ಕೇವಲ ಟೆನ್ಶನ್ ಮಾತ್ರ ಅಲ್ಲ ಈ ಕಾರಣಗಳಿಂದ ಕೂಡಾ ತಲೆ ಕೂದಲು ಬೆಳ್ಳಗಾಗುತ್ತದೆ
ಅನೇಕ ಕಾರಣಗಳಿಂದ ಕೂದಲು ಬೆಳ್ಳಗಾಗುತ್ತದೆ. ಬಿಳಿ ಕೂದಲಿನ ಸಮಸ್ಯೆಗೆ ಔಷಧಿ ಹಚ್ಚಲು ಮುಂದಾಗುವುದಕ್ಕಿಂತ ಮುನ್ನ ಯಾವ ಕಾರಣದಿಂದ ಕೂದಲು ಬೆಳ್ಳಗಾಗುತ್ತಿದೆ ಎನ್ನುವಿದನ್ನು ತಿಳಿದುಕೊಳ್ಳುವುದು ಮುಖ್ಯ.
ಬೆಂಗಳೂರು : 50 ವರ್ಷ ವಯಸ್ಸಿನ ಆಸುಪಾಸಿನಲ್ಲಿ ಕೂದಲು ಬೆಳ್ಳಗಾಗುವುದು ಸಾಮಾನ್ಯ. ಆದರೆ ಪ್ರಸ್ತುತ ಯುಗದಲ್ಲಿ 20 ರಿಂದ 25 ವರ್ಷ ವಯಸ್ಸಿನ ಯುವಕರು ಕೂಡಾ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲು ಬೆಲ್ಲಗಾಗುವುದಕ್ಕೆ ನಾನಾ ಕಾರಣಗಳಿವೆ. ಅದರಲ್ಲೂ ತೆನ್ಸಿಒನ ಕೂದಲು ಬೆಳ್ಳಗಾಗಲು ಪ್ರಮುಖ ಕಾರಣ ಎಂದು ಹೇಳಲಾಗುತ್ತದೆ. ಈ ಮಾತು ಸ್ವಲ್ಪ ಮಟ್ಟಿಗೆ ನಿಜವಾಗಿರಬಹುದು. ಆದರೆ ಇದಕ್ಕೆ ಹೊರತಾಗಿ ಅನೇಕ ಕಾರಣಗಳಿಂದ ಕೂದಲು ಬೆಳ್ಳಗಾಗುತ್ತದೆ. ಬಿಳಿ ಕೂದಲಿನ ಸಮಸ್ಯೆಗೆ ಔಷಧಿ ಹಚ್ಚಲು ಮುಂದಾಗುವುದಕ್ಕಿಂತ ಮುನ್ನ ಯಾವ ಕಾರಣದಿಂದ ಕೂದಲು ಬೆಳ್ಳಗಾಗುತ್ತಿದೆ ಎನ್ನುವಿದನ್ನು ತಿಳಿದುಕೊಳ್ಳುವುದು ಮುಖ್ಯ.
ನಿಮ್ಮ ಕೂದಲಿನ ಬಣ್ಣವನ್ನು ಹೇಗೆ ನಿರ್ಧರಿಸಲಾಗುತ್ತದೆ?
ದೇಹದಲ್ಲಿರುವ ಮೆಲನಿನ್ ಎಂಬ ನೈಸರ್ಗಿಕ ವರ್ಣದ್ರವ್ಯದ ಮೂಲಕ ಕೂದಲು ತನ್ನ ಬಣ್ಣವನ್ನು ಪಡೆಯುತ್ತದೆ. ಮೆಲನೋಸೈಟ್‌ಗಳಿಂದ ಮೆಲನಿನ್ ಉತ್ಪಾದನೆಯಾಗುತ್ತದೆ. ಇದು ಚರ್ಮದ ಮೇಲ್ಮೈಯಲ್ಲಿರುವ ವಿಶೇಷ ವರ್ಣದ್ರವ್ಯ ಕೋಶಗಳಾಗಿವೆ. ಅದರ ಮೂಲಕ ಕೂದಲಿನ ಬೆಳವಣಿಗೆ ಸಂಭವಿಸುತ್ತದೆ.
ಇದನ್ನೂ ಓದಿ : ಜನ್ಮಾಷ್ಟಮಿಗೂ ಮುನ್ನ ಈ ನಾಲ್ಕು ರಾಶಿಯವರ ಮೇಲೆ ಸೂರ್ಯ ದೇವ ಹರಿಸಲಿದ್ದಾನೆ ಕೃಪಾ ಕಟಾಕ್ಷ
ಮಾನವನ ಕೂದಲಿನ ಫಾಲಿಕ್ಸ್ ಎರಡು ವಿಧದ ಮೆಲನಿನ್‌ಗಳಲ್ಲಿ ಒಂದನ್ನು ಒಳಗೊಂಡಿರಬಹುದು. ಅದರಲ್ಲಿ ಯುಮೆಲನಿನ್ ಗಾಢ-ಕಂದು ವರ್ಣದ್ರವ್ಯವನ್ನು ಒಳಗೊಂಡಿರುತ್ತದೆ. ಇದು ಮುಖ್ಯವಾಗಿ ಕಪ್ಪು ಮತ್ತು ಕಂದು ಬಣ್ಣದ ಕೂದಲಿನಲ್ಲಿ ಕಂಡುಬರುತ್ತದೆ ಮತ್ತು ಹಳದಿ ಅಥವಾ ಹೊಂಬಣ್ಣದ ಕೂದಲಿನಲ್ಲಿರುವ ಫೋಮೆಲನಿನ್ ಎಂಬ ಕೆಂಪು ವರ್ಣದ್ರವ್ಯವಾಗಿದೆ.
ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಬರಲು ಕಾರಣಗಳು :
-ಆನುವಂಶಿಕ ಕಾರಣ
-ವಿಟಮಿನ್ ಬಿ12 ಕೊರತೆ
- ರಕ್ತಹೀನತೆ
-ಕ್ವಾಶಿಯೋರ್ಕರ್‌ನಿಂದ ಪ್ರೋಟೀನ್ ನಷ್ಟ
-ಕಬ್ಬಿಣ ಮತ್ತು ತಾಮ್ರದ ಕೊರತೆ
-ಹೈಪೋಥೈರಾಯ್ಡಿಸಮ್
-ಔಷಧಿಯುಕ್ತ ಹೇರ್ ಆಯಿಲ್ ಬಳಕೆ
-ಕೂದಲಿಗೆ ರಾಸಾಯನಿಕಯುಕ್ತ ಉತ್ಪನ್ನಗಳ ಬಳಕೆ
-ಡೌನ್ ಸಿಂಡ್ರೋಮ್
-ವೆರ್ನರ್ ಅಯಾನ್ ಸಿಂಡ್ರೋಮ್
- ಔಷಧಗಳ ಪರಿಣಾಮ
ಇದನ್ನೂ ಓದಿ : ಮನೆಯ ಭಾಗ್ಯವನ್ನು ಕೂಡಾ ದೌರ್ಭಾಗ್ಯವಾಗಿ ಬದಲಾಯಿಸಿ ಬಿಡುತ್ತವೆ ಸುತ್ತ ಇರುವ ಈ ಮರ ಗಿಡ ಗಳು
ನೀವು ಬಿಳಿ ಕೂದಲಿನ ಸಮಸ್ಯೆಯನ್ನು ತಪ್ಪಿಸಲು ಬಯಸಿದರೆ, ದೇಹದಲ್ಲಿ ಮೇಲೆ ತಿಳಿಸಿದ ಸಮಸ್ಯೆ ಇದೆಯೇ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಒಂದು ವೇಳೆ ಹೌದು ಎಂದಾದರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ಕಾರಣ ತಿಳಿದುಕೊಳ್ಳಲು ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.