ನವದೆಹಲಿ: ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾಗಿದೆ. ಈ ಬಾರಿಯ ಶ್ರಾವಣವು ಶಿವನ ಭಕ್ತರಿಗೆ ಬಹಳ ವಿಶೇಷವಾಗಿರಲಿದೆ. ಏಕೆಂದರೆ ಈ ಬಾರಿ ಶ್ರಾವಣ 2 ತಿಂಗಳುಗಳ ಕಾಲ ಇರಲಿದ್ದು, ಈ ಸಮಯದಲ್ಲಿ 8 ಶ್ರಾವಣ ಸೋಮವಾರಗಳು ಬರುತ್ತವೆ. ಶ್ರಾವಣ ಸೋಮವಾರದಂದು ಉಪವಾಸ ಆಚರಿಸುವುದರಿಂದ ಶಿವನು ಶೀಘ್ರ ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.
ಶ್ರಾವಣ ಸೋಮವಾರದಂದು ಶಿವನ ಭಕ್ತರು ಜಲಾಭಿಷೇಕ ಮಾಡುವ ಮೂಲಕ ಶಿವಲಿಂಗವನ್ನು ಪೂಜಿಸುತ್ತಾರೆ. ಶ್ರಾವಣ ಸೋಮವಾರದ ಉಪವಾಸವು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಈ ಉಪವಾಸವನ್ನು ಸಂಪೂರ್ಣ ನಿಯಮಗಳೊಂದಿಗೆ ಆಚರಿಸಿದರೆ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಮದುವೆಯಲ್ಲಿ ಅಡಚನೆ ಬರುತ್ತಿದ್ದರೆ ಶ್ರಾವಣ ಸೋಮವಾರ ಉಪವಾಸವಿರಬೇಕು. ಇದರಿಂದ ದಾಂಪತ್ಯದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ಮತ್ತೊಂದೆಡೆ ಶ್ರಾವಣ ಸೋಮವಾರದ ಉಪವಾಸವು ಮಗು ಹೊಂದಲು ಬಯಸುವವರಿಗೆ ವಿಶೇಷವಾಗಿ ಫಲಪ್ರದವಾಗಿದೆ. ಶ್ರಾವಣ ಸೋಮವಾರದಂದು ಉಪವಾಸ ಮಾಡುವವರು ಕೆಲವು ನಿಯಮಗಳನ್ನು ಪಾಲಿಸಬೇಕು. ಆ ನಿಯಮಗಳು ಯಾವುವು ಎಂದು ತಿಳಿಯಿರಿ.
ಇದನ್ನೂ ಓದಿ: Palmistry: ಅಂಗೈಯಲ್ಲಿ ಈ ರೇಖೆ ಇರದಿದ್ರೆ ಮದುವೆಯೇ ಆಗುವುದಿಲ್ಲ..!
ಶ್ರಾವಣ ಸೋಮವಾರ ಉಪವಾಸದ ನಿಯಮಗಳು
- ಶ್ರಾವಣ ಸೋಮವಾರದ ಉಪವಾಸವನ್ನು ಆಚರಿಸುವ ವ್ಯಕ್ತಿಯು ಉಪವಾಸದ ನಿಯಮಗಳನ್ನು ಪಾಲಿಸಬೇಕು. ಶ್ರಾವಣ ಸೋಮವಾರದ ಉಪವಾಸವನ್ನು ಸಂಜೆಯವರೆಗೆ ಮಾಡಬೇಕು. ಸಂಜೆ ಪೂಜೆಯ ನಂತರ ಉಪವಾಸವನ್ನು ಮುಕ್ತಾಯಗೊಳಿಸಬಹುದು.
- ಶ್ರಾವಣ ಸೋಮವಾರ ವ್ರತದ ದಿನ ವ್ಯಕ್ತಿಯು ಸ್ವಚ್ಛತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಬೆಳಗ್ಗೆ ಬೇಗ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿ ಪೂಜೆ ಮಾಡಬೇಕು.
- ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಮಾಂಸ ಮದ್ಯ ಮತ್ತು ತಾಮಸ ಆಹಾರ ಸೇವಿಸುವುದನ್ನು ತಪ್ಪಿಸಬೇಕು.
- ಶ್ರಾವಣ ಸೋಮವಾರ ವ್ರತದ ದಿನದಂದು ಯಾರೂ ಒಳ್ಳೆಯ ಅಥವಾ ಕೆಟ್ಟದ್ದನ್ನು ಹೇಳಬಾರದು. ನಕಾರಾತ್ಮಕ ಆಲೋಚನೆಗಳನ್ನು ಮನಸ್ಸಿನಲ್ಲಿ ತರಬಾರದು.
- ಶ್ರಾವಣ ಮಾಸದಲ್ಲಿ ಹಸಿರು ಸೊಪ್ಪುಗಳನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ. ವಾಸ್ತವವಾಗಿ ಶ್ರಾವಣ ಮಾಸದಲ್ಲಿ ಸಾಕಷ್ಟು ಮಳೆಯಾಗುತ್ತದೆ, ಇದರಿಂದಾಗಿ ಹಸಿರು ತರಕಾರಿಗಳು ಕುಂಠಿತವಾಗುತ್ತವೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.