನಿಮ್ಮದೆ 

ಜಾತಕದಲ್ಲಿ ದಶಾ ಕೂಡ ವಿಶೇಷ ಮಹತ್ವವನ್ನು ಹೊಂದಿದೆ. ಜಾತಕದಲ್ಲಿ ಗ್ರಹಗಳ ಸಂಯೋಜನೆಯು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಕಾರಣವಾಗುತ್ತದೆ ಎಂದು ತಿಳಿಯಿರಿ.

Written by - Channabasava A Kashinakunti | Last Updated : Dec 1, 2021, 02:36 PM IST
  • ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ
  • ಸರ್ಕಾರಿ ಕೆಲಸದ ನಿಮ್ಮದ ಪ್ರಾಭಲ್ಯ
  • ರಾಜಕೀಯದಲ್ಲಿ ಯಶಸ್ಸು ನಿಮ್ಮದೆ
ನಿಮ್ಮ ಜಾತಕದಲ್ಲಿ ಈ 4 ಯೋಗಗಳಿದ್ದರೆ, ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು ನಿಮ್ಮದೆ  title=

ನವದೆಹಲಿ : ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನಕ್ಕೆ ವಿಶೇಷ ಮಹತ್ವವಿದೆ. ಜೀವನದಲ್ಲಿ ನಡೆಯುವ ಘಟನೆಗಳು ಜಾತಕದ ಗ್ರಹಗಳಿಗೆ ಸಂಬಂಧಿಸಿವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಜಾತಕದ ಶುಭ ಗ್ರಹಗಳು ಸಂತೋಷ, ಸಮೃದ್ಧಿ ಮತ್ತು ಪ್ರಗತಿಗೆ ಸಹಾಯಕವಾಗಿದ್ದರೆ, ಕೆಲವು ಅಶುಭ ಗ್ರಹಗಳು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಇದಲ್ಲದೆ, ಜಾತಕದಲ್ಲಿ ದಶಾ ಕೂಡ ವಿಶೇಷ ಮಹತ್ವವನ್ನು ಹೊಂದಿದೆ. ಜಾತಕದಲ್ಲಿ ಗ್ರಹಗಳ ಸಂಯೋಜನೆಯು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಕಾರಣವಾಗುತ್ತದೆ ಎಂದು ತಿಳಿಯಿರಿ.

ಅಮಾತ್ಯ ಕಾರಕ ಸ್ಥಿತಿ

ವ್ಯವಹಾರ(Business)ದಲ್ಲಿ ಯಶಸ್ಸಿಗೆ ಜಾತಕದ ಅಮಾತ್ಯ ಕಾರಕ ದಶಾ ಮುಖ್ಯವಾಗಿದೆ. ಇದರಲ್ಲಿ ಎರಡನೇ ಮನೆಯನ್ನು 5, 9 ಮತ್ತು 10 ನೇ ಮನೆಗಳ ಕಾರಕವೆಂದು ಪರಿಗಣಿಸಲಾಗುತ್ತದೆ. ಎರಡನೆಯ ಮನೆಯು ಸಂಬಂಧಿಕರನ್ನು ತೋರಿಸುತ್ತದೆ, ಐದನೆಯದು ಸಂಪತ್ತು, ಶಿಕ್ಷಣ ಮತ್ತು ಒಂಬತ್ತನೆಯದು ಅದೃಷ್ಟವನ್ನು ತೋರಿಸುತ್ತದೆ. ಇದಲ್ಲದೇ 10ನೇ ಮನೆಯಿಂದ ವ್ಯವಹಾರ ತಿಳಿಯುತ್ತದೆ. ಜಾತಕದಲ್ಲಿ ಅಮಾತ್ಯ ಕಾರಕ ಸ್ಥಿತಿ ಉತ್ತಮವಾಗಿದ್ದರೆ ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಇರುತ್ತದೆ.

ಇದನ್ನೂ ಓದಿ : ಅದೃಷ್ಟವಂತ ಮಹಿಳೆಯರು ಈ ವಿಶೇಷ ಗುಣಗಳನ್ನು ಹೊಂದಿರುತ್ತಾರೆ: ಏನೆಂದು ತಿಳಿಯಿರಿ

ಸೂರ್ಯ ಮತ್ತು ಚಂದ್ರ

ಜಾತಕದಲ್ಲಿ ಸೂರ್ಯ ಮತ್ತು ಚಂದ್ರ ಇಬ್ಬರೂ ಬಲಿಷ್ಠರಾಗಿದ್ದರೆ ಸರ್ಕಾರಿ ನೌಕರಿ ಪಡೆಯುವಲ್ಲಿ ಇಂತಹ ಯೋಗಗಳು ಪ್ರಮುಖ ಪಾತ್ರವಹಿಸುತ್ತವೆ. ಇದಲ್ಲದೇ ಶುಕ್ರ ಮತ್ತು ಗುರುವಿನ(Shukra and Guru) ಪಾತ್ರವನ್ನೂ ಪ್ರಮುಖವಾಗಿ ಪರಿಗಣಿಸಲಾಗಿದೆ.

ಮಂಗಳ ಮತ್ತು ಶುಕ್ರ

ಜಾತಕದಲ್ಲಿ ಮಂಗಳನ ಉತ್ತಮ ಸ್ಥಾನವು ಸರ್ಕಾರಿ ಕೆಲಸವನ್ನು(Govt Job) ಸಹ ಸೂಚಿಸುತ್ತದೆ. ಮಂಗಳ ಬಲವಾಗಿದ್ದರೆ ಸೇನೆ ಅಥವಾ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ದೊರೆಯುತ್ತದೆ. ಅದೇ ಸಮಯದಲ್ಲಿ, ಶುಕ್ರನು ಮಂಗಳನೊಂದಿಗೆ ಬಲವಾದ ಸ್ಥಾನದಲ್ಲಿದ್ದಾಗ, ವ್ಯಕ್ತಿಯು ಸರ್ಕಾರಿ ಉದ್ಯೋಗದಲ್ಲಿ ಅಧಿಕಾರಿಯಾಗುತ್ತಾನೆ.

ಇದನ್ನೂ ಓದಿ : ಹಣಕಾಸಿನ ಕೊರತೆ ಎದುರಾಗದಿರಲು ಮನಿ ಪ್ಲಾಂಟ್ ನೆಡುವಾಗ ಈ ವಿಷಯಗಳ ಬಗ್ಗೆ ಕಾಳಜಿ ಇರಲಿ

ಈ ಸ್ಥಿತಿಯು ರಾಜಕೀಯದಲ್ಲಿ ಯಶಸ್ಸನ್ನು ನೀಡುತ್ತದೆ

ಜಾತಕದಲ್ಲಿ ಆರನೇ, ಏಳನೇ, ಹತ್ತನೇ ಮತ್ತು ಹನ್ನೊಂದನೇ ಮನೆಗೆ ರಾಹು ಸಂಬಂಧ ಹೊಂದಿದ್ದರೆ, ಆ ವ್ಯಕ್ತಿಯು ಯಶಸ್ವಿ ರಾಜಕಾರಣಿಯಾಗುತ್ತಾನೆ. ಜಾತಕದ ಹತ್ತನೇ ಮನೆ ರಾಜಕೀಯ ಜೀವನದ ಬಗ್ಗೆ ತಿಳಿಸುತ್ತದೆ. ರಾಜಕೀಯದಲ್ಲಿ ಯಶಸ್ಸನ್ನು ಸಾಧಿಸಲು, ಹತ್ತನೇ ಮನೆಯಲ್ಲಿ ಉಚ್ಛಗ್ರಹವನ್ನು ಹೊಂದಿರುವುದು ಅವಶ್ಯಕ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News