Foods To Reduce Knee Pain: ಈ ಐದು ವಸ್ತುಗಳ ಸೇವನೆಯಿಂದ ಸಿಗುತ್ತದೆ ಮಂಡಿ ನೋವಿನಿಂದ ಮುಕ್ತಿ
Foods To Reduce Knee Pain: ಮೊಣಕಾಲು ಅಥವಾ ಮಂಡಿ ನೋವು ಒಮ್ಮೆ ಕಾಣಿಸಿಕೊಂಡರೆ ಬಹಳಷ್ಟು ತೊಂದರೆ ನೀಡುತ್ತದೆ. ಒಮ್ಮೆ ಮಂಡಿ ನೋವು ಕಾಣಿಸಿಕೊಂಡರೆ ಉಸಿರುಗಟ್ಟುವ ಪರಿಸ್ಥಿತಿ ಇರುತ್ತದೆ. ಹೀಗಾದಾಗ ಕೆಲವೊಂದು ವಸ್ತುಗಳನ್ನು ತಿನ್ನುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಾಯವಾಗುತ್ತದೆ.
ಬೆಂಗಳೂರು : Foods To Reduce Knee Pain : ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೂ ಮಂಡಿ ನೋವು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ವರ್ಷ 40 ಆಯಿತು ಎಂದಾದರೆ ಮಂಡಿ ನೋವು ಬಹಳ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ಗಾಯದಿಂದಾಗಿ, ಮೊಣಕಾಲುಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಇನ್ನು ನಾವು ಸೇವಿಸುವ ಆಹಾರದಲ್ಲಿ ಪೋಷಕಾಂಶಗಳ ಕೊರತೆಯಿದ್ದರೂ ಮಂಡಿ ನೋವಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ನಿತ್ಯವೂ ಆರೋಗ್ಯಕರ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯವಾಗಿದೆ.
ಮಂಡಿ ನೋವು ಕಾಣಿಸಿಕೊಳ್ಳುವುದಕ್ಕೆ ಏನು ಕಾರಣ ?
ದೇಹದಲ್ಲಿ ಕ್ಯಾಲ್ಸಿಯಂ ಅಥವಾ ಪ್ರೋಟೀನ್ ಕೊರತೆಯಾದರು ಕೂಡಾ, ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ರೀತಿಯ ನೋವಿನಿಂದಾಗಿ ಊತ ಕೂಡ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಈ ರೀತಿ ಮಂಡಿ ನೋವು ಕಾಣಿಸಿಕೊಳ್ಳುತ್ತಿದ್ದಾರೆ ಅದಕ್ಕೆ ಪರಿಹಾರ ಏನು ?
ಇದನ್ನೂ ಓದಿ : ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ತಿಂದರೆ ಸಿಗುತ್ತೆ ಅದ್ಭುತ ಪ್ರಯೋಜನ
ಮಂಡಿ ನೋವು ಕಡಿಮೆಯಾಗಲು ಈ ಆಹಾರಗಳನ್ನು ಸೇವಿಸಿ
1.ಹಸಿರು ಸೊಪ್ಪು - ತರಕಾರಿ :
ಹಸಿರು ಎಲೆಗಳ ತರಕಾರಿಗಳು ಎಲೆಕೋಸು ಮತ್ತು ಕೋಸುಗಡ್ಡೆಯಂತಹ ಹಸಿರು ಎಲೆಗಳ ತರಕಾರಿಗಳನ್ನು ತಿನ್ನುವುದರಿಂದ ದೇಹದಲ್ಲಿ ಊತ ಕಾಣಿಸಿಕೊಳ್ಳಲು ಸಹಾಯವಾಗುವ ಕಿಣ್ವಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಈ ಕಾರಣದಿಂದಾಗಿ ದೈನಂದಿನ ಆಹಾರದಲ್ಲಿ ಈ ತರಕಾರಿಗಳನ್ನು ತೆಗೆದುಕೊಂಡರೆ, ಮೂಳೆಗಳು ಬಲವಾಗಿರುತ್ತವೆ.
2. ಡ್ರೈ ಫ್ರುಟ್ಸ್ :
ಡ್ರೈ ಫ್ರುಟ್ಸ್ ಸೇವನೆಯಿಂದ ದೇಹಕ್ಕೆ ವಿಟಮಿನ್ ಗಳು ಮತ್ತು ಪ್ರೋಟೀನ್ ಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇದರಿಂದ ಮೂಳೆಗಳನ್ನು ಬಲಪಡಿಸಲು ಸಹಾಯವಾಗುತ್ತದೆ. ಡ್ರೈ ಫ್ರುಟ್ಸ್ ಸೇವನೆಯಿಂದ ಮಂಡಿ ನೋವಿನ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.
3. ಶುಂಠಿ ಮತ್ತು ಅರಿಶಿನ ಸೇವನೆ :
ಶುಂಠಿ ಮತ್ತು ಅರಿಶಿನ ಆಂಟಿ ಇಂಫ್ಲಮೆಟರಿ ಗುಣಗಳನ್ನು ಹೊಂದಿದೆ. ಶುಂಠಿ ಮತ್ತು ಅರಿಶಿನವನ್ನು ಶತಮಾನಗಳಿಂದ ಔಷಧವಾಗಿ ಬಳಸಲಾಗುತ್ತಿದೆ. ಮಂಡಿ ನೋವಿನಿಂದ ಬಳಲುವವರು ಖಂಡಿತವಾಗಿಯೂ ಈ ಎರಡು ವಸ್ತುಗಳನ್ನು ತಮ್ಮ ಆಹಾರದಲ್ಲಿ ಸೇರಿಸಿ. ಶುಂಠಿ ಮತ್ತು ಅರಿಶಿನದ ಕಷಾಯವನ್ನು ಕುಡಿದರೂ ಉತ್ತಮ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : ಸೌತೆಕಾಯಿಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು: ಇದು ದೇಹಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ?
4. ಹಣ್ಣುಗಳು :
ಕೆಲವು ಹಣ್ಣುಗಳನ್ನು ತಿನ್ನುವುದರಿಂದ ಮಂಡಿ ನೋವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇವುಗಳಲ್ಲಿ ಕಿತ್ತಳೆ, ಸ್ಟ್ರಾಬೆರಿ ಮತ್ತು ಚೆರಿ ಹಣ್ಣುಗಳು ಸೇರಿವೆ. ಈ ಹಣ್ಣುಗಳಲ್ಲಿ ವಿಟಮಿನ್ ಸಿ ಮತ್ತು ಲೈಕೋಪೀನ್ ನಂತಹ ಪೋಷಕಾಂಶಗಳಿವೆ. ಇದು ಮೂಳೆಗಳ ಊತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
5. ಹಾಲು :
ಹಾಲು ಮತ್ತು ಎಲ್ಲಾ ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಇದು ಮೂಳೆಗಳ ಬಲಕ್ಕೆ ಪ್ರಯೋಜನಕಾರಿಯಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.