Omicron Variant: ಆಯುರ್ವೇದಲ್ಲಿ ಹೇಳಿರುವ ಈ 5 ವಿಷಯಗಳು ಕೊರೊನಾದಿಂದ ರಕ್ಷಿಸುತ್ತವೆ, ಏನೆಂದು ತಿಳಿಯಿರಿ
ಆಯುರ್ವೇದದ ಪ್ರಕಾರ ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬಹುದು. ಇದು ಸೋಂಕಿಗೆ ಒಳಗಾಗಿದ್ದರೂ ಸಹ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ನವದೆಹಲಿ: ಹೆಚ್ಚುತ್ತಿರುವ ಕೊರೊನಾ(CoronaVirus) ಪ್ರಕರಣಗಳ ಮಧ್ಯೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಇದು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಆಯುರ್ವೇದದ ಪ್ರಕಾರ ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬಹುದು. ಇದು ಸೋಂಕಿಗೆ ಒಳಗಾಗಿದ್ದರೂ ಸಹ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಅರಿಶಿನ ಹಾಲು ಕುಡಿಯಿರಿ
ಗೋಲ್ಡನ್ ಮಿಲ್ಕ್ ಎಂದೇ ಖ್ಯಾತಿಯಾಗಿರುವ ಅರಿಶಿನದ ಹಾಲಿನ(Turmeric Milk) ಸೇವನೆಯಿಂದ ನಿಮಗೆ ಅನೇಕ ಆರೋಗ್ಯಕಾರಿ ಪ್ರಯೋಜನಗಳಿವೆ. ಅರಿಶಿನವು ಉತ್ತಮ ಗುಣಗಳನ್ನು ಹೊಂದಿದ್ದು, ಇದು ಗಾಯಗಳನ್ನು ತ್ವರಿತವಾಗಿ ವಾಸಿಮಾಡಲು ಕೆಲಸ ಮಾಡುತ್ತದೆ. ಅರಿಶಿನ ಹಾಲು ನಿಮಗೆ ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅರಿಶಿನದ ಹಾಲನ್ನು ನಿಯಮಿತವಾಗಿ ಕುಡಿಯುವುದರಿಂದ ಆಯಾಸ ಕಡಿಮೆಯಾಗುತ್ತದೆ ಮತ್ತು ಇದು ನೋಯುತ್ತಿರುವ ಗಂಟಲಿಗೆ ಪರಿಹಾರವನ್ನು ನೀಡುತ್ತದೆ. ಅರಿಶಿನವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಇದನ್ನೂ ಓದಿ: Omicronನಿಂದ ಶೀಘ್ರ ಚೇತರಿಸಿಕೊಂಡರೂ, ಒಂದು ವರ್ಷದವರೆಗೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ
ನಿತ್ಯ ಪ್ರಾಣಾಯಾಮ ಮಾಡಿ
ಶೀತ, ಜ್ವರ ಮತ್ತು ಕೋವಿಡ್(COVID-19)ನಂತಹ ರೋಗಗಳು ಉಸಿರಾಟದ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಶ್ವಾಸಕೋಶಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಮತ್ತು ಅವುಗಳ ಸಾಮರ್ಥ್ಯವನ್ನು ಹೆಚ್ಚಿಸಲು ಯೋಗ ಮಾಡಬೇಕು. ನೀವು ಪ್ರಾಣಾಯಾಮ, ಕಪಾಲಭಾತಿ ಅಥವಾ ಭಸ್ತ್ರಿಕಾ ಪ್ರಾಣಾಯಾಮವನ್ನು ಮಾಡಬಹುದು. ಪ್ರಾಣಾಯಾಮವು ಉಸಿರಾಟದ ವ್ಯವಸ್ಥೆಯನ್ನು ಸುಧಾರಿಸಲು ಕೆಲಸ ಮಾಡುತ್ತದೆ.
ಬಿಸಿನೀರಿನೊಂದಿಗೆ ಚ್ಯವನಪ್ರಾಶ್ ಸೇವಿಸಿ
ಚ್ಯವನಪ್ರಾಶ್ ಅನ್ನು ಬಿಸಿನೀರಿನೊಂದಿಗೆ ಸೇವಿಸುವುದರಿಂದ ನಿಮಗೆ ಪ್ರಯೋಜನವಾಗುತ್ತದೆ. ಚ್ಯವನಪ್ರಾಶ್(Chyawanprash)ಒಳಗೆ ಹಲವು ಬಗೆಯ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ಇದು ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಇದನ್ನು ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲಿನೊಂದಿಗೆ ಕೂಡ ಸೇವಿಸಬಹುದು.
ಇದನ್ನೂ ಓದಿ: Egg Benefits: ಚಳಿಗಾಲದಲ್ಲಿ ಈ ಕಾರಣಕ್ಕಾಗಿ ಮೊಟ್ಟೆಯ ಹಳದಿ ಲೋಳೆಯನ್ನು ತಿನ್ನಲೇಬೇಕು
ನಾಸ್ಯ ಚಿಕಿತ್ಸೆ
ತುಪ್ಪ, ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆಯ ಕೆಲವು ಹನಿಗಳನ್ನು ಮೂಗಿನಲ್ಲಿ ಹಾಕಿ. ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ. ಮೂಗಿಗೆ ಪ್ರವೇಶಿಸುವ ವೈರಸ್ ಗಳು ಮತ್ತು ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ನಾಸ್ಯ ಚಿಕಿತ್ಸೆ(Nasya therapy)ಯಿಂದ ತಡೆಯಬಹುದು. ನೀವು ಮನೆಯಿಂದ ಹೊರಡುವ ಮೊದಲು ಅಥವಾ ಸ್ನಾನ ಮಾಡುವ ಕೆಲವು ನಿಮಿಷಗಳ ಮೊದಲು ನಾಸ್ಯ ಚಿಕಿತ್ಸೆ ಮಾಡಿಕೊಳ್ಳಬಹುದು.
ಗಿಡಮೂಲಿಕೆಯ ಚಹಾ ಸೇವನೆ
ಗಿಡಮೂಲಿಕೆ ಚಹಾದ ಸೇವನೆಯು ನಿಮಗೆ ಅನೇಕ ಪ್ರಯೋಜನವನ್ನು ನೀಡುತ್ತದೆ. ಗಿಡಮೂಲಿಕೆ ಚಹಾ(Herbal Tea)ದಲ್ಲಿ ಉರಿಯೂತದ ಗುಣಲಕ್ಷಣಗಳು ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿವೆ. ಇದರ ಸೇವನೆಯು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಶೀತ-ಜ್ವರದಿಂದ ಪರಿಹಾರವನ್ನು ನೀಡುತ್ತದೆ. ಗಿಡಮೂಲಿಕೆ ಚಹಾದಲ್ಲಿ ತುಳಸಿ, ಲವಂಗ, ಶುಂಠಿ, ದಾಲ್ಚಿನ್ನಿ ಮುಂತಾದವುಗಳನ್ನು ಮಿಶ್ರಣ ಮಾಡಬೇಕು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇಉದನ್ನು ಅಳವಡಿಸಿಕೊಳ್ಳುವ ಮೊದಲು ಕಡ್ಡಾಯವಾಗಿ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.