ನವದೆಹಲಿ: ನಿಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳು ಇರಬಹುದು. ಅವುಗಳಿಂದ ಹೊರಬರಲು ನೀವು ನಿರಂತರವಾಗಿ ಪ್ರಯತ್ನಿಸಿದರೂ ಪ್ರಯೋಜನವಾಗಿರುವುದಿಲ್ಲ. ಸಮಸ್ಯೆಗಳೇ ಹಾಗೆ, ಒಂದರ ಮೇಲೊಂದರಂತೆ ಬಂದು ನಮ್ಮ ಸುಂದರ ಜೀವನಕ್ಕೆ ತೊಂದರೆಯನ್ನುಂಟು ಮಾಡುತ್ತವೆ. ಈ ಸಮಸ್ಯೆಗಳಿಂದ ಹೊರಬರಲು ಇಲ್ಲಿ ಕೆಲವು ಸುಲಭ ಸಲಹೆಗಳಿವೆ. ಈ ಸಲಹೆಗಳು ಫೆಂಗ್ ಶೂಯಿ(Feng Shui Tips)ಗೆ ಸಂಬಂಧಿಸಿವೆ. ಫೆಂಗ್ ಶೂಯಿಯಲ್ಲಿರುವ ಅನೇಕ ಸಲಹೆಗಳು ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸಿದರೆ ನಿಮ್ಮ ಜೀವನವು ಮತ್ತಷ್ಟು ಉತ್ತಮವಾಗಿರುತ್ತದೆ.    


COMMERCIAL BREAK
SCROLL TO CONTINUE READING

ಫೆಂಗ್ ಶೂಯಿ ಎಂದರೇನು..?


ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಚೈನೀಸ್ ವಾಸ್ತುಶಾಸ್ತ್ರ(Chinese Vastu Shastra) ಫೆಂಗ್ ಶೂಯಿಯ ವಸ್ತುಗಳನ್ನು ಮನೆಯಲ್ಲಿಡುವ ಪ್ರವೃತ್ತಿ ಕ್ರಮೇಣ ಹೆಚ್ಚುತ್ತಿದೆ. ಫೆಂಗ್ ಶೂಯಿ ಎರಡು ಪದಗಳಿಂದ ಮಾಡಲ್ಪಟ್ಟಿದೆ. ಫೆಂಗ್ ಎಂದರೆ ಗಾಳಿ ಮತ್ತು ಶುಯಿ ಎಂದರೆ ನೀರು. ಫೆಂಗ್ ಶೂಯಿ ನೀರು ಮತ್ತು ಗಾಳಿಯನ್ನು ಆಧರಿಸಿದೆ. ಫೆಂಗ್ ಶೂಯಿಯ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಮನೆಯಲ್ಲಿನ ವಾಸ್ತು ದೋಷಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರಲು ಅನೇಕ ರೀತಿಯ ಫೆಂಗ್ ಶೂಯಿ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದು ಮನೆಯಲ್ಲಿ ಮಂಗಳಕರ ಫಲಿತಾಂಶಗಳನ್ನು ತರುತ್ತದೆ. ನೀವು ಈ ಫೆಂಗ್ ಶೂಯಿ ಸಲಹೆ(Feng Shui Vastu Tips)ಗಳನ್ನು ಅನುಸರಿಸುವ ಮೂಲಕ ನಿಮ್ಮ ಸಮಸ್ಯಗಳಿಂದ ಹೊರಬಂದು ಸುಂದರ ಜೀವನ ನಡೆಸಬಹುದು.


ಇದನ್ನೂ ಓದಿ: Benefits Of Rice: ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅನ್ನ


ಈ ಸಲಹೆಗಳನ್ನು ಅನುಸರಿಸಿ


1) ಫೆಂಗ್ ಶೂಯಿ(Feng Shui) ಪ್ರಕಾರ ನಿಮ್ಮ ಜೀವನದಲ್ಲಿ ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ನೀವು ಮನೆಗೆ ಲಾಫಿಂಗ್ ಬುದ್ಧನನ್ನು ತರಬೇಕು. ಕೈಗಳು ಮೇಲಕ್ಕೆ ನಿಂತಿರುವ ನಗುವ ಬುದ್ಧನ ಮೂರ್ತಿಯನ್ನು ತಂದು ಮನೆಯಲ್ಲಿ ಪ್ರತಿಷ್ಠಾಪಿಸಬೇಕು.   


2) ಅದೃಷ್ಟವು ನಿಮ್ಮನ್ನು ಬೆಂಬಲಿಸದಿದ್ದರೆ, ಕಚೇರಿ ಮತ್ತು ವ್ಯವಹಾರದಲ್ಲಿ ನಷ್ಟ ಅಥವಾ ಕಷ್ಟಗಳು ಹೆಚ್ಚಾಗುತ್ತಿದ್ದರೆ ನೀವು ನಗುವ ಬುದ್ಧನ ಮಲಗಿರುವ ಭಂಗಿಯ ಪ್ರತಿಮೆ(Lying posture statue of Laughing Buddha)ಯನ್ನು ತರಬೇಕು. ಇದರಿಂದ ನಿಮ್ಮ ದುರಾದೃಷ್ಟವು ಅದೃಷ್ಟವಾಗಿ ಬದಲಾಗುತ್ತದೆ.


3) ನಿಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಅಥವಾ ಯಾರಾದರೂ ಆಗಾಗ ಅನಾರೋಗ್ಯದಿಂದ ಬಳಲುತ್ತಿದ್ದರೆ ಇದಕ್ಕೂ ಸಹ ಫೆಂಗ್ ಶೂಯಿಯಲ್ಲಿ ಪರಿಹಾರವಿದೆ. ಫೆಂಗ್ ಶೂಯಿ ಪ್ರಕಾರ ಇಂತಹ ಜನರು ದೋಣಿಯಲ್ಲಿ ಕುಳಿತಿರುವ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ತಮ್ಮ ಮನೆಯಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಮನೆಯಲ್ಲಿನ ಸಮಸ್ಯೆಗಳು ಸಹ ದೂರವಾಗುತ್ತವೆ.


ಇದನ್ನೂ ಓದಿ: Kartik Month 2021 : ಧನ ಪ್ರಾಪ್ತಿ, ಸಮೃದ್ದಿಯಾಗಬೇಕಾದರೆ ಕಾರ್ತಿಕ ಮಾಸದಲ್ಲಿ ಈ ತಪ್ಪುಗಳಾಗದಂತೆ ನೋಡಿಕೊಳ್ಳಿ


(ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. Zee News ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ