ನವದೆಹಲಿ : ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯಗ್ರಹಣ (Sola eclipse)ಮತ್ತು ಚಂದ್ರಗ್ರಹಣವನ್ನು ಅತ್ಯಂತ ಅಶುಭ ಘಟನೆಗಳೆಂದು ಪರಿಗಣಿಸಲಾಗುತ್ತದೆ. ನವೆಂಬರ್ 19 ರ ಚಂದ್ರಗ್ರಹಣದ (Lunar eclipse) 15 ದಿನಗಳ ನಂತರ ಸೂರ್ಯಗ್ರಹಣ ಸಂಭವಿಸಲಿದೆ. ಇದು 2021ರ ಕೊನೆಯ ಸೂರ್ಯಗ್ರಹಣವಾಗಿರಲಿದೆ. ಇದರ ನಂತರ, ಮುಂದಿನ ಗ್ರಹಣವು 2022ರಲ್ಲಿ ಕಾಣಿಸಲಿದೆ.  ಇದು ಬಾಹ್ಯಾಕಾಶ ಜಗತ್ತಿಗೆ ಸಂಬಂಧಿಸಿದ ಘಟನೆಯಾಗಿದ್ದರೂ, ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ (Astrology), ಸೂರ್ಯಗ್ರಹಣದ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ.


COMMERCIAL BREAK
SCROLL TO CONTINUE READING

ಈ ದಿನಾಂಕದಂದು ಸಂಭವಿಸಲಿದೆ ವರ್ಷದ ಕೊನೆಯ ಸೂರ್ಯಗ್ರಹಣ :
2021 ರ ಕೊನೆಯ ಮತ್ತು ಎರಡನೇ ಸೂರ್ಯಗ್ರಹಣವು  ಡಿಸೆಂಬರ್ 4, 2021 ರಂದು ಸಂಭವಿಸಲಿದೆ.  ಆ ದಿನ ಅಮವಾಸ್ಯೆ ಕೂಡ ಇದೆ. ಇದು ಮಾರ್ಗಶಿರ ಮಾಸದ ಅಮಾವಾಸ್ಯೆ. ಸೂರ್ಯಗ್ರಹಣವು (Solar eclipse 2021) ಡಿಸೆಂಬರ್ 4 ರಂದು ಬೆಳಿಗ್ಗೆ 10:59 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 03:07 ರವರೆಗೆ ಮುಂದುವರಿಯುತ್ತದೆ. 


ಇದನ್ನೂ ಓದಿ :  Home Vastu Tips : ನಿಮ್ಮ ಮನೆಯಲ್ಲಿಯೂ ಈ ತಪ್ಪುಗಳಾಗುತ್ತಿದ್ದರೆ ತಕ್ಷಣ ಸರಿಪಡಿಸಿಕೊಳ್ಳಿ, ಇಲ್ಲವಾದರೆ ನಿಲ್ಲುವುದೇ ಇಲ್ಲ ಆರ್ಥಿಕ ಸಂಕಷ್ಟ


ಸೂರ್ಯಗ್ರಹಣ ಸೂತಕ ಕಾಲ :
ಡಿಸೆಂಬರ್ 4, 2021 ರಂದು ಸಂಭವಿಸಲಿರುವ ಸೂರ್ಯಗ್ರಹಣವು ಉಪಛಾಯಾ ಗ್ರಹಣವಾಗಿರಲಿದೆ. ಅಂದರೆ, ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಆದ್ದರಿಂದ ಅದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಇದರಿಂದಾಗಿ ಈ ಸೂರ್ಯಗ್ರಹಣದಲ್ಲಿ ಸೂತಕ ಕಾಲಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಲಾಗುವುದಿಲ್ಲ. ಸಾಮಾನ್ಯವಾಗಿ, ಸೂರ್ಯಗ್ರಹಣದ ಸಮಯದಲ್ಲಿ, ನಕಾರಾತ್ಮಕ ಶಕ್ತಿಯನ್ನು (Negetive energy) ತಪ್ಪಿಸಲು ಆಹಾರ ಸೇವನೆಯನ್ನು ನಿಷೇಧಿಸಲಾಗುತ್ತದೆ. ಇದನ್ನು ಹೊರತುಪಡಿಸಿ, ಬರೀ ಗಣ್ಣಿನಿಂದ ಗ್ರಹಣವನ್ನು ವೀಕ್ಷಿಸುವಂತಿಲ್ಲ. ಬರಿಗಣ್ಣಿನಿಂದ ಗ್ರಹಣ ವೀಕ್ಷಿಸಿದರೆ ಕಣ್ಣುಗಳಿಗೆ ಹಾನಿಯುಂಟು ಮಾಡುತ್ತದೆ..


ಈ ವರ್ಷದ ಕೊನೆಯ ಸೂರ್ಯಗ್ರಹಣ (Last solar eclipse of 2021) ಭಾರತದಲ್ಲಿ ಗೋಚರಿಸುವುದಿಲ್ಲ. ಇದು ಅಂಟಾರ್ಕ್ಟಿಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಗೋಚರಿಸುತ್ತದೆ. 


ಇದನ್ನೂ ಓದಿ :  New year 2022: ಹೊಸ ವರ್ಷದಲ್ಲಿ ಈ ನಾಲ್ಕು ರಾಶಿಯವರಿಗಿದೆ ವಿವಾಹ ಯೋಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.