ಮಾರ್ಚ್ 4 ರಂದು ರೂಪುಗೊಳ್ಳುತ್ತಿದೆ ದುರ್ಲಬ ಯೋಗ, ಪ್ರೇಮ ವಿವಾಹಕ್ಕೆ ಅಡೆತಡೆಯಾಗುತ್ತಿದ್ದರೆ ಅಂದು ಈ ಕೆಲಸ ಮಾಡಿ..!

ಈ ಬಾರಿ ಫುಲೇರಾ ದೂಜ್ ಮಾರ್ಚ್ 04 ರ ಶುಕ್ರವಾರದಂದು ಬರಲಿದೆ. ಫುಲೇರ ದೂಜ್ ದಿನದಂದು ರಾಧಾ-ಕೃಷ್ಣರನ್ನು ಪೂಜಿಸಿದರೆ ಇಷ್ಟಾರ್ಥಗಳು ಸಿದ್ದಿಸುತ್ತದೆ ಎನ್ನುವುದು ನಂಬಿಕೆ.

Written by - Zee Kannada News Desk | Last Updated : Feb 26, 2022, 01:27 PM IST
  • ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ
  • ಪ್ರೇಮ-ವಿವಾಹಕ್ಕೆ ಇದ್ದ ಅಡೆತಡೆಗಳು ದೂರವಾಗುತ್ತವೆ
  • ರಾಧಾ-ಕೃಷ್ಣರ ಆಶೀರ್ವಾದ ಪಡೆಯಿರಿ
ಮಾರ್ಚ್ 4 ರಂದು ರೂಪುಗೊಳ್ಳುತ್ತಿದೆ ದುರ್ಲಬ ಯೋಗ,  ಪ್ರೇಮ ವಿವಾಹಕ್ಕೆ ಅಡೆತಡೆಯಾಗುತ್ತಿದ್ದರೆ  ಅಂದು ಈ ಕೆಲಸ ಮಾಡಿ..!   title=
ಪ್ರೇಮ-ವಿವಾಹಕ್ಕೆ ಇದ್ದ ಅಡೆತಡೆಗಳು ದೂರವಾಗುತ್ತವೆ (file photo)

ಬೆಂಗಳೂರು :  ಫಾಲ್ಗುಣ ಶುಕ್ಲ ಪಕ್ಷದ ಎರಡನೇ ದಿನದಂದು  ಫುಲೇರಾ ದೂಜ್ (Phulera Dooj 202) ಅನ್ನು ಆಚರಿಸಲಾಗುತ್ತದೆ. ಮಥುರಾದಲ್ಲಿ ಹೋಳಿ ಹಬ್ಬವು (Holi) ಫುಲೇರಾ ದೂಜ್‌ನೊಂದಿಗೆ ಪ್ರಾರಂಭವಾಗುತ್ತದೆ. ಇದಲ್ಲದೇ ಈ ದಿನ ಬ್ರಜ್‌ನಲ್ಲಿ ಶ್ರೀಕೃಷ್ಣನೊಂದಿಗೆ ಹೂಗಳಿಂದ ಹೋಳಿಯನ್ನು ಆಡಲಾಗುತ್ತದೆ. ಈ ಬಾರಿ ಫುಲೇರಾ ದೂಜ್ ಮಾರ್ಚ್ 04 ರ ಶುಕ್ರವಾರದಂದು ಬರಲಿದೆ. ಫುಲೇರ ದೂಜ್ ದಿನದಂದು ರಾಧಾ-ಕೃಷ್ಣರನ್ನು ಪೂಜಿಸಿದರೆ (Radha Krishna Pooja) ಇಷ್ಟಾರ್ಥಗಳು ಸಿದ್ದಿಸುತ್ತದೆ ಎನ್ನುವುದು ನಂಬಿಕೆ. ಈ ದಿನದಂದು ಕೆಲವು ವಿಶೇಷ ಕ್ರಮಗಳನ್ನು ಅನುಸರಿಸುವುದರಿಂದ  ವೈವಾಹಿಕ ಜೀವನ ಅಥವಾ ಪ್ರೇಮ-ವಿವಾಹದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತದೆ.

ಫುಲೇರಾ ದೂಜ್‌ ದಿನ ಏನು ಮಾಡಬೇಕು ? 
ಫುಲೇರಾ ದೂಜ್ ದಿನದಂದು (Phulera Dooj 202) ಸ್ನಾನ ಮಾಡಿದ ನಂತರ ರಾಧಾ-ಕೃಷ್ಣ ದೇವಸ್ಥಾನಕ್ಕೆ (Radha Krishna Temple) ಹೋಗಬೇಕು  ಅಲ್ಲಿ ರಾಧಾ-ಕೃಷ್ಣರಿಗೆ ಹಳದಿ ಹೂವುಗಳು, ಹಳದಿ ಸಿಹಿತಿಂಡಿಗಳು, ಹಳದಿ ಬಟ್ಟೆಗಳನ್ನು ಅರ್ಪಿಸಿಬೇಕು.  ಹೀಗೆ ಮಾಡುವುದರಿಂದ ಪ್ರೇಮ-ವಿವಾಹದಲ್ಲಿ ಎದುರಾಗುವ ಅಡೆತಡೆಗಳು ಅಥವಾ ವೈವಾಹಿಕ ಜೀವನದ ಸಮಸ್ಯೆಗಳು ದೂರವಾಗುತ್ತವೆ. 

ಇದನ್ನೂ ಓದಿ : Mahashivratri 2022: ಮಹಾಶಿವರಾತ್ರಿ ದಿನದಂದು ಈ ಸುಲಭ ಪರಿಹಾರ ಮಾಡಿದರೆ ಬಯಸಿದ್ದು ನೆರವೇರುತ್ತದೆ

ಯಾವುದೇ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದು, ಮನಸ್ಸಿನ ಭಾವನೆ ವ್ಯಕ್ತಪಡಿಸಲು ಸಾಧ್ಯವಾಗದೇ  ಹೋದರೆ, ಅದಕ್ಕೂ ಈ ದಿನ ಮಾಡಬಹುದಾದ ಪರಿಹಾರ ಕಾರ್ಯವನ್ನು ಸೂಚಿಸಲಾಗಿದೆ. ಫುಲೇರ ದೂಜ್ ದಿನದಂದು ಶ್ರೀ ಕೃಷ್ಣ (Lord Krishna) ದೇವಸ್ಥಾನಕ್ಕೆ ಹೋಗಿ,  ಅಲ್ಲಿ ತಾಳೆಗರಿ  ಮೇಲೆ ಹಳದಿ ಚಂದನದಿಂದ  ಆ ವ್ಯಕ್ತಿಯ  ಹೆಸರನ್ನು ಬರೆದು ರಾಧಾ-ಕೃಷ್ಣರ ಪಾದಗಳಿಗೆ ಅರ್ಪಿಸಿ ಪ್ರಾರ್ಥಿಸಿ. ಹೀಗೆ ಮಾಡುವುದರಿಂದ ನೀವು ಬಯಸುವ ಪ್ರೀತಿ ನಿಮಗೆ ಸಿಗುತ್ತದೆ ಎಂದು ಹೇಳಲಾಗುತ್ತದೆ. 

ಯಾವುದೇ ಕಾರಣದಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾದರೆ, ಅಥವಾ ಸಂಗಾತಿಯ ಮಧ್ಯೆ ಮನಸ್ತಾಪ ಮೂಡಿದ್ದರೆ,  ನಿಮ್ಮ ಸಮಸ್ಯೆಯನ್ನು ತಾಳೆಗರಿಯಲ್ಲಿ ಬರೆದು ರಾಧಾ-ಕೃಷ್ಣರ ಪಾದಗಳಿಗೆ ಅರ್ಪಿಸಿ. ಈ ರೀತಿ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಸೌಹಾರ್ದಯುತ ಸಂಬಂಧ ಮುಂದುವರೆಯುತ್ತದೆಯಂತೆ. 

ಇದನ್ನೂ ಓದಿ : ಮಂಗಳನ ರಾಶಿ ಪರಿವರ್ತನೆ ಈ ರಾಶಿಯವರಿಗೆ ವರದಾನವಾಗಲಿದೆ, ಇಂದಿನಿಂದ ಹೊಳೆಯಲಿದೆ ಅದೃಷ್ಟ

ಯಾವುದೋ ಕಾರಣದಿಂದ ಸಂಬಂಧ ಮುರಿದುಬಿದ್ದು ಮತ್ತೆ ಆ ಸಂಬಂಧದಲ್ಲಿ ಮಧುರತೆ ತರಬೇಕೆಂದರೆ ಫುಲೇರ ದೂಜ್ ದಿನದಂದು ರಾಧಾ-ಕೃಷ್ಣರ ವಿಶೇಷ ಪೂಜೆಯನ್ನು ಮಾಡಿ (Radha Krishna Pooja) . ರಾಧಾ-ಕೃಷ್ಣರಿಗೆ ಹೂವಿನ ಮಾಲೆಗಳನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಸಂಬಂಧ ಗಟ್ಟಿಯಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News