ನವದೆಹಲಿ: ಹೆಂಗಸರಾಗಲಿ, ಪುರುಷರಾಗಲಿ ಮದುವೆಯ ನಂತರ ಅವರ ಜೀವನವೇ ಬದಲಾಗುತ್ತದೆ. ಅದರಲ್ಲೂ ಮಹಿಳೆಯರ (Woman after marriage) ಬಗ್ಗೆ ಹೇಳುವುದಾದರೆ ಬಹುತೇಕ ಮಹಿಳೆಯರು ಅತ್ತೆಯ ಮನೆಗೆ ಹೋದ ತಕ್ಷಣ ಸಂಪೂರ್ಣ ಬದಲಾಗುತ್ತಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಶನಿಯ ರಾಶಿಯಲ್ಲಿ ಶುಕ್ರನ ಪ್ರವೇಶ, ನಾಳೆಯಿಂದ ಈ ಅದು ರಾಶಿಗಳಿಗೆ ಜಬರ್ ದಸ್ತ್ ಲಾಭ


ಸ್ತ್ರೀಯರ ವ್ಯಕ್ತಿತ್ವವು ಪ್ರೌಢಾವಸ್ಥೆಯತ್ತ ಸಾಗುತ್ತದೆ. ಅಲ್ಲದೆ, ರೂಪ, ಬಣ್ಣ ಮತ್ತು ಆಕಾರಗಳಲ್ಲಿ ಬದಲಾವಣೆ ಕಂಡುಬರುತ್ತದೆ.


ದೈಹಿಕ ಬದಲಾವಣೆಗಳು:


ಮದುವೆಯ (Wedding) ನಂತರ ಹೆಚ್ಚಿನ ಮಹಿಳೆಯರ ನೋಟವೂ ಬದಲಾಗುವುದನ್ನು ನೀವು ನೋಡಿರಬಹುದು. ಇದರ ಹಿಂದಿನ ಮುಖ್ಯ ಕಾರಣವೆಂದರೆ ಅವರು ತಮ್ಮ ಬಗ್ಗೆ ಗಮನ ಹರಿಸದಿರುವುದು. ಗೃಹಿಣಿ ಆಗಿದ್ದರೆ ಮನೆಯ ಸಂಪೂರ್ಣ ಜವಾಬ್ದಾರಿ ಆಕೆಯ ಮೇಲಿರುತ್ತದೆ. ಅದೇ ಸಮಯದಲ್ಲಿ, ಕೆಲಸ ಮತ್ತು ಮನೆಯ ಕೆಲಸ ಮಾಡುವ ಮಹಿಳೆಯರು ಜವಾಬ್ದಾರಿಯಿಂದಾಗಿ, ತಮ್ಮತ್ತ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇದು ಅವರ ತೂಕವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. 


ಈ ಕಾರಣದಿಂದಾಗಿ, ಅವಳ ಸೌಂದರ್ಯದ (Beauty Tips) ಆರೈಕೆಯ ಸಮಯವೂ ಕಡಿಮೆಯಾಗುತ್ತದೆ. ಇದರಿಂದಾಗಿ ಅವಳ ಮುಖದಲ್ಲಿ ಬದಲಾವಣೆಗಳು ಕಂಡುಬರುತ್ತವೆ. 


ಡ್ರೆಸ್ಸಿಂಗ್ ಸೆನ್ಸ್ ಬದಲಾವಣೆ:


ಹೆಚ್ಚಿನ ಹುಡುಗಿಯರು ಮದುವೆಯ ನಂತರ ಡ್ರೆಸ್ಸಿಂಗ್ ಸ್ಟೈಲ್ (Dressing Style) ಬದಲಾಯಿಸುತ್ತಾರೆ. ಶಾರ್ಟ್ಸ್ ಮತ್ತು ಜೀನ್ಸ್ ಮತ್ತು ಸ್ಕರ್ಟ್ ಅಥವಾ ಸಲ್ವಾರ್ ಸೂಟ್‌ನಲ್ಲಿ ತನ್ನ ತಾಯಿಯ ಮನೆಯಲ್ಲಿ ತಿರುಗಾಡುತ್ತಿದ್ದ ಹುಡುಗಿ ಮದುವೆಯಾದ ನಂತರ ಪ್ರತಿದಿನ ಸೀರೆ ಅಥವಾ ಸಲ್ವಾರ್ ಸೂಟ್‌ನಲ್ಲಿ ಕಾಣಿಸಿಕೊಳ್ಳಬಹುದು. ಏಕೆಂದರೆ ಇಂದಿಗೂ ಹೆಚ್ಚಿನ ಕುಟುಂಬಗಳಲ್ಲಿ ಸೊಸೆಯರ ಬಟ್ಟೆಯ ಬಗ್ಗೆ ಅದೇ ಹಳೆಯ ಚಿಂತನೆಯನ್ನು ಹೊಂದಲಾಗಿದೆ.


ಇದಕ್ಕೆ ಕಾರಣವನ್ನು ಸಾಮಾಜಿಕ ಒತ್ತಡ ಎಂದು ಪರಿಗಣಿಸಬಹುದು. ಯಾಕೆಂದರೆ ಅತ್ತೆಗೆ ಹೊಸ ಸೊಸೆಯ ಬಟ್ಟೆ ತೊಡಕಾಗದಿದ್ದರೂ ಬಂಧುಗಳು, ನೆರೆಹೊರೆಯವರ ಅಭಿಪ್ರಾಯದ ಬಗ್ಗೆ ಯೋಚಿಸಿ, ಗ್ಲಾಮ್ ಟಚ್‌ ಕೊಡುವ ಬಟ್ಟೆಗಳಿಗೆ ಬೈ-ಬೈ ಹೇಳುತ್ತಾರೆ.


ತನಗಾಗಿ ಸಮಯದ ಕೊರತೆ: 


ಇಂತಹ ಬದಲಾವಣೆಗಳ ಕುರಿತ ಸಮೀಕ್ಷೆಯಲ್ಲಿ ಮಹಿಳೆಯರು ಈಗ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಮದುವೆಗೂ ಮುನ್ನ ತುಂಬಾ ಸುತ್ತಾಡುತ್ತಿದ್ದೆ, ಆದರೆ ಈಗ ತನ್ನ ಆದ್ಯತೆ ಬದಲಾಗಿದೆ ಎನ್ನುತ್ತಾರೆ. ಅದೇ ಸಮಯದಲ್ಲಿ, ಕೆಲವು ಪುರುಷರು ತಮ್ಮ ಹೆಂಡತಿ ಸಮಯ ನೀಡುತ್ತಿಲ್ಲ ಎಂದು ದೂರುತ್ತಾರೆ. ಹೀಗೆ ದೂರುವ ವಿವಾಹಿತ ಪುರುಷರಲ್ಲಿ ನೀವೂ ಒಬ್ಬರಾಗಿದ್ದರೆ ನಿಮ್ಮ ಪತ್ನಿಯಲ್ಲಿನ ಈ ಬದಲಾವಣೆಯೂ ಇದೇ ಕಾರಣಕ್ಕೆ ಆಗಿರಬಹುದು ಎಂದು ತಿಳಿಯಿರಿ.


ಇದನ್ನೂ ಓದಿ:  ಮಾರ್ಚ್ 4 ರಂದು ರೂಪುಗೊಳ್ಳುತ್ತಿದೆ ದುರ್ಲಬ ಯೋಗ, ಪ್ರೇಮ ವಿವಾಹಕ್ಕೆ ಅಡೆತಡೆಯಾಗುತ್ತಿದ್ದರೆ ಅಂದು ಈ ಕೆಲಸ ಮಾಡಿ..!


ಮದುವೆಗೆ ಮೊದಲು ತುಂಬಾ ಸಮಯ ಸಿಗುತ್ತಿತ್ತು ಆದರೆ ಮದುವೆಯ ನಂತರ ಮನೆಯ ಜವಾಬ್ದಾರಿ ಅವರಿಗೆ ಮೊದಲ ಆದ್ಯತೆ ಆಗುತ್ತೆ ಅನ್ನೋದು ನೆನಪಿಗೆ ಬರುವುದಿಲ್ಲ.


ಬಾಲ್ಯದ ನಷ್ಟ:


ಬೆಳೆದ ನಂತರವೂ, ಒಬ್ಬ ವ್ಯಕ್ತಿಯು ಯಾವಾಗಲೂ ತನ್ನ ಹೆತ್ತವರಿಗೆ ಮಗುವಾಗಿ ಉಳಿಯುತ್ತಾನೆ. ಹೆಣ್ಮಕ್ಕಳು ತಂದೆ-ತಾಯಿಯರ ಮನೆಯಲ್ಲಿ ಉಳಿದುಕೊಂಡಾಗ ಅವರ ನಡುವಳಿಕೆ ಸ್ವಲ್ಪ ಬಾಲಿಶವಾಗಿರುವುದಕ್ಕೆ ಕಾರಣವೇನೆಂದರೆ, ಅಲ್ಲಿ ಮುದ್ದು ಮಾಡಿ ಏನು ಬೇಕಾದರೂ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರಿಗಿದೆ. ಆದರೆ ಮದುವೆಯ ನಂತರ ಅವರ ಸ್ವಭಾವದಲ್ಲಿ ಗಂಭೀರತೆ ಇರುತ್ತದೆ. ಹೊಸ ಸಂಬಂಧಗಳ ಪ್ರವೇಶದೊಂದಿಗೆ, ಹೊಸ ಜವಾಬ್ದಾರಿಗಳ ಹೊರೆ ತನ್ನ ಹೆಗಲ ಮೇಲೆ ಬಂದಿದೆ ಎಂದು ಅವಳು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾಳೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.