2025 ರವರೆಗೆ ಈ ರಾಶಿಯವರನ್ನು ಅತಿಯಾಗಿ ಕಾಡಲಿದ್ದಾನೆ ಶನಿ ಮಹಾತ್ಮ.! ಹೆಜ್ಜೆ ಹೆಜ್ಜೆಗೂ ಎದುರಾಗಲಿದೆ ಅಪಾಯ

ಏಳೂವರೆ ವರ್ಷಗಳ ಕಾಲ ಇರುವ ಶನಿಯ ಸಾಡೇಸಾತಿಯ ಸಂದರ್ಭದಲ್ಲಿ ವ್ಯಕ್ತಿಯನ್ನು ಬಹಳಷ್ಟು ಸತಾಯಿಬಿಡುತ್ತಾನೆ ಶನಿ ಮಹಾದೇವ.  ಮೂರು ರಾಶಿಯವರಿಗೆ ಏಕ ಕಾಲದಲ್ಲಿ ಸಾಡೇಸಾತಿ ನಡೆಯುತ್ತಿದೆ

Written by - Ranjitha R K | Last Updated : Jun 20, 2022, 02:05 PM IST
  • ಶನಿ ಸಾಡೇಸಾತಿಯ ವೇಳೆ ಜಾಗರೂಕರಾಗಿರಬೇಕು
  • ಸಾಡೇ ಸಾತಿಯಲ್ಲಿ ಬಹಳಷ್ಟು ತೊಂದರೆ ನೀಡುತ್ತಾನೆ ಶನಿ
  • ಕುಂಭ ರಾಶಿಯವರು 2025 ರವೆರೆಗೆ ಜಾಗರೂಕರಾಗಿರಬೇಕು
2025 ರವರೆಗೆ ಈ ರಾಶಿಯವರನ್ನು ಅತಿಯಾಗಿ ಕಾಡಲಿದ್ದಾನೆ ಶನಿ ಮಹಾತ್ಮ.! ಹೆಜ್ಜೆ ಹೆಜ್ಜೆಗೂ ಎದುರಾಗಲಿದೆ ಅಪಾಯ title=
Shani sadesati (File photo)

ಬೆಂಗಳೂರು : Shani Sade Sati 2022 : ಶನಿ ಸಾಡೇಸಾತಿ ಮತ್ತು ಧೈಯ್ಯಾ  ಹೆಸರು ಕೇಳುವಾಗಲೇ ಮನಸ್ಸಿನಲ್ಲಿ ಏನೋ ಒಂಥರ ಕಳವಳ ಮೂಡುತ್ತದೆ. ಯಾಕೆಂದರೆ ಈ ಸಮಯದಲ್ಲಿ ಜೀವನದಲ್ಲಿ ಕಷ್ಟಗಳ ಸರಮಾಲೆಯೇ  ಎದುರಾಗುತ್ತದೆ. ಕಳೆದ ಏಪ್ರಿಲ್ ನಲ್ಲಿ ಶನಿಯು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದನು. ಇದರೊಂದಿಗೆ ಮೀನ ರಾಶಿಯವರಿಗೆ ಸಾಡೇಸಾತಿ ಆರಂಭವಾಗಿದ್ದು, ಧನು ರಾಶಿಯವರಿಗೆ ಸಾಡೇ ಸತಿಯಿಂದ ಮುಕ್ತಿ ಸಿಕ್ಕಿದೆ. ಸದ್ಯ ಶನಿಯು ಕುಂಭ ರಾಶಿಯಲ್ಲಿದ್ದು 2025ರವರೆಗೆ ಈ ರಾಶಿಯಲ್ಲಿಯೇ ಇರುತ್ತಾನೆ. 

ಸಾಡೇಸಾತಿಯಲ್ಲಿ ಬಹಳಷ್ಟು ತೊಂದರೆ ನೀಡುತ್ತಾನೆ ಶನಿ :  
ಏಳೂವರೆ ವರ್ಷಗಳ ಕಾಲ ಇರುವ ಶನಿಯ ಸಾಡೇಸಾತಿಯ ಸಂದರ್ಭದಲ್ಲಿ ವ್ಯಕ್ತಿಯನ್ನು ಬಹಳಷ್ಟು ಸತಾಯಿಬಿಡುತ್ತಾನೆ ಶನಿ ಮಹಾದೇವ.  ಮೂರು ರಾಶಿಯವರಿಗೆ ಏಕ ಕಾಲದಲ್ಲಿ ಸಾಡೇಸಾತಿ ನಡೆಯುತ್ತಿದೆ. ಸಾಡೇ ಸತಿಯ ಮೊದಲ ಹಂತದಲ್ಲಿ ಶನಿಯು ಆರ್ಥಿಕ ಸಮಸ್ಯೆಗಳನ್ನು ನೀಡುತ್ತಾನೆ. ಅಂದರೆ ಧನಹಾನಿ, ಆದಾಯದಲ್ಲಿ ಅಡಚಣೆ, ದುಂದುವೆಚ್ಚದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಡೇ ಸತಿಯ ಎರಡನೇ ಹಂತದಲ್ಲಿ, ವ್ಯಕ್ತಿಯು ಜೀವನದಲ್ಲಿ ದೊಡ್ಡ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಅನೇಕ ರೀತಿಯ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಇದು ಸಾಡೇ ಸತಿಯ ಅತ್ಯಂತ ಕಷ್ಟಕರವಾದ ಹಂತವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಸಾಡೇ ಸಾತಿಯ ಮೂರನೇ ಮತ್ತು ಕೊನೆಯ ಹಂತದಲ್ಲಿ  ವ್ಯಕ್ತಿಯ ಭೌತಿಕ ಸಂತೋಷ ಕಳೆದು ಹೋಗುತ್ತದೆ. 

ಇದನ್ನೂ ಓದಿ : ಅಷಾಢ ಮಾಸದಲ್ಲಿ ರೂಪುಗೊಳ್ಳುವ ಈ ಅಪಾಯಕಾರಿ ಯೋಗ.! ಜೀವನದಲ್ಲಿ ಉಂಟು ಮಾಡಲಿದೆ ಅಲ್ಲೋಲ ಕಲ್ಲೋಲ ..!

ಕುಂಭ ರಾಶಿಯ ಜನರು ಜಾಗರೂಕರಾಗಿರಿ  :
ಸದ್ಯ ಕುಂಭ ರಾಶಿಯವರಿಗೆ ಅತ್ಯಂತ ನೋವಿನ ಅಂದರೆ ಎರಡನೇ ಹಂತ ನಡೆಯುತ್ತಿದೆ. ಶನಿಯು ಈಗ ಕುಂಭರಾಶಿಯಲ್ಲಿದ್ದಾನೆ.  ಈ ರಾಶಿಯವರು  ಹಣದ ನಷ್ಟ, ಗೌರವ ನಷ್ಟವನ್ನು ಎದುರಿಸಬೇಕಾಗಬಹುದು. ಆರೋಗ್ಯ, ವೈವಾಹಿಕ, ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕುಂಭ ರಾಶಿಯವರ ಈ ಹಂತವು ಮಾರ್ಚ್ 29, 2025 ರವರೆಗೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ಈ ಜನರು ತುಂಬಾ ಜಾಗರೂಕರಾಗಿರಬೇಕು. 

ಕುಂಭ ರಾಶಿಯವರು ಈ ಅವಧಿಯಲ್ಲಿ ಅಪಾಯಕಾರಿ ಕೆಲಸಗಳನ್ನು ಮಾಡಬಾರದು. 
1. ಅನಾವಶ್ಯಕವಾಗಿ ವಾದ ಮಾಡಬೇಡಿ. ಅನೈತಿಕ ಕೆಲಸಗಳನ್ನು ಮಾಡಬೇಡಿ. ವಿಶೇಷವಾಗಿ ಕಾನೂನು ವಿಷಯಗಳಿಂದ ದೂರವಿರಿ. 
2.ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. 
3.  ಶನಿವಾರ ಮತ್ತು ಮಂಗಳವಾರ, ಆಲ್ಕೊಹಾಲ್ ಸೇವಿಸಬೇಡಿ.

ಇದನ್ನೂ ಓದಿ : ಇನ್ನು ಏಳು ದಿನಗಳಲ್ಲಿ ಈ ರಾಶಿಯವರ ಭಾಗ್ಯ ಬೆಳಗಲಿದ್ದಾನೆ ಮಂಗಳ

ಸಾಡೇ ಸಾತಿಯಿಂದ ಪರಿಹಾರ ಪಡೆಯಲು ಪರಿಹಾರಗಳು :  
1.ಶನಿವಾರದಂದು ಶನಿದೇವರ ಆರಾಧನೆ ಮಾಡಿ. ಶನಿ ಚಾಲೀಸಾ ಓದಿ. ಎಳ್ಳೆಣ್ಣೆ  ದೀಪವನ್ನು ಬೆಳಗಿ.
2. ಶನಿವಾರ ಅಥವಾ ಸಾಧ್ಯವಾದರೆ, ಪ್ರತಿದಿನ ಅಶ್ವಥ ಮರದ ಕೆಳಗೆ ಎಳ್ಳೆಣ್ಣೆ  ದೀಪವನ್ನು ಬೆಳಗಿ.
3.ಶಮಿ ಗಿಡಕ್ಕೆ ನೀರು ಅರ್ಪಿಸಿ, ಪೂಜಿಸಿ .
4. ಅಸಹಾಯಕ, ನಿರ್ಗತಿಕರಿಗೆ ಸಹಾಯ ಮಾಡಿ.
5. ಮಂಗಳವಾರ  ಆಂಜನೇಯನ ಆರಾಧನೆ ಮಾಡಿ.
6. ಕಾಗೆಗೆ ಆಹಾರ ನೀಡಿ.

 

( ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News