Propose day : ರಾಶಿಗನುಗುಣವಾಗಿ ನಿಮ್ಮ ಜೀವನದಲ್ಲಿ ಹೇಗಿರಲಿದೆ ಪ್ರೀತಿ, ಪ್ರೇಮ, ಪ್ರಣಯ

ನಿನ್ನೆಯಿಂದಲೇ ಪ್ರೇಮಿಗಳ ಸಪ್ತಾಹ ಆರಂಭವಾಗಿದೆ.  ನಿನ್ನೆ ರೋಜ್ ಡೇ ಆದರೆ ಇಂದು ಪ್ರೋಪೋಸೆ ಡೇ. ರಾಶಿಗನುಗುಣ ವಾಗಿ ಒಬ್ಬೊಬ್ಬರ ಗುಣ ಸ್ವಭಾವ ಒಂದೊಂದು ರೀತಿ ಇರುತ್ತದೆ. ಅದಕ್ಕೆ ತಕ್ಕಂತೆ ಎಲ್ಲಾ 12 ರಾಶಿಯವರ ಪ್ರೀತಿ ಜಾತಕವೂ ಇರುತ್ತದೆ. 

Written by - Ranjitha R K | Last Updated : Feb 8, 2023, 04:28 PM IST
  • ಫೆಬ್ರವರಿ 14 ರಂದು ಪ್ರೇಮಿಗಳ ದಿನ.
  • ನಿನ್ನೆಯಿಂದಲೇ ಪ್ರೇಮಿಗಳ ಸಪ್ತಾಹ ಆರಂಭವಾಗಿದೆ.
  • ಇಂದು ಪ್ರೋಪೋಸೆ ಡೇ ಆಚರಿಸಲಾಗುತ್ತಿದೆ
Propose day : ರಾಶಿಗನುಗುಣವಾಗಿ ನಿಮ್ಮ ಜೀವನದಲ್ಲಿ ಹೇಗಿರಲಿದೆ ಪ್ರೀತಿ, ಪ್ರೇಮ, ಪ್ರಣಯ   title=

Propose day Special : ಫೆಬ್ರವರಿ   14 ರಂದು ಪ್ರೇಮಿಗಳ ದಿನ. ಪ್ರೇಮಿಗಳ ಸಪ್ತಾಹದ ಅಂಗವಾಗಿ ಇಂದು  ಪ್ರಪೋಸ್ ಡೇಯನ್ನು ಆಚರಿಸಲಾಗುತ್ತದೆ.   ರಾಶಿಗನುಗುಣವಾಗಿ ನಿಮ್ಮ ಪ್ರೇಮ ಜೀವನ ಹೇಗಿರಲಿದೆ? ಪ್ರೀತಿಯಲ್ಲಿ ನಿಮಗೆಷ್ಟು ಯಶಸ್ಸು ಸಿಗಲಿದೆ. ಎನ್ನುವುದನ್ನು ವಿವರವಾಗಿ ನೋಡೋಣ.  
 
ಫೆಬ್ರವರಿ 8 ಲವ್ ಪ್ರಪೋಸಿಂಗ್ ಡೇ  : 
ನಿನ್ನೆಯಿಂದಲೇ ಪ್ರೇಮಿಗಳ ಸಪ್ತಾಹ ಆರಂಭವಾಗಿದೆ.  ನಿನ್ನೆ ರೋಜ್ ಡೇ ಆದರೆ ಇಂದು ಪ್ರೋಪೋಸೆ ಡೇ.  ರಾಶಿಗನುಗುಣ ವಾಗಿ ಒಬ್ಬೊಬ್ಬರ ಗುಣ ಸ್ವಭಾವ ಒಂದೊಂದು ರೀತಿ ಇರುತ್ತದೆ. ಅದಕ್ಕೆ ತಕ್ಕಂತೆ ಎಲ್ಲಾ 12 ರಾಶಿಯವರ ಪ್ರೀತಿ ಜಾತಕವೂ ಇರುತ್ತದೆ. 

ಮೇಷ ರಾಶಿ :
ನಿಮ್ಮ ಜೀವನದಲ್ಲಿ ಗಾಢವಾದ ಪ್ರೀತಿ ಇರುತ್ತದೆ. ನಿಮ್ಮ ಪ್ರೇಮ ಜೀವನ ಅದ್ಬುತವಾಗಿರುತ್ತದೆ.  ಪ್ರೇಮಿಗಳು, ಪತಿ-ಪತ್ನಿಯರ ನಡುವಿನ ಸಂಬಂಧ ಗಟ್ಟಿಯಾಗಿರುತ್ತದೆ. ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿ.
 
 ಇದನ್ನೂ ಓದಿ Naga Sadhu: ಸ್ತ್ರೀ ನಾಗಾ ಸಾಧುಗಳೂ ಬೆತ್ತಲಾಗಿಯೇ ಇರ್ತಾರಾ? ಈ ಸಮಯದಲ್ಲಿ ಮಾತ್ರ ಲೋಕದ ಜನರಿಗೆ ದರ್ಶನ ಕೊಡ್ತಾರೆ!

ವೃಷಭ ರಾಶಿ :
ನಿಮ್ಮ ಸಂಗಾತಿಯಿಂದ ನೀವು ಹೆಚ್ಚಿನ ಪ್ರೀತಿ ಸಿಗುತ್ತದೆ. ನಿಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ನಿಮಗೆ ಸಾಧ್ಯವಾಗುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸಲು ಇಂದು ಅತ್ಯಂತ ಅನುಕೂಲಕರ ದಿನವಾಗಿದೆ.

ಮಿಥುನ ರಾಶಿ : 
ನೀವು ನಿಮ ಪ್ರೀತಿಯನ್ನು ವ್ಯಕ್ತಪಡಿಸುವಾಗ ಎಚ್ಚರಿಕೆಯಿಂದ ಇರಿ,  ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಜಗಳವಾಗಬಹುದು. ಸಂಗಾತಿ ಮೋಸ ಮಾಡುತ್ತಿದ್ದಾರೆ ಎಂದು ಕೆಲವರಿಗೆ ಅನ್ನಿಸಬಹುದು. ಪರಸ್ಪರ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. 

ಕಟಕ ರಾಶಿ :
ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಇದರಿಂದ ನಿಮ್ಮ  ಪ್ರೀತಿ ಮತ್ತಷ್ಟು ಗಟ್ಟಿಯಾಗುತ್ತದೆ.  ಕುಟುಂಬದಲ್ಲಿ ಸಂತೋಷ ಇರುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಇದನ್ನೂ ಓದಿ : Guru Gochar 2023: 12 ವರ್ಷಗಳ ನಂತರ, ಮಂಗಳನ ರಾಶಿಯಲ್ಲಿ ಗುರು ಗೋಚರ! ಗುರುಬಲದಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ

ಸಿಂಹ ರಾಶಿ : 
ಸಿಂಹ  ರಾಶಿಯವರಿಗೆ ಇಂದು ತುಂಬಾ ಒಳ್ಳೆಯ ದಿನ. ಪ್ರೀತಿಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯಿಂದ ಅತಿಯಾದ ಪ್ರೀತಿಯನ್ನು ನೀವು ಪಡೆಯುತ್ತೀರಿ. 

ಕನ್ಯಾ ರಾಶಿ : 
ಈ ರಾಶಿಯವರ ಜೀವನದಲ್ಲಿ ಶೀಘ್ರವೇ ಸಂಗಾತಿಯ ಪ್ರವೇಶವಾಗುವುದು.  ಯಾರಿಗಾದರೂ ಪ್ರೊಪೋಸ್ ಮಾಡುವ ಯೋಚನೆ ಇದ್ದರೆ ಹಿಂಜರಿಕೆ ಬೇಡ. ನಿಮ್ಮ ಪ್ರೀತಿಯ ಜಾತಕ ಚೆನ್ನಾಗಿದೆ. 

ತುಲಾ ರಾಶಿ : 
 ತುಲಾ ರಾಶಿಯವರ ಸಂಗಾತಿಯು ಕೂಡಾ ನಿಮ್ಮನ್ನು ಬಹಳವಾಗಿ ಪ್ರೀತಿಸುತ್ತಾರೆ. ಜೀವನದಲ್ಲಿ ನಿಮಗೆ ಯಾವುದೇ ರೀತಿಯ ಕಷ್ಟವಾಗದತೆ ನೋಡಿಕೊಳ್ಳುತ್ತಾರೆ. ನಿಮಗಾಗಿ ಸಮಯ ಮೀಸಲಿಡುತ್ತಾರೆ. ಪ್ರೀತಿಯ ವಿಷಯದಲ್ಲಿ ನೀವು ಅದೃಷ್ಟವಂತರು. 
 
ವೃಶ್ಚಿಕ ರಾಶಿ : 
ಸಂಗಾತಿಯನ್ನು ಸದಾ ಅನುಮಾನಿಸುವುದರಿಂದ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಹದಗೆಡುತ್ತಿರುವ ಸಂಬಂಧವನ್ನು ನಿಭಾಯಿಸಲು ಪ್ರಯತ್ನ ಮಾಡಿ. ಹೊಸ ಸಂಬಂಧವನ್ನು ಪ್ರಾರಂಭಿಸಲು ಉತ್ತಮ ದಿನಕ್ಕಾಗಿ ಕಾಯಬೇಕೆಂದಿಲ್ಲ.

ಇದನ್ನೂ ಓದಿ : Morning Tips: ಬೆಳಗ್ಗೆ ಎದ್ದ ಕೂಡಲೇ ಅಪ್ಪಿತಪ್ಪಿಯೂ ಕನ್ನಡಿ ನೋಡಬೇಡಿ.!

ಧನು ರಾಶಿ :
ನಿಮ್ಮ ಸಂಗಾತಿ ನಿಮ್ಮ ಬಾಳನ್ನು ಬೆಳಗುತ್ತಾರೆ. ಸಂಗಾತಿಯಿಂದ ನೀವು ಬಹಳವಾದ ಪ್ರೀತಿಯನ್ನು ಪಡೆಯುತ್ತೀರಿ. ನಿಮ್ಮ ಪ್ರೇಮ ಜೀವನ ಅದ್ಬುತವಾಗಿರುತ್ತದೆ. 

ಮಕರ ರಾಶಿ : 
ನಿಮ್ಮ ಸಂಗಾತಿಯೊಂದಿಗೆ  ಮನಸ್ತಾಪವಿದ್ದರೆ ಅದನ್ನು ಬಗೆಹರಿಸಿಕೊಳ್ಳಿ.  ಹೊಸ ಸಂಗಾತಿ ಹುಡುಕಾಟದಲ್ಲಿರುವವರ  ಹುಡುಕಾಟ ಕೊನೆಯಾಗುತ್ತದೆ. 

ಕುಂಭ ರಾಶಿ :
ನಿಮ್ಮ ಪ್ರೀತಿಯ ಜೀವನದಲ್ಲಿ  ಮೂರನೇ ವ್ಯಕ್ತಿ ಪ್ರವೇಶವಾಗದಂತೆ ಎಚ್ಚರ ವಹಿಸಿ. ಅಸೂಯೆಯಿಂದ ಪತಿ-ಪತ್ನಿಯರ ನಡುವೆ ಮನಸ್ತಾಪ ಉಂಟಾಗುವುದರಿಂದ ಮಾತಿನಲ್ಲಿ ಜಾಗರೂಕರಾಗಿರಿ.

ಮೀನ ರಾಶಿ:
ಪ್ರೀತಿಯನ್ನು ವ್ಯಕ್ತಪಡಿಸಲು ಇಂದು ಒಳ್ಳೆಯ ದಿನ. ಈ ದಿನದಂದು ಪ್ರಾರಂಭವಾದ ಸಂಬಂಧವು ದೀರ್ಘಕಾಲದವರೆಗೆ ಇರುತ್ತದೆ.

 

(ಗಮನಿಸಿ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News