ನವದೆಹಲಿ : ಮಹಾಶಿವರಾತ್ರಿಯನ್ನು (Mahashivaratri 2022) ಹಿಂದೂ ಸಂಪ್ರದಾಯದಲ್ಲಿ ಭಗವಾನ್ ಶಿವ (Lord Shiva)ಮತ್ತು ತಾಯಿ ಪಾರ್ವತಿಯ ವಿವಾಹದ ದಿನವೆಂದು  ಹೇಳಲಾಗುತ್ತದೆ.  ಮಹಾಶಿವರಾತ್ರಿ ವನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಮಹಾದೇವನ ಆರಾಧನೆ ಮತ್ತು ಅಭಿಷೇಕ ಸುಮಾರು 24 ಗಂಟೆಗಳ ಕಾಲ ನಡೆಯುವುದು ಇದೊಂದೇ ದಿನ. ಸಾಮಾನ್ಯ ದಿನಗಳಲ್ಲಿ, ಶಿವನಿಗೆ ಬೆಳಿಗ್ಗೆ ಮಾತ್ರ ಅಭಿಷೇಕ ಮಾಡಲಾಗುತ್ತದೆ. ಮಹಾಶಿವರಾತ್ರಿಯ (Mahashivaratri)ದಿನದಂದು ಜನರು ಉಪವಾಸ, ರುದ್ರಾಭಿಷೇಕ, ಪೂಜೆ ಮತ್ತು ಜಾಗರಣೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗಿ ಜಾತಕದಲ್ಲಿ ಚಂದ್ರನು ಬಲಶಾಲಿಯಾಗಿ ಶುಭ ಫಲ ನೀಡಲಾರಂಭಿಸುತ್ತಾನೆ. 


COMMERCIAL BREAK
SCROLL TO CONTINUE READING

ಮಹಾಶಿವರಾತ್ರಿಯ ಈ ಪರಿಹಾರಗಳು ತುಂಬಾ ಪರಿಣಾಮಕಾರಿ :
ಮಹಾಶಿವರಾತ್ರಿಯು (MahaShivaratri) ಶಿವನ ಆಶೀರ್ವಾದ ಪಡೆಯಲು ಬಹಳ ಮುಖ್ಯವಾದ ದಿನವಾಗಿದೆ. ಈ ದಿನದಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಂಡರೆ, ಜೀವನದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಪ್ರತಿಯೊಂದು ಆಸೆ ನೆರವೇರುತ್ತದೆ. 


ಇದನ್ನೂ ಓದಿ : March Horoscope 2022: ಮುಂದಿನ ತಿಂಗಳು ಬದಲಾಗಲಿದೆ ಈ 2 ರಾಶಿಯವರ ಭವಿಷ್ಯ 


ಉತ್ತಮ ಆರೋಗ್ಯ ಪಡೆಯಲು ಪರಿಹಾರ: 
ರೋಗಗಳಿಂದ ಮುಕ್ತಿ ಮತ್ತು ಉತ್ತಮ ಆರೋಗ್ಯ ಪಡೆಯಲು ಮಹಾಶಿವರಾತ್ರಿಯ ದಿನ ದೇವಸ್ಥಾನದಲ್ಲಿ ಮಣ್ಣಿನ ದೀಪದಲ್ಲಿ ತುಪ್ಪವನ್ನು (Ghee) ತುಂಬಿ ಅದಕ್ಕೆ ಸ್ವಲ್ಪ ಕರ್ಪೂರವನ್ನು ಸೇರಿಸಿ. ನಂತರ  4 ಬತ್ತಿಯನ್ನು ಹಾಕಿ ಬೆಳಗಿ. ಇದರ ನಂತರ, ಭಗವಾನ್ ಶಿವನಿಗೆ (Lord Shiva) ಕಲ್ಲು ಸಕ್ಕರೆಯೊಂದಿಗೆ ಅಕ್ಕಿ ಹಾಲನ್ನು ಅರ್ಪಿಸಿ. ಅಲ್ಲದೆ, ಓಂ ನಮಃ ಶಿವಾಯ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಿ. 


ಉದ್ಯೋಗ-ವ್ಯವಹಾರದಲ್ಲಿ ಯಶಸ್ಸು ಪಡೆಯಲು ಪರಿಹಾರಗಳು: ಮಹಾಶಿವರಾತ್ರಿಯ ದಿನ ಶಿವನಿಗೆ ಬೆಳ್ಳಿಯ ಲೋಟದಿಂದ ಅಭಿಷೇಕ ಮಾಡಿ. ಈ ಸಮಯದಲ್ಲಿ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ. ಅಲ್ಲದೆ, ಭೋಲೆನಾಥನಿಗೆ ಬಿಳಿ ಹೂವುಗಳನ್ನು ಅರ್ಪಿಸಿ ಕೆಲಸ ಅಥವಾ ವ್ಯವಹಾರದಲ್ಲಿ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಿ. ಮಹಾಶಿವರಾತ್ರಿಯ ಸಂಜೆ ಶಿವ ದೇವಾಲಯದಲ್ಲಿ 11 ತುಪ್ಪದ  ದೀಪಗಳನ್ನು ಬೆಳಗಿಸಿ. 


ಇದನ್ನೂ ಓದಿ : Chanakya Niti: ನಿಮಗೆ ಸಂಬಂಧಿಸಿದ ಈ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ


ಉತ್ತಮ ಸಂತಾನ ಪಡೆಯಲು ಪರಿಹಾರ: 
ಮಹಾಶಿವರಾತ್ರಿಯಂದು ಪತಿ ಪತ್ನಿಯರು ರುದ್ರಾಭಿಷೇಕ ಮಾಡಬೇಕು. ಶಿವಲಿಂಗದ (Shivalinga)  ಮೇಲೆ  ತುಪ್ಪವನ್ನು ಅರ್ಪಿಸಿ. ಕೊನೆಯಲ್ಲಿ, ಶುದ್ಧ ನೀರನ್ನು ಅರ್ಪಿಸಿ, ಒಳ್ಳೆಯ ಮಗು ಕರುಣಿಸುವಂತೆ ಪ್ರಾರ್ಥಿಸಿ. ಇದಲ್ಲದೆ 11 ಬಿಲ್ವಪತ್ರೆ ಎಲೆಯನ್ನು ಶಿವಲಿಂಗದ ಮೇಲೆ ಅರ್ಪಿಸಿ. ಆದರೆ ನೆನಪಿಡಿ ಈ ಬಿಲ್ವಪತ್ರೆ ಮುರಿದಿರಬಾರದು.  


ಸಂಪತ್ತು ಪಡೆಯಲು ಪರಿಹಾರ:  
ಮಹಾಶಿವರಾತ್ರಿಯ ದಿನ, ಸೂರ್ಯೋದಯಕ್ಕೆ 1 ಗಂಟೆಯೊಳಗೆ ಶಿವನಿಗೆ ಪಂಚಾಮೃತ (ಹಾಲು, ಮೊಸರು, ಜೇನುತುಪ್ಪ, ಸಕ್ಕರೆ, ತುಪ್ಪ) ಅಭಿಷೇಕ ಮಾಡಿ. ಶಿವಲಿಂಗದ ಮೇಲೆ ಈ ಎಲ್ಲಾ ವಸ್ತುಗಳನ್ನು ಒಂದೊಂದಾಗಿ ಅರ್ಪಿಸಿ. ಕೊನೆಯದಾಗಿ ನೀರಿನಿಂದ ಅಭಿಷೇಕ ಮಾಡಿ. ಓಂ ನಮಃ ಶಿವಾಯ ಮತ್ತು ಓಂ ಪಾರ್ವತೀಪತಯೇ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಿ.  


ಇದನ್ನೂ ಓದಿ : ಎದುರಿಗಿರುವವರನ್ನು ಓಲೈಸುವುದರಲ್ಲಿ ಎತ್ತಿದ ಕೈ ಈ 3 ರಾಶಿಯವರು


 ಕಂಕಣ ಭಾಗ್ಯ ಕೂಡಿ ಬರಲು : 
 ಮಹಾಶಿವರಾತ್ರಿಯ (Mahashivaratri 2022) ದಿನದಂದು ಸಂಜೆ 5 ರಿಂದ 6 ರ ನಡುವೆ ಹಳದಿ ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಹೋಗಿ. ನಿಮಗೆ ಎಷ್ಟು ವಯಸ್ಸು ಅಷ್ಟೇ ಸಂಖ್ಯೆಯ ಬಿಲ್ವಪತ್ರೆ ಎಲೆಗಳಿಗೆ ಚಂದವ ಹಚ್ಚಿ ಅದನ್ನು ಶಿವಲಿಂಗದ ಮೇಲೆ ಅರ್ಪಿಸಿ. ಪ್ರತಿ ಬಿಲ್ವಪತ್ರೆ  ಅರ್ಪಿಸುವಾಗ, 'ಓಂ ನಮಃ ಶಿವಾಯ' ಎಂದು ಹೇಳಿ. ನಂತರ, ಧೂಪ ಬೆಳಗಿ ಶೀಘ್ರವೇ ವಿವಾಹ ಭಾಗ್ಯ ಒದಗಿ ಬರಲಿ ಎಂದು ಪ್ರಾರ್ಥಿಸಿ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ