ಬೆಂಗಳೂರು :  ನಾಲ್ಕು ದಿನಗಳಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ. ಏಪ್ರಿಲ್‌ನಲ್ಲಿ ಕುಂಭ ರಾಶಿಯನ್ನು ಪ್ರವೇಶಿಸಿರುವ ಕರ್ಮಫಲದಾತ ಶನಿಯು ಜೂನ್ 5 ರಂದು ಈ ರಾಶಿಯಲ್ಲಿ ಮತ್ತೆ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಶನಿಯ ಹಿಮ್ಮುಖ ಚಲನೆ ಕೆಲವು ಅನೇಕ ರಾಶಿಗಳಿಗೆ ಶುಭ ಫಲವನ್ನು ನೀಡುತ್ತದೆ. ಇನ್ನು ಕೆಲವು ರಾಶಿಗಳಿಗೆ ಈ  ಸಮಯ ಕಷ್ಟದಿಂದ ಕೂಡಿರುತ್ತದೆ.  ಶನಿಯು ಹಿಮ್ಮುಖವಾಗಿದ್ದಾಗ, ವೃತ್ತಿ ಮತ್ತು ಜೀವನದಲ್ಲಿ ಪ್ರಗತಿಯಲ್ಲಿ ಅಡೆತಡೆಗಳು ಮತ್ತು ಜೀವನದಲ್ಲಿ ಅಶಾಂತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಯಾರ ರಾಶಿಯಲ್ಲಿ ಶನಿಯ ಸ್ಥಾನವು ಸರಿಯಾಗಿಲ್ಲವೋ, ಅವರ ಜೀವನ ಹಾದಿ ಕಷ್ಟದಿಂದ ಕೂಡಿರುತ್ತದೆ. 


COMMERCIAL BREAK
SCROLL TO CONTINUE READING

ಜ್ಯೋತಿಷಿಗಳ ಪ್ರಕಾರ, ಶನಿಯ ಹಿಮ್ಮುಖ ಚಲನೆ ಧನು ರಾಶಿ, ಮೇಷ ಮತ್ತು ಕನ್ಯಾ ರಾಶಿಯವರಿಗೆ ಪ್ರಯೋಜನಕಾರಿಯಾಗಿರಲಿದೆ. ಕರ್ಕ, ಮೀನ ಮತ್ತು ವೃಶ್ಚಿಕ ರಾಶಿಯ ಜನರು ಹಣ ಮತ್ತು ವೃತ್ತಿಯಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. 


ಇದನ್ನೂ ಓದಿ : Surya Rashi Parivartan: ಜೂ.15ರ ಸೂರ್ಯ ರಾಶಿ ಬದಲಾವಣೆಯಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ


ಧನು ರಾಶಿ : ಧನು ರಾಶಿಯವರು ವೃತ್ತಿ ಬದಲಾಯಿಸುವ ಮೂಲಕ ದೊಡ್ಡ ಮಟ್ಟದ ಯಶಸ್ಸು, ಲಾಭವನ್ನು ಪಡೆಯಬಹುದು. ಆದರೆ ಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲವನ್ನು ಕರ್ಮ ಫಲದತ ಶನಿ ಮಹಾತ್ಮ ಕರುಣಿಸಲಿದ್ದಾನೆ.  ಈ ಸಮಯದಲ್ಲಿ ನಿಮಗೆ ಉದ್ಯೋಗಾವಕಾಶಗಳು ದೊರೆಯುತ್ತವೆ. ವೃತ್ತಿಯಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ. 


ಮೇಷ ರಾಶಿ : ಈ ರಾಶಿಯವರಿಗೆ ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಇದಕ್ಕಿಂತ ಉತ್ತಮ ಅವಕಾಶ ಸಿಗುವುದಿಲ್ಲ. ಉದ್ಯಮಿಗಳು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು.  ಈ ಸಮಯದಲ್ಲಿ ಆರಂಭಿಸುವ ಕೆಲಸದಲ್ಲಿ ಬಹಳಷ್ಟು ಯಶಸ್ಸು ಸಿಗುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಖಂಡಿತಾ. 


ಇದನ್ನೂ ಓದಿ : Guru Gochar 2022: ಮುಂದಿನ ಒಂದು ವರ್ಷದವರೆಗೆ ಈ ರಾಶಿಗಳ ಮೇಲೆ ದೇವಗುರು ಬೃಹಸ್ಪತಿಯ ಕೃಪೆ ಇರಲಿದೆ


ಕನ್ಯಾ ರಾಶಿ :  ಈ ರಾಶಿಚಕ್ರದ ಜನರಿಗೆ ಸಣ್ಣ ಪ್ರಯತ್ನ ಕೂಡಾ ದೊಡ್ಡ ಮಟ್ಟದ ಯಶಸ್ಸು ತಂದು ಕೊಡುತ್ತದೆ. ಯಾವುದಾದರೂ ಕೆಲಸ ಆರಂಭಿಸಬೇಕು ಎಂದು ಕೊಂಡಿದ್ದಾರೆ ಇಂದು ಉತ್ತಂ ಸಮಯ. ಆದರೆ ಈ ಸಮಯದಲ್ಲಿ, ಕೀಲು ನೋವಿನಂತಹ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ.



https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ