Saturn Transit 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಪ್ರಸ್ತುತ ಮಕರ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಶನಿಯು ಏಪ್ರಿಲ್ 29ರಂದು ಮಕರ ರಾಶಿಯನ್ನು ಪ್ರವೇಶಿಸಿದ್ದು, ಮುಂದಿನ ವರ್ಷ ಅಂದರೆ ಜನವರಿ 17, 2023 ರವರೆಗೆ ಅಲ್ಲೇ ಇದ್ದು, ಬಳಿಕ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯು ರಾಶಿಯನ್ನು ಬದಲಾಯಿಸಿದ ತಕ್ಷಣ ರಾಶಿಚಕ್ರ ಚಿಹ್ನೆಗಳ ಮೇಲೆ ಮಹಾದಶಾ ಪ್ರಭಾವವು ಪ್ರಾರಂಭವಾಗುತ್ತದೆ. ಇನ್ನೂ ಕೆಲವರಿಗೆ ಕೊನೆಗೊಳ್ಳುತ್ತದೆ. ಏಪ್ರಿಲ್ 29 ರಂದು ಶನಿ ಸಂಕ್ರಮಣದ ನಂತರ ಸಾಡೇ ಸಾತಿ (ಏಳೂವರೆ ಶನಿ) ಮತ್ತು ಧೈಯಾ (ಎರಡೂವರೆ ಶನಿ) ಹಿಡಿತಕ್ಕೆ ಒಳಗಾಗಿದ್ದ ರಾಶಿಚಕ್ರದ ಚಿಹ್ನೆಗಳಿಗೆ ಜುಲೈನಲ್ಲಿ ದೊಡ್ಡ ಪರಿಹಾರ ಸಿಕ್ಕತ್ತು. ಈಗ ಮುಂದಿನ ಶನಿ ಸಂಕ್ರಮಣವು 3 ರಾಶಿಗಳಿಗೆ ಪರಿಹಾರವನ್ನು ನೀಡಲಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸರ್ಕಾರದ ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗುತ್ತದೆ 5 ಸಾವಿರ ರೂಪಾಯಿ ಪಿಂಚಣಿ ..!


2023ರಲ್ಲಿ ಈ ರಾಶಿಗಳ ಮಹಾದಶಾ ನಿವಾರಣೆ:
ಜುಲೈ 12 ರಂದು ಶನಿಯು ಮಕರ ರಾಶಿಯನ್ನು ಪ್ರವೇಶಿಸಿದಾಗ, ಮಿಥುನ, ತುಲಾ ಮತ್ತು ಧನು ರಾಶಿಯ ಜನರು ಶನಿಯ ಅರ್ಧ ಧೈಯಾದಿಂದ ಪ್ರಭಾವಿತರಾಗುತ್ತಾರೆ. ಇದಕ್ಕೂ ಮುನ್ನ ಈ ರಾಶಿಯ ಜನರು ಏಪ್ರಿಲ್ 29 ರಂದು ಸಾಡೆ ಸಾತ್‌ ಮತ್ತು ಧೈಯಾದಿಂದ ಪರಿಹಾರವನ್ನು ಪಡೆದಿದ್ದರು. ಇದೀಗ ಮತ್ತೆ ಈ ರಾಶಿಚಕ್ರ ಚಿಹ್ನೆಗಳ ಜನರಿಗೆ ಒಳ್ಳೆಯ ದಿನಗಳು ಮತ್ತೆ ಪ್ರಾರಂಭವಾಗಲಿವೆ. ಜನವರಿ 17, 2023 ರಂದು, ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ತಕ್ಷಣ, ಸಾಡೆ ಸಾತ್‌ ಮತ್ತು ಧೈಯಾ ಮತ್ತೆ ಈ ಮೂರು ರಾಶಿಗಳಿಂದ ಹೊರಹೋಗುತ್ತದೆ.


ಮಿಥುನ, ತುಲಾ, ಧನು ರಾಶಿಯವರಿಗೆ ಲಾಭ: 
2023ರಲ್ಲಿ ಶನಿಯು ಕುಂಭ ರಾಶಿಗೆ ಪ್ರವೇಶಿಸಿದ ಕೂಡಲೇ ಮಿಥುನ, ತುಲಾ, ಧನು ರಾಶಿಯವರಿಗೆ ಶನಿಯ ಮಹಾದಶಾ ದೂರವಾಗುತ್ತದೆ. ಇದು ಅವರ ಜೀವನದಲ್ಲಿ ಅನೇಕ ರೀತಿಯಲ್ಲಿ ಧನಾತ್ಮಕ ಪರಿಣಾಮ ಬೀರಲು ಕಾರಣವಾಗುತ್ತದೆ. ಈ ಮೂರು ರಾಶಿಗಳ ಜನರು ಹಣಕಾಸಿನ ವಿಷಯಗಳಲ್ಲಿ ಯಶಸ್ಸನ್ನು ಪಡೆಯಲು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲದೆ ಆದಾಯವು ಹೆಚ್ಚಾಗುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಗೌರವ ಹೆಚ್ಚಾಗಲಿದೆ.


ಈ ರಾಶಿಚಕ್ರ ಚಿಹ್ನೆಗಳಿಗೆ ತೊಂದರೆ:
ವರ್ಷಾರಂಭದಲ್ಲಿ ಕುಂಭ ರಾಶಿಯಲ್ಲಿ ಶನಿಯ ಸಂಚಾರದಿಂದ ಕರ್ಕಾಟಕ, ವೃಶ್ಚಿಕ, ಮೀನ ರಾಶಿಯವರಿಗೆ ಸಂಕಷ್ಟಗಳು ಹೆಚ್ಚಾಗಲಿವೆ. ಈ ಜನರು ಶನಿಯ ಮಹಾದಶಕ್ಕೆ ಒಳಗಾಗುತ್ತಾರೆ. ಮೀನ ರಾಶಿಯವರಿಗೆ ಸಾಡೇ ಸಾತ್ ಆರಂಭವಾಗುತ್ತದೆ. ಮತ್ತೊಂದೆಡೆ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರು ಧೈಯಾ ಹಿಡಿತದಲ್ಲಿರುತ್ತಾರೆ. ಇದರೊಂದಿಗೆ, ಅವರ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು.


ಇದನ್ನೂ ಓದಿ: ಈ ದಿನ ಬಿಡುಗಡೆ ಆಗಲಿದೆ ಪಿಎಂ ಕಿಸಾನ್ 12ನೇ ಕಂತು


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ