ಸೂರ್ಯಗ್ರಹಣ: ಈ ರಾಶಿಯವರ ಮೇಲೆ ಅಶುಭ ಪರಿಣಾಮ: ಅದನ್ನು ಈ ರೀತಿ ತಪ್ಪಿಸಿ
ವರ್ಷದ ಮೊದಲ ಸೂರ್ಯಗ್ರಹಣದ ಎಫೆಕ್ಟ್: ಎಪ್ರಿಲ್ ತಿಂಗಳ ಕೊನೆಯ ದಿನದಂದು 2022ರ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಇದು ಭಾಗಶಃ ಗ್ರಹಣವಾಗಿರುವುದರಿಂದ ಇದರ ಸೂತಕದ ಅವಧಿ ಮಾನ್ಯವಾಗಿರುವುದಿಲ್ಲ. ಆದಾಗ್ಯೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಶನಿಚಾರಿ ಅಮಾವಾಸ್ಯೆಯ ದಿನ ಸಂಭವಿಸಲಿರುವ ಈ ಸೂರ್ಯಗ್ರಹಣವು ಕೆಲವು ರಾಶಿಯವರ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಲಿದೆ ಎಂದು ಹೇಳಲಾಗುತ್ತಿದೆ.
ವರ್ಷದ ಮೊದಲ ಸೂರ್ಯಗ್ರಹಣದ ಪರಿಣಾಮ: 30 ಏಪ್ರಿಲ್ 2022 ರಂದು ಶನಿ ಚಾರಿ ಅಮಾವಾಸ್ಯೆಯ ದಿನದಂದು 2022 ರ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಇದು ಭಾಗಶಃ ಗ್ರಹಣವಾಗಿದ್ದು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಗ್ರಹಣದ ಸೂತಕದ ಅವಧಿ ಮಾನ್ಯವಾಗಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣವು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಅದರಲ್ಲೂ ಕೆಲವು ರಾಶಿಯವರ ಮೇಲೆ ಅಶುಭ ಪರಿಣಾಮ ಉಂಟುಮಾಡಲಿದೆ ಎನ್ನಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಚಾರಿ ಅಮಾವಾಸ್ಯೆಯ ದಿನ ಸಂಭವಿಸಲಿರುವ ಈ ಸೂರ್ಯಗ್ರಹಣವು ಮೂರು ರಾಶಿಚಕ್ರದವರ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಕೆಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಹಣದಿಂದ ಉಂಟಾಗುವ ಕೆಟ್ಟ ಪರಿಣಾಮವನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಶನಿಚಾರಿ ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣ, ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ
ಶನಿಚಾರಿ ಅಮಾವಾಸ್ಯೆಯಂದು ಸೂರ್ಯಗ್ರಹಣ- ಈ ರಾಶಿಯವರಿಗೆ ಅಶುಭ:
ಮೇಷ ರಾಶಿ:
ವರ್ಷದ ಮೊದಲ ಸೂರ್ಯಗ್ರಹನವು ಮೇಷ ರಾಶಿಯಲ್ಲಿ ಸಂಭವಿಸಲಿದೆ. ಹಾಗಾಗಿ ಮೇಷ ರಾಶಿಯ ಜನರ ಮೇಲೆ ಅದರ ಗರಿಷ್ಠ ಪರಿಣಾಮ ಉಂಟಾಗಲಿದ್ದು ಒತ್ತಡ, ಶತ್ರುಗಳಿಂದ ನಷ್ಟ ಉಂಟಾಗುವ ಸಂಭವವಿದೆ. ಈ ದಿನ ನಿಮ್ಮ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು ಎಂದು ಹೇಳಲಾಗಿದೆ.
ಕರ್ಕಾಟಕ ರಾಶಿ:
ಶನಿಚಾರಿ ಅಮಾವಾಸ್ಯೆಯ ದಿನ ಸಂಭವಿಸಲಿರುವ ಸೂರ್ಯಗ್ರಹಣವು ಕರ್ಕಾಟಕ ರಾಶಿಯವರಿಗೆ ಅಷ್ಟಾಗಿ ಚೆನ್ನಾಗಿಲ್ಲ. ಸೂರ್ಯಗ್ರಹಣದ ಸಮಯದಲ್ಲಿ ಮೇಷ ರಾಶಿಯಲ್ಲಿ ಚಂದ್ರನೊಟ್ಟಿಗೆ ರಾಹು ಇರಲಿದ್ದಾನೆ. ರಾಹು ಜೊತೆಗೆ ಕರ್ಕಾಟಕ ರಾಶಿಯ ಅಧಿಪತಿಯಾಗಿರುವ ಚಂದ್ರನ ಸಂಯೋಗವು ಕರ್ಕಾಟಕ ರಾಶಿಯವರಲ್ಲಿ ಒತ್ತಡ, ಭಯ, ನಕಾರಾತ್ಮಕತೆಗೆ ಕಾರಣವಾಗಬಹುದು. ಇದರ ಪರಿಣಾಮ ನಿಮ್ಮ ಕೆಲಸಗಳ ಮೇಲೂ ಪ್ರಭಾವ ಬೀರಲಿದೆ. ಹಾಗಾಗಿ ಈ ಸಮಯದಲ್ಲಿ ತಾಳ್ಮೆಯಿಂದಿರಿ. ಅನಾವಶ್ಯಕವಾಗಿ ಯಾರೊಂದಿಗೂ ವಾದ ಮಾಡುವುದನ್ನು ತಪ್ಪಿಸುವುದು ಒಳಿತು.
ವೃಶ್ಚಿಕ ರಾಶಿ:
ವರ್ಷದ ಮೊದಲ ಸೂರ್ಯಗ್ರಹಣವು ಈ ಸಮಯವು ವೃಶ್ಚಿಕ ರಾಶಿಯವರಿಗೂ ಕೂಡ ಅಶುಭ ಫಲಿತಾಂಶ ತರಲಿದೆ. ಈ ಸಂದರ್ಭದಲ್ಲಿ ವಾದ-ವಿವಾದಗಳಿಂದ ದೂರ ಇದ್ದರೆ ಒಳ್ಳೆಯದು. ಇಲ್ಲವೇ ಭಾರೀ ನಷ್ಟವಾಗುವ ಸಾಧ್ಯತೆ ಇದೆ. ಆರ್ಥಿಕ ವಿಷಯದಲ್ಲಿ ಜಾಗರೂಕರಾಗಿರಿ, ಇಲ್ಲವೇ ಶತ್ರುಗಳಿಂದ ಹಾನಿಯಾಗುವ ಸಂಭವವಿದೆ.
ಇದನ್ನೂ ಓದಿ- Surya Grahan 2022: ಸೂರ್ಯಗ್ರಹಣದ ಸಮಯದಲ್ಲಿ ಮರೆತು ಕೂಡ ಈ ಕೆಲಸವನ್ನು ಮಾಡಬೇಡಿ.! ಜೀವನದ ಮೇಲೆ ಬೀರುತ್ತದೆ ಭಾರೀ ಪ್ರಭಾವ
ಸೂರ್ಯಗ್ರಹಣದ ಅಶುಭ ಪರಿಣಾಮ ತಪ್ಪಿಸಲು ಸುಲಭ ಉಪಾಯ:
ಸೂರ್ಯಗ್ರಹಣದ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಲು ಜ್ಯೋತಿಷ್ಯದಲ್ಲಿ ಕೆಲವು ಉಪಾಯಗಳನ್ನು ತಿಳಿಸಲಾಗಿದೆ. ಸೂರ್ಯಗ್ರಹಣದ ಅಶುಭ ಪರಿಣಾಮ ಹೊಂದಿರುವ ರಾಶಿಯ ಜನರು ದೇವರ ಆರಾಧನೆಯಿಂದ ಅಶುಭ ಪರಿಣಾಮಗಳನ್ನು ತಡೆಯಬಹುದು ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಈ ಕೆಳಗೆ ನೀಡಲಾದ ಸಲಹೆಗಳನ್ನೂ ತಪ್ಪದೇ ಅನುಸರಿಸಿ:
* ಗ್ರಹಣದ ಸಮಯದಲ್ಲಿ ದೇವರನ್ನು ಆರಾಧಿಸಿ. ಗ್ರಹಣದ ಬಳಿಕ ಸ್ನಾನ ಮಾಡಿ ದೇವರ ಧ್ಯಾನ ಮಾಡಿ.
* ಗಾಯತ್ರಿ ಮಂತ್ರದ ಪಠಣವು ಕೆಟ್ಟ ಪರಿಣಾಮಗಳಿಂದ ರಕ್ಷಿಸುತ್ತದೆ.
* ಕೇವಲ ಒಳ್ಳೆಯ ವಿಚಾರಗಳ ಬಗ್ಗೆ ಮಾತ್ರ ಚಿಂತಿಸಿ.
* ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ದಾನ ಮಾಡಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.