Vastu Tips: ಮನೆಯ ಮುಖ್ಯ ಬಾಗಿಲಿನಲ್ಲಿ ನೆಡುವ ಈ 3 ಗಿಡಗಳು ಅಯಸ್ಕಾಂತದಂತೆ ಹಣವನ್ನು ಆಕರ್ಷಿಸುತ್ತವೆ!
ವಾಸ್ತು ಸಲಹೆಗಳು: ವಾಸ್ತು ಶಾಸ್ತ್ರದಲ್ಲಿ ಅನೇಕ ಸಸ್ಯಗಳ ಮಹತ್ವದ ಉಲ್ಲೇಖಿಸಲಾಗಿದೆ. ಇವುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ, ಯಾವುದೇ ವ್ಯಕ್ತಿಯು ಶುಭ ಫಲಗಳನ್ನು ಪಡೆಯುತ್ತಾನೆ. ಮನೆಯಲ್ಲಿ ತಾಯಿ ಲಕ್ಷ್ಮಿದೇವಿ ವಾಸವಾಗುತ್ತಾಳೆ. ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಮನೆಯ ಹೊರಗೆ ಯಾವ ಗಿಡಗಳನ್ನು ನೆಡಬೇಕೆಂದು ತಿಳಿಯಿರಿ.
ನವದೆಹಲಿ: ವಾಸ್ತು ಶಾಸ್ತ್ರದ ವಿಶೇಷ ಮಹತ್ವವನ್ನು ಹಿಂದೂ ಧರ್ಮದಲ್ಲಿಯೂ ಹೇಳಲಾಗಿದೆ. ಮನೆಯಲ್ಲಿ ವಸ್ತುಗಳನ್ನು ವಾಸ್ತು ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ, ಶುಭ ಫಲಿತಾಂಶಗಳು ದೊರೆಯುತ್ತವೆ. ಅಷ್ಟೇ ಅಲ್ಲ ಮನೆಯಲ್ಲಿ ಅಲಂಕಾರ, ಗಿಡಗಳಿಗೂ ಸೂಕ್ತ ಸ್ಥಾನ ನೀಡಲಾಗಿದೆ. ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ವ್ಯಕ್ತಿಯ ಮನಸ್ಸಿನಲ್ಲಿ ಯಾವಾಗಲೂ ಶಾಂತಿ ಇರುತ್ತದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ ವಾಸ್ತು ದೋಷಗಳನ್ನು ನಿರ್ಲಕ್ಷಿಸಿದರೆ ವ್ಯಕ್ತಿಯ ಜೀವನದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವಂತೆ.
ವಾಸ್ತುಶಾಸ್ತ್ರದಲ್ಲಿ ಕೆಲವು ಮರಗಳು ಮತ್ತು ಸಸ್ಯಗಳ ಬಗ್ಗೆ ಹೇಳಲಾಗಿದೆ. ಇವುಗಳನ್ನು ಮನೆಯಲ್ಲಿ ನೆಡುವುದರಿಂದ ವಾಸ್ತು ದೋಷಗಳು ದೂರವಾಗುತ್ತವೆ. ಅಲ್ಲದೆ ವ್ಯಕ್ತಿಯ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಅಂತಹ ಕೆಲವು ಸಸ್ಯಗಳನ್ನು ವಾಸ್ತುದಲ್ಲಿ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ನೆಡುವುದರಿಂದ ಲಕ್ಷ್ಮಿದೇವಿಯೇ ಮನೆಯಲ್ಲಿ ನೆಲೆಸುತ್ತಾಳೆ ಮತ್ತು ಕುಬೇರ ದೇವನ ಕೃಪೆಯಿಂದ ವ್ಯಕ್ತಿಯ ಜೀವನದಲ್ಲಿ ಹಣದ ಕೊರತೆಯಿರಲ್ಲ.
ಇದನ್ನೂ ಓದಿ: Shravana Masa 2022: ಶ್ರಾವಣ ಸೋಮವಾರದ ವ್ರತ ಆಚರಿಸುವ ಮೊದಲು ನಿಯಮ ತಿಳಿಯಿರಿ
ಮನೆಯ ಮುಖ್ಯ ಬಾಗಿಲಿನಲ್ಲಿ ಈ ಗಿಡಗಳನ್ನು ನೆಡಿ
1. ಶಮಿ ಗಿಡ: ಹಿಂದೂ ಧರ್ಮದಲ್ಲಿ ಶಮಿ ಸಸ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ ಎಂದು ಹೇಳಲಾಗುತ್ತದೆ. ಶಮಿಯ ಗಿಡವು ಶಿವನಿಗೆ ಬಹಳ ಪ್ರಿಯವಾಗಿದೆ. ಶನಿವಾರದಂದು ಶಮಿಯ ಗಿಡವನ್ನು ಪೂಜಿಸುವುದರಿಂದ ಶನಿದೇವನ ಆಶೀರ್ವಾದವೂ ದೊರೆಯುತ್ತದೆ. ಮನೆಯಲ್ಲಿ ಶಮಿ ಗಿಡವನ್ನು ನೆಟ್ಟರೆ ಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯ ಮುಖ್ಯ ಬಾಗಿಲಿಗೆ ಹಾಕುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಲಕ್ಷ್ಮಿದೇವಿಯ ಆಶೀರ್ವಾದ ಮನೆಯಲ್ಲಿ ಉಳಿಯುತ್ತದೆ. ಧನಾತ್ಮಕ ಶಕ್ತಿಯು ನೆಲೆಸುತ್ತದೆ ಮತ್ತು ಹಣಕಾಸಿನ ನಿರ್ಬಂಧಗಳನ್ನು ನಿವಾರಿಸುತ್ತದೆ.
2. ಮನಿ ಪ್ಲಾಂಟ್: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಮನಿ ಪ್ಲಾಂಟ್ ನೆಟ್ಟರೆ ಶುಭ ಫಲ ಸಿಗುತ್ತದೆ. ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮನಿ ಪ್ಲಾಂಟ್‌ನಲ್ಲಿ ತಾಯಿ ಲಕ್ಷ್ಮಿದೇವಿ ವಾಸವಾಗಿದ್ದಾಳಂತೆ. ಇದು ಹಣವನ್ನು ಆಕರ್ಷಿಸುತ್ತದೆ. ಇದನ್ನು ಮನೆಯ ಮುಖ್ಯ ಬಾಗಿಲಿಗೆ ಹಾಕಿದರೆ ಲಕ್ಷ್ಮಿದೇವಿಯು ಮನೆಯಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಮನಿ ಪ್ಲಾಂಟ್ ನೆಡುತ್ತಿದ್ದರೆ, ಸಸ್ಯದ ಕೊಂಬೆಗಳು ನೆಲದ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎಂದು ಹೇಳಲಾಗುತ್ತದೆ.
3. ಬಾಳೆ ಗಿಡ: ಮನೆಯಲ್ಲಿ ಬಾಳೆ ಗಿಡವನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಮನೆಯಲ್ಲಿ ವಿಷ್ಣುವಿನ ಜೊತೆಗೆ ಲಕ್ಷ್ಮಿದೇವಿಯ ಆಶೀರ್ವಾದವೂ ದೊರೆಯುತ್ತದೆ. ಮನೆಯಲ್ಲಿ ಈ ಗಿಡ ನೆಟ್ಟರೆ ಸಂಪತ್ತು ಹೆಚ್ಚುತ್ತದೆ. ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ. ನೀವು ಗುರುವಾರ ಉಪವಾಸ ಮಾಡಿದರೆ, ಈ ದಿನ ನೀವು ಬಾಳೆ ಗಿಡವನ್ನು ಪೂಜಿಸಬೇಕು. ಈ ಸಸ್ಯವನ್ನು ಪೂಜಿಸುವುದರಿಂದ ಭಗವಾನ್ ಶ್ರೀ ಹರಿ ಮತ್ತು ತಾಯಿ ಲಕ್ಷ್ಮಿದೇವಿ ಸಂತುಷ್ಟರಾಗುತ್ತಾರೆ.
ಇದನ್ನೂ ಓದಿ: Dream Interpretation: ಘನತೆ, ಗೌರವ ಹೆಚ್ಚಿಸಿ ಪ್ರಮೋಷನ್ಗೆ ಕಾರಣ ಈ ರೀತಿಯ ಕನಸುಗಳು!
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.