ಖಾಲಿ ಹೊಟ್ಟೆಗೆ ಈ ಹಣ್ಣುಗಳನ್ನು ಸೇವಿಸುವುದು ಅಪಾಯಕಾರಿ..!

Empty Stomach Eat Fruits Disadvantages:  ನೀವು ಖಾಲಿ ಹೊಟ್ಟೆಗೆ ಉಪಾಹಾರದಲ್ಲಿ ಹಣ್ಣುಗಳನ್ನು ತಿನ್ನುತ್ತಿದ್ದರೆ, ಮೊದಲು ಇದನ್ನು ಓದಿ. ಕೆಲವೊಂದು ಹಣ್ಣುಗಳನ್ನು ಖಾಲಿ ಹೊಟ್ಟೆಗೆ ತಿನ್ನಬಾರದು. ಆ ಹಣ್ಣುಗಳು ಯಾವುವು? ಮತ್ತು  ಏಕೆ ತಿನ್ನಬಾರದು ಎಂದು ತಿಳಿಯೋಣ.  

Written by - Ranjitha R K | Last Updated : Apr 16, 2022, 11:52 AM IST
  • ಖಾಲಿ ಹೊಟ್ಟೆಗೆ ಕೆಲವು ಹಣ್ಣುಗಳನ್ನು ತಿನ್ನಬಾರದು
  • ಆರೋಗ್ಯ ಲಾಭಕ್ಕಿಂತ ನಷ್ಟವೇ ಹೆಚ್ಚು
  • ಹಣ್ಣು ತಿನ್ನಲು ಸರಿಯಾದ ಸಮಯ ಯಾವುದು ನೋಡೋಣ
ಖಾಲಿ ಹೊಟ್ಟೆಗೆ ಈ ಹಣ್ಣುಗಳನ್ನು ಸೇವಿಸುವುದು ಅಪಾಯಕಾರಿ..!  title=
fruits on empty stomach (file photo)

ಬೆಂಗಳೂರು : Empty Stomach Eat Fruits Disadvantages:  ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಹಣ್ಣುಗಳು ಅನೇಕ ಕಾಯಿಲೆಗಳಿಂದ ನಮ್ಮನ್ನು ದೂರವಿಡಲು ಸಹಕಾರಿ. ನೀವು ಬೆಳಗಿನ ಉಪಾಹಾರದಲ್ಲಿ ಖಾಲಿ ಹೊಟ್ಟೆಗೆ ಹಣ್ಣುಗಳನ್ನು ಸೇವಿಸಿದರೆ ಅಪಾಯ  ತಪ್ಪಿದ್ದಲ್ಲ. ಆರೋಗ್ಯ ಲಾಭದ ಬದಲು ನಷ್ಟ ಉಂಟಾಗುತ್ತದೆ. ಏಕೆಂದರೆ ಬೆಳಿಗ್ಗೆ ಕೆಲವು ಹಣ್ಣುಗಳನ್ನು ತಿನ್ನುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಏಕೆ ತಿನ್ನಬಾರದು ಮತ್ತು ಅದನ್ನು ತಿನ್ನಲು ಸರಿಯಾದ ಸಮಯ ಯಾವುದು ಎಂದು ತಿಳಿಯೋಣ.  

ಶೀತ, ಕಫ  ಕಾರಕ : 
ಬೆಳಿಗ್ಗೆ ಹವಾಮಾನ ಶೀತ, ತೇವ ಮತ್ತು ಆರ್ದ್ರವಾಗಿರುತ್ತದೆ .  ಹಣ್ಣುಗಳು ಸಹ ಶೀತ ಮತ್ತು ತೇವವಾಗಿರುತ್ತದೆ. ಅಂತಹ ಸನ್ನಿವೇಶದಲ್ಲಿ, ನೀವು ಬೆಳಿಗ್ಗೆ ಹಣ್ಣುಗಳನ್ನು ಸೇವಿಸಿದರೆ, ಇದು ನಿಮ್ಮ ದೇಹದಲ್ಲಿ ಕಫಕ್ಕೆ  ಕಾರಣವಾಗುತ್ತದೆ.  ಇದರಿಂದಾಗಿ ನಿಮ್ಮ ಆರೋಗ್ಯವು ಹದಗೆಡಬಹುದು.

ಇದನ್ನೂ ಓದಿ : ಪ್ರತಿದಿನ 10 ಗ್ರಾಂ ಫೈಬರ್ ತಿನ್ನಿ, Belly Fat ಕಡಿಮೆಮಾಡಿಕೊಳ್ಳಿ : ಹೇಗೆ ಇಲ್ಲಿದೆ

ಬೆಳಿಗ್ಗೆ ಹಣ್ಣುಗಳು ಜೀರ್ಣವಾಗುವುದಿಲ್ಲ :
ಇದಲ್ಲದೇ ಸೂರ್ಯನ ತಾಪ ಮುಂಜಾನೆ ತುಂಬಾ ಕಡಿಮೆ ಇರುತ್ತದೆ. ಸೂರ್ಯನ ತಾಪ ಹೆಚ್ಚಾದಂತೆ ನಮ್ಮ ಜೀರ್ಣ ಕ್ರಿಯೆ ಕೂಡಾ ತೀವ್ರಗೊಳ್ಳುತ್ತದೆ. ಈ ಕಾರಣದಿಂದಾಗಿ ನಾವು ದಿನದಲ್ಲಿ ಏನು ತಿಂದರೂ ಅದು ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಮುಂಜಾನೆ ಹೊತ್ತಲ್ಲಿ ಹಣ್ಣು ತಿಂದರೆ ಅದು  ಜೀರ್ಣವಾಗುವುದಿಲ್ಲ. 

ಹಣ್ಣು ತಿನ್ನಲು ಸರಿಯಾದ ಸಮಯ :
ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ಹಣ್ಣುಗಳನ್ನು ತಿನ್ನಲು ಸರಿಯಾದ ಸಮಯ  ಊಟದ ನಂತರ ಹಣ್ಣುಗಳನ್ನು ತಿನ್ನಿ.  ಅದು ಸುಲಭವಾಗಿ ಜೀರ್ಣವಾಗುತ್ತದೆ. 

ಇದನ್ನೂ ಓದಿ : InspectIR: ಈ ಡಿವೈಸ್ ಮೂಲಕ ಕೇವಲ ಮೂರೇ ನಿಮಿಷಗಳಲ್ಲಿ ಉಸಿರಾಟದ ಮೂಲಕ ಕೊರೊನಾ ಟೆಸ್ಟ್ ನಡೆಸಿ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,  ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News