ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಹಣೆಬರಹವನ್ನು ಹೊತ್ತುಕೊಂಡೇ ಜನ್ಮ ಎತ್ತುತ್ತಾನೆ. ಹಿಂದಿನ ಜನ್ಮದ ಕರ್ಮಗಳ ಪ್ರಕಾರ ಈ  ಜನ್ಮದಲ್ಲಿ ಅದೃಷ್ಟ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕೆಲವರು ತಮ್ಮ ಕಠಿಣ ಪರಿಶ್ರಮ, ಆಲೋಚನೆ ಮೂಲಕ ಕೆಲವೊಂದು  ವಿಷಯಗಳನ್ನು  ಬದಲಾಯಿಸಿ ಬಿಡುತ್ತಾರೆ. ಇನ್ನು  ಕೆಲವು ವಿಷಯಗಳನ್ನು ಏನೇ ಮಾಡಿದರೂ ಬದಲಾಯಿಸಲು ಸಾಧ್ಯವಿಲ್ಲ. ಆಚಾರ್ಯ ಚಾಣಕ್ಯನ ನೀತಿ ಶಾಸ್ತ್ರದ ಪ್ರಕಾರ,  ಕೆಲವು ವಿಷಯಗಳು ವ್ಯಕ್ತಿಯ ಅದೃಷ್ಟಕ್ಕೆ ಸಂಬಂಧಿಸಿದ್ದಾಗಿದೆ. ಇವುಗಳು  ತಾಯಿಯ ಗರ್ಭದಲ್ಲಿಯೇ ನಿರ್ಧಾರವಾಗಿರುತ್ತದೆಯಂತೆ. 


COMMERCIAL BREAK
SCROLL TO CONTINUE READING

ಈ ವಿಷಯಗಳು ಎಂದಿಗೂ ಬದಲಾಗುವುದಿಲ್ಲ : 
ಚಾಣಕ್ಯ ನೀತಿಯಲ್ಲಿ ಅನೇಕ ವಿಷಯಗಳ ಬಗ್ಗೆ ಹೇಳಲಾಗಿದೆ. ಚಾಣಾಕ್ಯ ನೀತಿಯಲ್ಲಿ ಹೇಳಲಾದ ಎಷ್ಟೋ ವಿಷಯಗಳು ಇಂದಿಗೂ ಪ್ರಸ್ತುತವಾಗಿದೆ.  ಚಾಕಯ ನೀತಿಯಲ್ಲಿ ಹೇಳಲಾದ ಪ್ರಕಾರ, ನಮ್ಮ ಜೀವನದ ಕೆಲವೊಂದು ವಿಷಯಗಳನ್ನು ಏನೇ ಮಾಡಿದರೂ ಬದಲಾಯಿಸಲು ಸಾಧ್ಯವಾಗುವುದಿಲ್ಲ.  


ಇದನ್ನೂ ಓದಿ : Surya Gochar 2023 : ಸೂರ್ಯ ದೇವನಿಂದ 30 ದಿನದಲ್ಲಿ ಈ 3 ರಾಶಿಯವರಿಗೆ ಭರ್ಜರಿ ಆರ್ಥಿಕ ಲಾಭ!


ವ್ಯಕ್ತಿಯ ವಯಸ್ಸು: ಆಚಾರ್ಯ ಚಾಣಕ್ಯ ಹೇಳುವಂತೆ ಒಬ್ಬ ವ್ಯಕ್ತಿಯ ವಯಸ್ಸು ಅಥವಾ ಎಷ್ಟು ವರ್ಷದವರೆಗೆ ವ್ಯಕ್ತಿ ಬದುಕುತ್ತಾನೆ ಎನ್ನುವುದು  ತಾಯಿಯ ಗರ್ಭದಲ್ಲಿಯೇ ನಿರ್ಧಾರವಾಗುತ್ತದೆ. ಅದರ ಆಧಾರದ ಮೇಲೆಯೇ  ವ್ಯಕ್ತಿ ಆಯಸ್ಸು ಪಡೆಯುತ್ತಾನೆ.  ಅದೃಷ್ಟ ಪಡೆಯುತ್ತಾನೆ. 


ಸಾವಿನ ಸಮಯ: ವಯಸ್ಸಿನಂತೆಯೇ, ವ್ಯಕ್ತಿಯ ಮರಣದ ಸಮಯವೂ ತಾಯಿಯ ಗರ್ಭದಲ್ಲಿರುವಾಗಲೇ ನಿರ್ಧಾರವಾಗಿರುತ್ತದೆ. ಯಾವುದೇ ವ್ಯಕ್ತಿಯ ಸಾವಿನ ಸಮಯವನ್ನು ಯಾರು ಕೂಡಾ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಯಾವ ಘಳಿಗೆಯಲ್ಲಿ ಸಾವು ಎನ್ನುವುದನ್ನು ವಿಧಿ ನಿರ್ಧರಿಸಿರುತ್ತದೆಯೂ ಆ ಘಳಿಗೆಯಲ್ಲಿ ಸಾವು ಬಂದೇ ಬರುತ್ತದೆ.  ಅಲ್ಲದೆ ಸಾವು ಹೇಗಿರುತ್ತದೆ ಎನ್ನುವುದು ಕೂಡಾ ಪೂರ್ವ ನಿಗದಿಯಾಗಿರುತ್ತದೆ.


ಇದನ್ನೂ ಓದಿ :  Budh Gochar 2023 : ಬುಧ ಗೋಚರದಿಂದ ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಸಂಪತ್ತು ಮತ್ತು ಖ್ಯಾತಿ


ಸುಖ-ದುಃಖ: ಮನುಷ್ಯ ಯಾವ ರೀತಿಯ ಜೀವನ ನಡೆಸಬೇಕು ಎಂಬುದು ಕೂಡಾ ತಾಯಿಯ ಗರ್ಭದಲ್ಲಿ ನಿರ್ಧಾರವಾಗುತ್ತದೆ. ಹಿಂದಿನ ಜನ್ಮದ ಕರ್ಮಗಳಿಂದ ಅವನು ನೋವು, ಸಂತೋಷ ಮತ್ತು ದುಃಖವನ್ನು ಅನುಭವಿಸಬೇಕು ಎಂದು ನಿರ್ಧರಿಸಲಾಗುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.