ಬೆಂಗಳೂರು:  ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ನಿದ್ರೆ ಬಹಳ ಮುಖ್ಯ. ಬಹುತೇಕ ಸಮಯದಲ್ಲಿ ನಾವು ನಿದ್ರೆ ಮಾಡುವಾಗ ಒಂದು ಹಂತದಲ್ಲಿ ಕನಸು ಬೀಳುವುದು ಸಹಜವಾಗಿದೆ. ಕೆಲವು ಮನಸ್ಸಿಗೆ ಮುದ ನೀಡುವ ಕನಸಾಗಿದ್ದರೆ, ಕೆಲವು ಆತಂಕ ಹೆಚ್ಚಿಸುವ ಕನಸೂ ಆಗಿರಬಹುದು. ಹಲವು ಬಾರಿ ಕನಸ್ಸಿನಲ್ಲಿ ಕೆಲವು ವಸ್ತುಗಳನ್ನು  ಕಂಡರೆ ಇನ್ನೂ ಕೆಲವು ಬಾರಿ ಕೆಲವು ಘಟನೆಗಳು ಕಣ್ಣ ಮುಂದೆ ಹಾದು ಹೋದಂತೆ ಭಾಸವಾಗುತ್ತದೆ. ಸ್ವಪ್ನಾ ಶಾಸ್ತ್ರದ (Swapna Shastra)  ಪ್ರಕಾರ, ಪ್ರತಿ ಕನಸಿನಲ್ಲಿ ಕೆಲವು ಚಿಹ್ನೆಗಳು ಅಡಗಿವೆ, ಇದು ಮುಂಬರುವ ಘಟನೆಗಳನ್ನು ಸೂಚಿಸುತ್ತದೆ. ಸಪ್ನಾ ಶಾಸ್ತ್ರದಲ್ಲಿ, ಪ್ರತಿ ಕನಸಿಗೆ ಸಂಬಂಧಿಸಿದ ಅರ್ಥವನ್ನು ಹೇಳಲಾಗಿದೆ. ಇದರಲ್ಲಿ ಹಣದ ಲಾಭ, ಯಶಸ್ಸಿನಂತಹ ಶುಭ ಘಟನೆಗಳನ್ನು ಸೂಚಿಸುವ ಇಂತಹ ಶುಭ ಕನಸುಗಳ  (Auspicious Dreams) ಬಗ್ಗೆಯೂ ತಿಳಿಸಲಾಗಿದೆ.


COMMERCIAL BREAK
SCROLL TO CONTINUE READING

ಒಳ್ಳೆಯ ಕನಸುಗಳು (Auspicious Dreams)​ :
ಕನಸಿನಲ್ಲಿ ಕುದುರೆಯನ್ನು ನೋಡುವುದು:
ಕನಸ್ಸಿನಲ್ಲಿ ನೀವು ಕುದುರೆ ಸವಾರಿ ಮಾಡುವುದನ್ನು ನೋಡಿದ್ರೆ ನಿಮ್ಮ ಮುಂಬರುವ ಜೀವನವು ತುಂಬಾ ಸಂತೋಷವಾಗುತ್ತದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಕುದುರೆ ವೇಗವಾಗಿ ಓಡುವುದನ್ನು ಕಂಡರೆ ನೀವು ಕೆಲವು ಪ್ರಮುಖ ಕೆಲಸಗಳಲ್ಲಿ ಸುಲಭವಾಗಿ ಯಶಸ್ಸನ್ನು ಪಡೆಯಲಿದ್ದೀರಿ ಎಂದರ್ಥ.


ಹಾವನ್ನು ನೋಡುವುದು: ಕನಸ್ಸಿನಲ್ಲಿ ಹಾವನ್ನು ಕಂಡರೆ ಇದು ಶೀಘ್ರದಲ್ಲೇ ಹಠಾತ್ ಹಣವನ್ನು (Money Profit) ಪಡೆಯುವುದನ್ನು ಸೂಚಿಸುತ್ತದೆ.


ಇದನ್ನೂ ಓದಿ-  Swapna Shastra: ಬೆಳಗಿನ ಜಾವ ಈ 10 ಕನಸುಗಳು ಬಿದ್ದರೆ, ಅಪಾರ ಸಂಪತ್ತು ನಿಮ್ಮದಾಗುತ್ತೆ


ಕನಸಿನಲ್ಲಿ ಹೊಸ ಬಟ್ಟೆಗಳನ್ನು ಧರಿಸುವುದು: ಅಂತಹ ಕನಸು ಉತ್ತಮ (Auspicious Dreams) ಭವಿಷ್ಯವನ್ನು ಸೂಚಿಸುತ್ತದೆ, ಇದರಲ್ಲಿ ಸಂತೋಷ ಮತ್ತು ಸಮೃದ್ಧಿ ಎರಡೂ ಕಂಡುಬರುತ್ತವೆ.


ಮರ ಹತ್ತುವುದು- ಕನಸ್ಸಿನಲ್ಲಿ ನೀವು ಮರ ಹತ್ತುತ್ತಿರುವುದನ್ನು  ಕಂಡರೆ ಅನಿರೀಕ್ಷಿತ ಮೂಲಗಳಿಂದ ಧನಪ್ರಾಪ್ತಿಯಾಗುವ ಸಂಕೇತವಿದು.


ಮಹಿಳೆಯ ನೃತ್ಯ: ಕನಸ್ಸಿನಲ್ಲಿ ಮಹಿಳೆ ನೃತ್ಯ ಮಾಡುವುದನ್ನು ಕಂಡರೆ ಇದು ಹಣದ ಲಾಭವನ್ನೂ ಸೂಚಿಸುತ್ತದೆ.


ನೀರನ್ನು ಕುಡಿಯುವುದು ಅಥವಾ ನೀರಿನ ಮೇಲೆ ನಡೆಯುವುದು: ಕನಸ್ಸಿನಲ್ಲಿ ನೀರು ಕುಡಿಯುವ ದೃಶ್ಯವನ್ನು ಕಂಡರೆ  ನಿಮ್ಮ ಹಳೆಯ ಬಾಕಿ ಹಣವನ್ನು ಹಿಂತಿರುಸುವಿರಿ. ಒಂದರ್ಥದಲ್ಲಿ ಸಾಲ ತೀರಿಸುವಿರಿ. ಅದೇ ಸಮಯದಲ್ಲಿ, ಸ್ವತಃ ನೀರಿನ ಮೇಲೆ ನಡೆಯುವುದನ್ನು ನೋಡುವುದರಿಂದ ಉತ್ತಮ ಯಶಸ್ಸಿನ ಅಥವಾ ಸ್ಥಾನವನ್ನು ಸಾಧಿಸುವ ಬಲವಾದ ಯೋಗದ ಸಂಕೇತವಾಗಿರಬಹುದು.


ಇದನ್ನೂ ಓದಿ- Dreams related with Money: ಈ ವಸ್ತುಗಳು ಕನಸಲ್ಲಿ ಬಂದರೆ ಭಾರೀ ಧನ ಲಾಭದ ಮುನ್ಸೂಚನೆ
 
ಕನಸಿನಲ್ಲಿ ಜೇನುಗೂಡು:
ಕನಸ್ಸಿನಲ್ಲಿ ಜೇನುಗೂಡನ್ನು ನೋಡುವುದು ಕೂಡಾ ಆಕಸ್ಮಿಕ ಧನಪ್ರಾಪ್ತಿ ಆಗುವುದನ್ನು ಸೂಚಿಸುತ್ತದೆ.


ಕನಸಿನಲ್ಲಿ ದೇವತೆಯನ್ನು ನೋಡುವುದು: ಕನಸ್ಸಿನಲ್ಲಿ ದೇವತೆಯನ್ನು ಕಾಣುವುದನ್ನು ತುಂಬಾ ಶುಭ ಎಂದು ಹೇಳಲಾಗುತ್ತದೆ.  ಇದು ಅಪಾರ ಸಂಪತ್ತಿನ ಜೊತೆಗೆ ಸಂತೋಷವನ್ನು ಪಡೆಯುವ ಸಂಕೇತವಾಗಿದೆ.


ಕನಸಿನಲ್ಲಿ ದೀಪವನ್ನು ನೋಡುವುದು: ಕನಸ್ಸಿನಲ್ಲಿ ದೀಪ ಉರಿಯುತ್ತಿರುವುದನ್ನು ಕಂಡರೆ ಇದು ಕೆಲವು ದೊಡ್ಡ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವ ಸಂಕೇತವಾಗಿದೆ. ಈ ಕನಸನ್ನು ಅನೇಕ ವಿಷಯಗಳಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ.

ಗಮನಿಸಿ: ಈ ಲೇಖನದಲ್ಲಿನ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.