ಬೆಂಗಳೂರು: ಪ್ರತಿ ತಿಂಗಳು ಸೂರ್ಯದೇವ ತನ್ನ ರಾಶಿ ಚಕ್ರವನ್ನು ಬದಲಾಯಿಸುತ್ತಾನೆ. ಇದನ್ನು ಸೂರ್ಯ ಸಂಕ್ರಮಣ, ಸೂರ್ಯ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದನ್ನು ಸೂರ್ಯ ಸಂಕ್ರಾಂತಿ ಎನ್ನುತ್ತಾರೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಸೂರ್ಯ ಸಂಕ್ರಮಣದ ಸಮಯದಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಕಷ್ಟಗಳು ಕೊನೆಗೊಂಡು ಅದೃಷ್ಟದ ದಿನಗಳು ಆರಂಭವಾಗಲಿವೆ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಇನ್ನು ಕೆಲವೇ ದಿನಗಳಲ್ಲಿ ಸೂರ್ಯನು ಶನಿಯ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.  ಫೆಬ್ರವರಿ 13 ರಂದು ಸೂರ್ಯನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದನ್ನು ಕುಂಭ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ಸಂಕ್ರಾಂತಿಯಂದು ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳುವುದರಿಂದ, ಸೂರ್ಯ ದೇವಾನು ಪ್ರಸನ್ನನಾಗಿ ಭಕ್ತರಿಗೆ ಅಪಾರ ಸಂಪತ್ತನ್ನು ನೀಡುತ್ತಾನೆ. ಅವರ ಅದೃಷ್ಟವೇ ಬದಲಾಗುತ್ತದೆ ಎಂದು ನಂಬಲಾಗಿದೆ. 


ಇದನ್ನೂ ಓದಿ- ಬುಧಾದಿತ್ಯ ಯೋಗದಿಂದ ಈ ರಾಶಿಯವರ ಉದ್ಯೋಗ-ವ್ಯವಹಾರದಲ್ಲಿ ಭಾರೀ ಯಶಸ್ಸು


ಕುಂಭ ಸಂಕ್ರಾಂತಿ ಸಮಯ:
ಹಿಂದೂ ಕ್ಯಾಲೆಂಡರ್ ಪ್ರಕಾರ,  ಫೆಬ್ರವರಿ 13 ರಂದು  ಕುಂಭ ಸಂಕ್ರಾಂತಿ ಸಂಭವಿಸಲಿದೆ. ಈ ದಿನ  ಶುಭ ಮುಹೂರ್ತವು ಬೆಳಿಗ್ಗೆ 07:02 ರಿಂದ ಪ್ರಾರಂಭವಾಗಿ ಬೆಳಿಗ್ಗೆ 09:57 ರವರೆಗೆ ಇರುತ್ತದೆ. ಈ ಸಮಯದಲ್ಲಿ ಈ ಕೆಳಗೆ ತಿಳಿಸಲಾದ ಪರಿಹಾರಗಳನ್ನು ಕೈಗೊಳ್ಳುವುದು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತು ಪಡಿಸಲಿದೆ.


ಇದನ್ನೂ ಓದಿ- Lucky Moles : ದೇಹದ ಈ ಭಾಗದಲ್ಲಿ ಮಚ್ಚೆ ಇದ್ದರೆ ನಿಮಗೆ ರಾಜಯೋಗ..!


ಜೀವನದಲ್ಲಿ ಅದೃಷ್ಟಕ್ಕಾಗಿ ಸೂರ್ಯ ಸಂಕ್ರಮಣದ ಸಮಯದಲ್ಲಿ ತಪ್ಪದೇ ಈ ಕೆಲಸಗಳನ್ನು ಮಾಡಿ:
* ಈ ದಿನದಂದು ಗಂಗಾ, ಯಮುನಾ ಅಥವಾ ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ. 
* ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಬ್ರಹ್ಮ ಲೋಕ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. 
* ಪುಣ್ಯ ನದಿಯಲ್ಲಿ ಸ್ನಾನದ ಬಳಿಕ ತಾಮ್ರದ ಪಾತ್ರೆಯಲ್ಲಿ ಗಂಗಾಜಲ (ಯಾವುದೇ ಪವಿತ್ರ ನದಿಯ ನೀರು)  ಮತ್ತು ಎಳ್ಳನ್ನು ಬೆರೆಸಿ ಅದನ್ನು ಸೂರ್ಯನಿಗೆ ಅರ್ಘ್ಯವಾಗಿ ಅರ್ಪಿಸಿ.
* ಕುಂಭ ಸಂಕ್ರಾಂತಿಯ ದಿನದಂದು ಸೂರ್ಯ ದೇವರ ಪೂಜೆಗೆ ವಿಶೇಷ ಮಹತ್ವವಿದೆ.
* ಅದಕ್ಕಾಗಿಯೇ ಈ ದಿನ ಸೂರ್ಯ ದೇವರ 108 ನಾಮಗಳನ್ನು ಜಪಿಸಿ.
* ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಹಾಗಾಗಿ, ಸೂರ್ಯ ಸಂಕ್ರಾಂತಿಯಲ್ಲಿ ಅದರಲ್ಲೂ ಕುಂಭ ಸಂಕ್ರಾಂತಿಯಂದು ದಾನ ಮಾದುವುದ್ದರಿಂದ ಶುಭ ಫಲಗಳು ಲಭ್ಯವಾಗುತ್ತದೆ.
* ನಿಮ್ಮ ಕೈಲಾದಷ್ಟು ಅಗತ್ಯವಿರುವವರಿಗೆ ಸಹಾಯ ಮಾಡಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.