ನವದೆಹಲಿ: ಬಹುತೇಕ ಜನರು ತಮ್ಮ ಮಣಿಕಟ್ಟಿಗೆ ಅಥವಾ ಕಾಲಿಗೆ ಕಪ್ಪು ದಾರ(Black Thread)ವನ್ನು ಕಟ್ಟಿಕೊಳ್ಳುತ್ತಾರೆ. ಕೆಲವರು ಚೆನ್ನಾಗಿ ಕಾಣಲು ಅದನ್ನು ಧರಿಸುತ್ತಾರೆ. ಆದರೆ ಕೆಲವರು ತಮ್ಮ ಮೇಲೆ ಕೆಟ್ಟ ಕಣ್ಣು ಬೀಳಬಾರದು ಅಥವಾ ವಾಮಾಚಾರವನ್ನು ತಪ್ಪಿಸಲು ಬಳಸುತ್ತಾರೆ. ಕಪ್ಪು ಬಣ್ಣವು ದುಷ್ಟ ಕಣ್ಣು ಅಥವಾ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಎಂದು ಜ್ಯೋತಿಷಿಗಳು ನಂಬುತ್ತಾರೆ. ಯಾರಾದರೂ ಕೆಟ್ಟ ಕಣ್ಣುಗಳಿಂದ ನೋಡಿದರೆ, ಕೆಟ್ಟ ದೃಷ್ಟಿ ಬೀರಿದರೆ ಅದರಿಂದ ತಪ್ಪಿಸಿಕೊಳ್ಳಲು ಕಪ್ಪು ಬಣ್ಣವನ್ನು ಬಳಸುವುದು ಒಳ್ಳೆಯದು ಎಂದು ನಂಬಲಾಗಿದೆ.


COMMERCIAL BREAK
SCROLL TO CONTINUE READING

ಕಪ್ಪು ದಾರ(Black Thread Remedy)ವು ನೋಡುವವರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ ಎಂದು ನಂಬಲಾಗಿದೆ. ಇದರಿಂದ ವ್ಯಕ್ತಿಯು ಕೆಟ್ಟ ಪರಿಣಾಮಗಳಿಂದ ಪಾರಾಗುತ್ತಾನೆ. ಆದರೆ ಎಲ್ಲರೂ ಕಪ್ಪು ದಾರವನ್ನು ಧರಿಸಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2 ರಾಶಿಯ ಜನರು ಕಪ್ಪು ದಾರವನ್ನು ಧರಿಸಬಾರದು. ಇದರ ಮುಖ್ಯ ಕಾರಣವನ್ನು ತಿಳಿದುಕೊಳ್ಳಿರಿ.


ಇದನ್ನೂ ಓದಿ: ಸೂರ್ಯಾಸ್ತದ ನಂತರ ಮರೆತು ಕೂಡ ಈ ಕೆಲಸ ಮಾಡಬೇಡಿ, ಬೆನ್ನಟ್ಟಿ ಬರುತ್ತೆ ಬಡತನ!


ಮೇಷ ರಾಶಿ (Aries)


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಅಧಿಪತಿ ಮಂಗಳ. ಮಂಗಳ ದೇವನಿಗೆ ಕಪ್ಪು ಬಣ್ಣ ಇಷ್ಟವಿಲ್ಲ. ಹೀಗಾಗಿ ಈ ರಾಶಿಚಕ್ರದ ಜನರು ಕಪ್ಪು ದಾರ(Black Thread Benefits)ವನ್ನು ಕಟ್ಟಿದರೆ ಅವರು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಲ್ಲದೆ ಕಪ್ಪು ಬಣ್ಣದ ಬಳಕೆಯಿಂದ ಮನಸ್ಸಿನಲ್ಲಿ ಚಂಚಲತೆ, ವಿನಾಕಾರಣ ಖಿನ್ನರಾಗುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಮೇಷ ರಾಶಿಯವರು ಕಪ್ಪು ದಾರವನ್ನು ಧರಿಸಬಾರದು. ಮೇಷ ರಾಶಿಯವರಿಗೆ ಕೆಂಪು ಬಣ್ಣವನ್ನು ಬಳಸುವುದು ಶುಭ. 


ವೃಶ್ಚಿಕ ರಾಶಿ (Scorpio)


ವೃಶ್ಚಿಕ ರಾಶಿಯ ಆಡಳಿತ ಗ್ರಹವೂ ಮಂಗಳ. ಈ ರಾಶಿಯವರಿಗೆ ಕಪ್ಪು ಬಣ್ಣದ(Benefits Of Black Thread) ಬಳಕೆ ತುಂಬಾ ಅಶುಭ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯ ಜನರು ಕಪ್ಪು ದಾರವನ್ನು ಕಟ್ಟಿದರೆ ಮಂಗಳದೇವನಿಗೆ ಕೋಪ ಬರುತ್ತದೆ. ಇದು ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ವೃಶ್ಚಿಕ ರಾಶಿಯ ಜನರು ಕಪ್ಪು ಬಣ್ಣದಿಂದ ದೂರವಿರಬೇಕು. ವಾಸ್ತವವಾಗಿ ಕಪ್ಪು ದಾರವನ್ನು ಕಟ್ಟುವ ಮೂಲಕ ಮಂಗಳನ ಶುಭ ಪರಿಣಾಮವೂ ಕೊನೆಗೊಳ್ಳುತ್ತದೆ. ಇದರಿಂದ ಜೀವನದಲ್ಲಿ ಬಡತನ ಬರಲಾರಂಭಿಸುತ್ತದೆ. ವೃಶ್ಚಿಕ ರಾಶಿಯವರು ಕೆಂಪು ಬಣ್ಣದ ದಾರವನ್ನು ಧರಿಸುವುದು ಶುಭ.


ಇದನ್ನೂ ಓದಿ: ಬಹಳ ಅದ್ಭುತವಾಗಿದೆ ವ್ಯಾಪಾರ & ಉದ್ಯೋಗದಲ್ಲಿ ಪ್ರಗತಿ ಸಾಧಿಸುವ ‘ಕಾಳಿ ಗುಂಜ’ದ ಚಮತ್ಕಾರ!


ಯಾವ ರಾಶಿಯವರು ಕಪ್ಪು ದಾರವನ್ನು ಕಟ್ಟಬೇಕು?


ತುಲಾ ಮತ್ತು ಕುಂಭ ರಾಶಿಯವರಿಗೆ ಕಪ್ಪು ದಾರ(Remedies Of Black Thread)ವನ್ನು ಧರಿಸುವುದು ಶುಭ. ಏಕೆಂದರೆ ಶನಿಯು ಕುಂಭ ಮತ್ತು ತುಲಾ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ತುಲಾ ಮತ್ತು ಕುಂಭ ರಾಶಿಯವರಿಗೆ ಕಪ್ಪು ದಾರ ಕಟ್ಟುವುದರಿಂದ ಜೀವನದಲ್ಲಿ ಪ್ರಗತಿ ಕಂಡುಬರುತ್ತದೆ. ಅಲ್ಲದೆ ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಯಾವುದೇ ರೀತಿ ಎದುರಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.