ನವದೆಹಲಿ: ಜ್ಯೋತಿಷ್ಯದ ಪ್ರಕಾರ ಅನೇಕ ಗ್ರಹಗಳು ಪ್ರತಿ ತಿಂಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯ ಪರಿಣಾಮವು ಎಲ್ಲಾ ರಾಶಿಗಳ ಜನರ ಜೀವನದ ಮೇಲೂ ಕಾಣಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನ ಬದಲಾಯಿಸುತ್ತದೆ. ಗ್ರಹಗಳ ರಾಜ ಸೂರ್ಯ ಕುಂಭ ರಾಶಿಯಲ್ಲಿ ಸಾಗಲಿದ್ದಾನೆ. ಮತ್ತೊಂದೆಡೆ ಸಂತೋಷ ಮತ್ತು ಸಮೃದ್ಧಿ ನೀಡುವ ಶುಕ್ರನು ಈಗಾಗಲೇ ಕುಂಭದಲ್ಲಿ ಕುಳಿತಿದ್ದಾನೆ. ಕುಂಭ ರಾಶಿಯಲ್ಲಿ ಸೂರ್ಯನ ಸಂಕ್ರಮಣ, ಶುಕ್ರನೊಂದಿಗೆ ಸೂರ್ಯನ ಸಂಯೋಜನೆಯು ಅನೇಕ ರಾಶಿಗಳ ಸ್ಥಳೀಯರ ಜೀವನದಲ್ಲಿ ದೊಡ್ಡ ಬದಲಾವಣೆ ತರಲಿದೆ. ಈ ಅವಧಿಯಲ್ಲಿ ಯಾವ ರಾಶಿಯವರು ವಿಶೇಷ ಲಾಭ ಪಡೆಯುತ್ತಾರೆ ಎಂಬುದನ್ನು ತಿಳಿಯಿರಿ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯನ ಸಂಕ್ರಮಣದಿಂದ ಸೂರ್ಯ ಮತ್ತು ಶುಕ್ರನ ಸಂಯೋಜನೆಯು ಮೇಷ ರಾಶಿಯವರಿಗೆ ವಿಶೇಷ ಲಾಭ ನೀಡುತ್ತದೆ. ಈ ಸಮಯದಲ್ಲಿ ಈ ರಾಶಿಯ ಜನರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಮತ್ತೊಂದೆಡೆ ಈ ರಾಶಿಗಳ ಜನರಿಗೆ ಈ ಸಮಯವು ಆರ್ಥಿಕವಾಗಿ ಬಲವಾಗಿರುತ್ತದೆ. ಹಣದ ವಿಷಯದಲ್ಲಿ ಈ ರಾಶಿಯ ಜನರ ಅದೃಷ್ಟವು ಬಲವಾಗಿರುತ್ತದೆ. ಹೂಡಿಕೆ ಮಾಡುವುದು ಲಾಭದಾಯಕ. ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. 


ಇದನ್ನೂ ಓದಿ: Guru Gochar 2023: 12 ವರ್ಷಗಳ ನಂತರ, ಮಂಗಳನ ರಾಶಿಯಲ್ಲಿ ಗುರು ಗೋಚರ! ಗುರುಬಲದಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ


ವೃಷಭ ರಾಶಿ: ವೃಷಭ ರಾಶಿಯವರಿಗೆ ಸೂರ್ಯ ಮತ್ತು ಶುಕ್ರರ ಸಂಯೋಗವು ವಿಶೇಷವಾಗಿ ಫಲಪ್ರದವಾಗಲಿದೆ. ಈ ರಾಶಿಯವರಿಗೆ ಹೊಸ ಉದ್ಯೋಗಾವಕಾಶಗಳು ಸಿಗುತ್ತವೆ. ಅದೇ ರೀತಿ ಉದ್ಯಮಿಗಳು ಅನೇಕ ದೊಡ್ಡ ಲಾಭಗಳನ್ನು ಪಡೆಯಬಹುದು. 2 ಗ್ರಹಗಳ ಸಂಯೋಜನೆಯು ಈ ರಾಶಿಯ ಸ್ಥಳೀಯರಿಗೆ ಗೌರವ ಹೆಚ್ಚಿಸುತ್ತದೆ ಮತ್ತು ವ್ಯಾಪಾರಸ್ಥರಿಗೆ ವಿಶೇಷ ಲಾಭಗಳು ಸಿಗುತ್ತವೆ.


ಮಿಥುನ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂಬರುವ ಸಮಯವು ಮಿಥುನ ರಾಶಿಯವರಿಗೆ ವಿಶೇಷವಾಗಿ ಫಲಕಾರಿಯಾಗಲಿದೆ. ಸೂರ್ಯ ಮತ್ತು ಶುಕ್ರನ ಸಂಯೋಜನೆಯು ಈ ಜನರಿಗೆ ಧನಲಾಭವನ್ನುಂಟು ಮಾಡುತ್ತದೆ. ಅದೇ ರೀತಿ ಪ್ರತಿ ಕೆಲಸದಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ಮಿಥುನ ರಾಶಿಯ ಜನರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ನೀವು ವಿದೇಶ ಪ್ರವಾಸಕ್ಕೆ ಹೋಗಬೇಕೆಂದು ಯೋಚಿಸುತ್ತಿದ್ದರೆ ಈ ಸಮಯದಲ್ಲಿ ಕನಸು ನನಸಾಗಬಹುದು.


ಇದನ್ನೂ ಓದಿ: Propose day : ರಾಶಿಗನುಗುಣವಾಗಿ ನಿಮ್ಮ ಜೀವನದಲ್ಲಿ ಹೇಗಿರಲಿದೆ ಪ್ರೀತಿ, ಪ್ರೇಮ, ಪ್ರಣಯ


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.