ಬೆಂಗಳೂರು : Surya Grahan 2022 : ಸೂರ್ಯಗ್ರಹಣಕ್ಕೆ ವಿಜ್ಞಾನ, ಧರ್ಮ ಮತ್ತು ಜ್ಯೋತಿಷ್ಯದಲ್ಲಿಯೂ ಹೆಚ್ಚಿನ ಪ್ರಾಮುಖ್ಯತೆಯಿದೆ. 2022 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 30 ರಂದು ಸಂಭವಿಸಲಿದೆ. ಇದರೊಂದಿಗೆ ಶನಿಚಾರಿ ಅಮವಾಸ್ಯೆ ಕೂಡಾ ಇದೇ ದಿನ ಬರಲಿದೆ. ಇದರಿಂದಾಗಿ ಈ ಗ್ರಹಣದ ಮಹತ್ವ ಹಲವು ಪಟ್ಟು ಹೆಚ್ಚಿದೆ. ಭಾಗಶಃ ಸೂರ್ಯಗ್ರಹಣದಿಂದಾಗಿ ಅದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಆದರೆ ಈ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಅದು ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಗ್ರಹಣವು ಏಪ್ರಿಲ್ 30 ರಂದು ಮಧ್ಯರಾತ್ರಿ 12:15 ರಿಂದ ಪ್ರಾರಂಭವಾಗಿ 04:08 ರವರೆಗೆ ಇರುತ್ತದೆ.
ಗ್ರಹಣದ ಸಮಯದಲ್ಲಿ ಏನು ಮಾಡಬೇಕು ?
1.ಆಹಾರ ಮತ್ತು ನೀರಿನಲ್ಲಿ ತುಳಸಿ ಎಲೆಗಳನ್ನು ಹಾಕಿಡಿ. ಇದರಿಂದ ಗ್ರಹಣದ ಋಣಾತ್ಮಕ ಪರಿಣಾಮವು ಅವುಗಳ ಮೇಲೆ ಬೀಳುವುದಿಲ್ಲ ಮತ್ತು ಅವುಗಳನ್ನು ಗ್ರಹಣದ ನಂತರ ಕೂಡಾ ಸೇವಿಸಬಹುದು.
2. ಮನೆಯ ದೇವರ ಕೋಣೆಯನ್ನು ಮುಚ್ಚಿಡಿ. ಈ ಸಮಯದಲ್ಲಿ, ದೇವಾಲಯಗಳ ಬಾಗಿಲುಗಳನ್ನು ಕೂಡಾ ಮುಚ್ಚಲಾಗುತ್ತದೆ.
3. ಗ್ರಹಣದ ಸಮಯದಲ್ಲಿ, ದೇವರ ಪೂಜೆಯಲ್ಲಿ ಗರಿಷ್ಠ ಸಮಯವನ್ನು ಕಳೆಯಿರಿ.
4.ಗ್ರಹಣದ ನಂತರ ಸ್ನಾನ ಮಾಡಿ ದಾನ ಧರ್ಮ ಮಾಡಬೇಕು. ವಿಶೇಷವಾಗಿ ಸ್ವಚ್ಛತಾ ಕಾರ್ಮಿಕರಿಗೆ ದಾನ ಮಾಡುವುದು ತುಂಬಾ ಒಳ್ಳೆಯದು ಎನ್ನಲಾಗುತ್ತದೆ.
ಇದನ್ನೂ ಓದಿ : Sankashti Chaturthi 2022: ನಾಳೆ ಸಂಕಷ್ಟ ಚತುರ್ಥಿ : ಗಣಪತಿ ಪೂಜೆ ವೇಳೆ ಈ ಕೆಲಸ ಮಾಡಲೇ ಬೇಡಿ, ಚಂದ್ರೋದಯದ ಸಮಯ ತಿಳಿಯಿರಿ
ಗ್ರಹಣ ಕಾಲದಲ್ಲಿ ಈ ಕೆಲಸ ಮಾಡಬೇಡಿ :
1. ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಬಾರದು.
2.ಗ್ರಹಣದ ಸಮಯದಲ್ಲಿ ಸೂಜಿಯಿಂದ ಯಾವುದೇ ಕೆಲಸವನ್ನು ಮಾಡಬಾರದು.
3.ಸೂರ್ಯಗ್ರಹಣದ ಸಮಯದಲ್ಲಿ, ಆಹಾರವನ್ನು ಬೇಯಿಸಬೇಡಿ. ಹರಿತವಾದ ಯಾವುದೇ ವಸ್ತುಗಳನ್ನು ಬಳಸಬೇಡಿ. ಆಹಾರವನ್ನು ಸೇವಿಸಬೇಡಿ.
3. ವಿಶೇಷವಾಗಿ ಗರ್ಭಿಣಿಯರು ಈ ಸಮಯದಲ್ಲಿ ಚಾಕು-ಕತ್ತರಿ ಅಥವಾ ಯಾವುದೇ ಹರಿತವಾದ ವಸ್ತುಗಳನ್ನು ಬಳಸಬಾರದು.
4. ಗ್ರಹಣದ ಸಮಯದಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು.
ಇದನ್ನೂ ಓದಿ: Chanakya Niti: ಈ ಗುಣಗಳಿದ್ದರೆ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಕೂಡಾ ಗೆಲ್ಲುವುದು ಸಾಧ್ಯ
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ನಂಬಿಕೆ ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.