ಮುಹಮ್ಮದ್‌ ಖಾತೆ ಸೇರಿದ ಮತ್ತೊಂದು ಪ್ರಶಸ್ತಿ: ಬೀಸ್ಟ್‌ ಬೌಲರ್‌ಗೆ ಸಿಕ್ತು ಬೆಸ್ಟ್‌ ಫೀಲ್ಡರ್‌ ಅವಾರ್ಡ್‌..!

T20 World Cup 2024: ಟೀಂ ಇಂಡಿಯಾದ ಸ್ಟಾರ್‌ ಬೌಲರ್‌ ಮೊಹಮ್ಮದ್‌ ಸಿರಾಜ್‌ಗೆ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಹಾಗಾದರೆ ಪ್ರಶಸ್ತಿ ಸಿಕ್ಕಿದ್ದು ಯಾಕೆ? ಈ ಸ್ಟೋರಿ ಓದಿ  

Written by - Zee Kannada News Desk | Last Updated : Jun 13, 2024, 01:40 PM IST
  • ಟೀಂ ಇಂಡಿಯಾದ ಸ್ಟಾರ್‌ ಬೌಲರ್‌ ಮೊಹಮ್ಮದ್‌ ಸಿರಾಜ್‌ಗೆ ಮತ್ತೊಂದು ಪ್ರಶಸ್ತಿ.
  • ಟೂರ್ನಿಯ 25 ನೇ ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ ಹೊಸ ದಾಖಲೆ.
  • ಬೆಸ್ಟ್‌ ಫೀಲ್ಡರ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಸಿರಾಜ್‌
ಮುಹಮ್ಮದ್‌ ಖಾತೆ ಸೇರಿದ ಮತ್ತೊಂದು ಪ್ರಶಸ್ತಿ: ಬೀಸ್ಟ್‌ ಬೌಲರ್‌ಗೆ ಸಿಕ್ತು ಬೆಸ್ಟ್‌ ಫೀಲ್ಡರ್‌ ಅವಾರ್ಡ್‌..! title=

Mohammad Siraj: ಟಿ 20 ವಿಶ್ವಕಪ್‌ 2024 ನ ಅಮೆರಿಕಾ ಹಾಗು ಭಾರತ ತಂಡ ನಡುವೆ ನಡೆದ ಪಂದ್ಯದಲ್ಲಿ ಸಿರಾಜ್‌ ಸೂಪರ್‌ ಫೀಲ್ಡಿಂಗ್‌ ಪ್ರದರ್ಶಿದ್ದರು. ಮೊಹಮ್ಮದ್‌  ಫೀಲ್ಡಿಂಗ್‌ ಮಾಡಿದ ಪರಿಗೆ ಎಲ್ಲರಿಂದಲೂ ಒಳ್ಳೆ ಪ್ರಶಂಸೆ ಕೂಡ ಸಿಕ್ಕಿತ್ತು.

ಇದನ್ನೂ ಓದಿ: T20 World Cup 2024: ನ್ಯೂಜಿಲಾಂಡ್‌ ವಿರುದ್ಧ ಅಬ್ಬರಿಸಿದ ವೆಸ್ಟ್‌ ಇಂಡೀಸ್‌: ನ್ಯೂಜಿಲಾಂಡ್‌ಗೆ ಶುರುವಾಯ್ತು ಢವ ಢವ.

ಟೂರ್ನಿಯ 25 ನೇ ಪಂದ್ಯದಲ್ಲಿ ಅರ್ಷದೀಪ್‌ ಸಿಂಗ್‌ ಎಸತಕ್ಕೆ ಯುಎಸ್‌ಎ ತಂಡದ ನಿತೀಶ್‌ ಕುಮಾರ್‌ ಬ್ಯಾಟ್‌ ಬೀಸಿದ್ದರು. ನಿತೀಶ್‌ ಹೊಡೆತಕ್ಕೆ ಚೆಂಡು ಬೌಂಡರಿ ಕಡೆ ಹಾರಿತ್ತು. ಬೌಂಡರಿ ಬಳಿ ಫೀಲ್ಡಿಂಗ್‌ಗೆ ನಿಂತಿದ್ದ ಮೊಹಮ್ಮದ್‌ ಸಿರಾಜ್‌ ಜಂಪ್‌ ಮಾಡಿ ಕ್ಯಾಚ್‌ ಹಿಡಿದಿದ್ದರು. ಮೊಹಮ್ಮದ್‌ ಸಿರಾಜ್‌ ಚೆಂಡನ್ನ ಹಿಡಿದ ಸ್ಟೈಲ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಭಾರಿ ವೈರಲ್‌ ಆಗತಾ ಇದೆ. ವೈರಲ್‌ ಆಗ್ತಿರೋದು ಅಷ್ಟೇ ಅಲ್ಲ ಮೊಹಮ್ಮದ್‌ ಸಿರಾಜ್‌ ಫೀಲ್ಡಿಂಗ್‌ಗೆ ಬೆಸ್ಟ್‌ ಫೀಲ್ಡರ್‌ ಪ್ರಶಸ್ತಿ ಸಿಕ್ಕಿದೆ. 

 

 
 
 
 

 
 
 
 
 
 
 
 
 
 
 

A post shared by ICC (@icc)

 

 

Trending News