ಇಲ್ಲಿದೆ ಉಜ್ಜೈನಿ ಮಹಾಕಾಲೇಶ್ವರನ ಅಭಿಷೇಕದ ಝಲಕ್.! ನೋಡಿ, ಪುನೀತರಾಗಿ.!

ಮಹಾಕಾಲೇಶ್ವರನಿಗೆ ನಡೆಯುವ ಭಸ್ಮಾರತಿ  ದೃಶ್ಯಗಳನ್ನು ನೋಡುವುದೇ ಒಂದು ಭಾಗ್ಯ. ಅದೊಂದು ಅಭೂತಪೂರ್ವ ಅನುಭವ. 12 ಜ್ಯೋತಿರ್ಲಿಂಗಗಳ  ಪೈಕಿ ಕೇವಲ ಮಹಾಕಾಲೇಶ್ವರನಿಗೆ ಮಾತ್ರ ಭಸ್ಮಾರತಿ ಮಾಡಲಾಗುತ್ತದೆ

Written by - Ranjitha R K | Last Updated : Mar 11, 2021, 12:33 PM IST
  • ಶಿವರಾತ್ರಿಯಂದ ಜ್ಯೋತಿರ್ಲಿಂಗ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿ
  • ಉಜ್ಜೈನಿ ಮಹಾಕಾಲೇಶ್ವರನ ದರ್ಶನ ಮಾಡಿದರೆ ಪಾಪ ಸಂಹಾರವಾಗುತ್ತದೆ.
  • ಕುಳಿತಲ್ಲೇ ಮಹಾಕಾಲೇಶ್ವರನ ಅಭಿಷೇಕದ ಝಲಕ್ ನೋಡಿ
ಇಲ್ಲಿದೆ ಉಜ್ಜೈನಿ ಮಹಾಕಾಲೇಶ್ವರನ ಅಭಿಷೇಕದ ಝಲಕ್.! ನೋಡಿ, ಪುನೀತರಾಗಿ.! title=
ಕುಳಿತಲ್ಲೇ ಮಹಾಕಾಲೇಶ್ವರನ ಅಭಿಷೇಕದ ಝಲಕ್ (photo twitter)

ಉಜ್ಜೈನಿ (ಮಧ್ಯಪ್ರದೇಶ) : ದೇಶದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಿವೆ. ಅಂದರೆ ಹನ್ನೆರಡು ಜ್ಯೋತಿರ್ಲಿಂಗಳಿವೆ. ಅದರಲ್ಲಿ ಒಂದು ಜ್ಯೋತಿರ್ಲಿಂಗ ಉಜ್ಜೈಯಿನಿಯಲ್ಲಿದೆ. ಅವನೇ ಮಹಾಕಾಲೇಶ್ವರ (Mahakaleshwar). ವಿಶೇಷವಾಗಿ ಶಿವರಾತ್ರಿಯ (Mahashivaratri) ದಿನ ಉಜ್ಜೈಯಿನಿ ಮಹಾಕಾಲೇಶ್ವರನ ದರ್ಶನದಿಂದ ಪಾಪ ದೂರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ. 

ಆದರೆ, ಈ ಸಲ ಮಹಾಕಾಲೇಶ್ವರನ (Mahakaleshwar) ದರ್ಶನ ಅಷ್ಟೊಂದು ಸುಲಭ ಇಲ್ಲ. ಕರೋನಾ ಮಹಾಮಾರಿಯ (Coronavirus) ಕಾರಣದಿಂದಾಗಿ ಮಹಾಕಾಲೇಶ್ವರನ ದರ್ಶನಕ್ಕೆ ಕೇವಲ 25ಸಾವಿರ ಜನರಿಗಷ್ಟೇ ಅವಕಾಶ ನೀಡಲಾಗಿದೆ. ಜೊತೆಗೆ ಒಂದೂವರೆ ಕಿಲೋಮೀಟರ್ ನಡೆದು ದರ್ಶನ ಮಾಡುವ ಅಗತ್ಯವಿದೆ. ಅಷ್ಟೇ ಅಲ್ಲ, ಜನಜಂಗುಳಿಯೂ ಸಿಕ್ಕಾಪಟ್ಟೆ ಇದೆ. ಕರೋನಾ ಕಾಲದಲ್ಲಿ ಜನಜಂಗುಳಿ ನಡುವೆ ಸೇರುವುದು ಸರಿಯೂ ಅಲ್ಲ. ಹಾಗಾಗಿ, ಮಹಾಕಾಲೇಶ್ವರನ ದರ್ಶನವನ್ನು (Mahakaleshwar darshan) ಇಲ್ಲಿಯೇ ಮಾಡಿ. ಬೆಳಗ್ಗಿನ ಜಲಾಭಿಷೇಕದ ಅದ್ಭುತ ವಿಡಿಯೋ ಇಲ್ಲಿದೆ. ಅದನ್ನು ನೋಡಿ, ಮಹಾಕಾಲೇಶ್ವರನಿಗೆ ಮನಸ್ಸಿನಲ್ಲಿ ನಮಿಸಿ ಪುನೀತರಾಗಿ. ಇಲ್ಲಿದೆ ನೋಡಿ ಮಹಾಕಾಲೇಶ್ವರನ ಅಭಿಷೇಕದ ಝಲಕ್.

 

ಇದನ್ನೂ ಓದಿ : Mahashivaratri 2021: ರಾಶಿಗೆ ಅನುಗುಣವಾಗಿ ಮಹಾಶಿವನನ್ನು ಹೇಗೆ ಪೂಜಿಸಬೇಕೆಂದು ತಿಳಿಯಿರಿ

ಭಸ್ಮಾರತಿ ನಡೆಯುವ ಏಕೈಕ ಜ್ಯೋತಿರ್ಲಿಂಗ:
ಮಹಾಕಾಲೇಶ್ವರನಿಗೆ ನಡೆಯುವ ಭಸ್ಮಾರತಿ (Bhasm aarti) ದೃಶ್ಯಗಳನ್ನು ನೋಡುವುದೇ ಒಂದು ಭಾಗ್ಯ. ಅದೊಂದು ಅಭೂತಪೂರ್ವ ಅನುಭವ. 12 ಜ್ಯೋತಿರ್ಲಿಂಗಗಳ (Jyotirlinga) ಪೈಕಿ ಕೇವಲ ಮಹಾಕಾಲೇಶ್ವರನಿಗೆ ಮಾತ್ರ ಭಸ್ಮಾರತಿ ಮಾಡಲಾಗುತ್ತದೆ. ಶಿವ (Lord Shiva) ಭಸ್ಮ ಪ್ರಿಯ. ಮಹಾಕಾಲೇಶ್ವರನ ಮತ್ತೊಂದು ವಿಶೇಷವೆಂದರೆ, ಇದು ದಕ್ಷಿಣಾಮುಖಿ ಜ್ಯೋತಿರ್ಲಿಂಗ. 12 ಜ್ಯೋತಿರ್ಲಿಂಗಗಳಲ್ಲಿ ಯಾವುದು ಕೂಡಾ ದಕ್ಷಿಣಮುಖವಾಗಿಲ್ಲ. ಆದರೆ, ಮಹಾಕಾಲೇಶ್ವರ ಮಾತ್ರ ದಕ್ಷಿಣಾಭಿಮುಖವಾಗಿ ಕುಳಿತು ಭಕ್ತರಿಗೆ (Devotees) ದರ್ಶನ ನೀಡುತ್ತಿದ್ದಾನೆ.

ಇದನ್ನೂ ಓದಿ : Mahashivaratri 2021 : ಇಂದು ಮಹಾಶಿವರಾತ್ರಿ, ತಪ್ಪಿಯೂ ಮಾಡಬೇಡಿ ಈ ಹತ್ತು ತಪ್ಪು.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News