ಬೆಂಗಳೂರು : ತಮ್ಮ ಬಳಿ ಅಪಾರ ಸಂಪತ್ತು ಇರಬೇಕು, ಯಾವ ಸೌಕರ್ಯಕ್ಕೂ ಕೊರತೆಯಾಗಬಾರದು ಎಂಬ ಬಯಕೆಯನ್ನು ಎಲ್ಲರೂ ಹೊಂದಿರುತ್ತಾರೆ. ಯಾರು ಹಣವನ್ನು ಗೌರವಿಸುತ್ತಾರೆಯೋ ಹಣ ಕೂಡಾ ಅವರ ಬಳಿಯೇ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಕೆಲವರು ಹಿಂದೆ ಮುಂದೆ ಯೋಚಿಸದೆ ಹಣ ಖರ್ಚು ಮಾಡುತ್ತಿರುತ್ತಾರೆ. ಯಾವ ಕಾರಣಕ್ಕೆ ಹಣ ಬಳಕೆಯಾಗುತ್ತಿದೆ ಎನ್ನುವುದನ್ನು ಕೂಡಾ ಯೋಚಿಸದೆ ನೀರಿನಂತೆ ಹಣವನ್ನು ಖರ್ಚು ಮಾಡುತ್ತಾರೆ. ಹೌದು ಜ್ಯೋತಿಷ್ಯದಲ್ಲಿ, ಕೂಡಾ ಅಂಥಹ ಗುಣವಿರುವ 5 ರಾಶಿಯವರನ್ನು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ವೃಷಭ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಅಧಿಪತಿ ಶುಕ್ರ. ಅವರು ಐಷಾರಾಮಿ ಬದುಕಲು ಮತ್ತು ಭೌತಿಕ ಸಂತೋಷಗಳನ್ನು ಆನಂದಿಸಲು ಇಷ್ಟಪಡುತ್ತಾರೆ. ಆದರೆ ಬೇಕಾಬಿಟ್ಟಿ ಹಣ ಖರ್ಚು ಮಾಡುವುದರಿಂದ ಅವರ ಬಳಿ ಹೆಚ್ಚು ಹಣ ಉಳಿಯುವುದಿಲ್ಲ. ಇವರು ಯಾವ ವಿಷಯದ ಬಗ್ಗೆಯೂ ಯೋಚಿಸದೆ ಹಣ ಖರ್ಚು ಮಾಡುತ್ತಾರೆ. 


ಇದನ್ನೂ ಓದಿ : Zodiac Signs Personality: ಈ ಮೂರು ರಾಶಿಗಳ ಜನರು ಸುಲಭವಾಗಿ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ


ಮಿಥುನ ರಾಶಿ : ಈ ರಾಶಿಯ ಜನರು ಸ್ನೇಹಿತರನ್ನು ತುಂಬಾ  ಇಷ್ಟಪಡುತ್ತಾರೆ. ಅವರು ತಮ್ಮ ಸ್ನೇಹಿತರಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ತಮ್ಮ ಪ್ರತಿಷ್ಠೆಯನ್ನು ತೋರಿಸಲು ಹೋಗಿ  ಸುಖಾ ಸುಮ್ಮನೆ ಎಲ್ಲಾ ಕಡೆ ಖರ್ಚು ಮಾಡಿಕೊಂಡು ಬರುತ್ತಾರೆ. ಬುಧ ಗ್ರಹವನ್ನು ಈ ರಾಶಿಚಕ್ರದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಈ ಜನರು ತಮ್ಮ ಬುದ್ಧಿವಂತಿಕೆಯಿಂದ ಸಾಕಷ್ಟು ಹಣವನ್ನು ಗಳಿಸುತ್ತಾರೆ. 


ಸಿಂಹ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಚಕ್ರವು ಸೂರ್ಯ ದೇವರಿಂದ ಆಶೀರ್ವದಿಸಲ್ಪಟ್ಟಿದೆ. ಅವರು ಐಷಾರಾಮಿ ಜೀವನಶೈಲಿಯನ್ನು ಇಷ್ಟಪಡುತ್ತಾರೆ. ಈ ರಾಶಿಯವರು ತಮ್ಮ ಸೌಕರ್ಯ ಮತ್ತು ಅನುಕೂಲಕ್ಕಾಗಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವುದರಿಂದ ಹಣ ಉಳಿಸುವುದು ಇವರಿಗೆ  ಸಾಧ್ಯವಾಗುತವುದಿಲ್ಲ, 


ಇದನ್ನೂ ಓದಿ :  Guru Purnima 2022: ಗುರು ಪೂರ್ಣಿಮಾ ದಿನ ನಿರ್ಮಾಣಗೊಳ್ಳುತ್ತಿವೆ 4 ರಾಜಯೋಗಗಳು, ಶುಭ ಮೂಹುರ್ತದಲ್ಲಿ ಪೂಜೆ ಸಲ್ಲಿಸಿದರೆ ಲಾಭ


ತುಲಾ : ಈ ರಾಶಿಯವರ ಅಧಿಪತಿ ಶುಕ್ರ. ಹಾಗಾಗಿ ಇವರ ಬಳಿ ಸಂಪತ್ತು ಯಾವಾಗಲೂ ಇರುತ್ತದೆ. ಆದರೆ ಈ ರಾಶಿಯವರು  ಅತಿಯಾಗಿ ಖರ್ಚು ಮಾಡುತ್ತಾರೆ. ತಮಗಿಂತ ಹೆಚ್ಚಿನ ಹಣವನ್ನು ಇತರರಿಗಾಗಿ ಖರ್ಚು ಮಾಡುತ್ತಾರೆ. ಹಾಗಾಗಿಯೇ ಇವರ ಬಳಿ ಹಣ ಉಳಿಯುವುದಿಲ್ಲ.  


ಕುಂಭ : ಶನಿಯ ಪ್ರಭಾವ ಇವರ ಮೇಲೆ ಗೋಚರಿಸುತ್ತದೆ. ಸಮಾಜದಲ್ಲಿ ತಮ್ಮ ಪ್ರತಿಷ್ಠೆಯನ್ನು ತೋರಿಸಲು ಹಣವನ್ನು ನೀರಿನಿಂದ ಚೆಲ್ಲುತ್ತಾರೆ. ಕೈಯಲ್ಲಿ ಸ್ವಲ್ಪ ಹಣ ಸಿಕ್ಕಿದರೂ ಅದನ್ನು ಖರ್ಚು ಮಾಡಲು ಆರಂಭಿಸುತ್ತಾರೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.