Astro Tips: ಲವಂಗ ಮತ್ತು ಕರ್ಪೂರದ ಈ ತಂತ್ರಗಳು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತವೆ!
ಜ್ಯೋತಿಷ್ಯದಲ್ಲಿ ಶ್ರೀಮಂತರಾಗಲು ಕೆಲವು ತಂತ್ರಗಳು-ಪರಿಹಾರಗಳ ಬಗ್ಗೆ ಹೇಳಲಾಗಿದೆ. ಇವು ತುಂಬಾ ಪರಿಣಾಮಕಾರಿಯಾಗಿದೆ. ಲವಂಗ-ಕರ್ಪೂರ ತಂತ್ರಗಳು ಇದರಲ್ಲಿ ಬಹಳ ಪರಿಣಾಮಕಾರಿ. ಈ ತಂತ್ರಗಳು ವ್ಯಕ್ತಿಯನ್ನು ದಿಢೀರ್ ಶ್ರೀಮಂತರನ್ನಾಗಿ ಮಾಡುತ್ತವೆ.
ನವದೆಹಲಿ: ಲವಂಗ ಮತ್ತು ಕರ್ಪೂರವನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಕರ್ಪೂರವನ್ನು ಸುಡುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಇದು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ. ಆದರೆ ಲವಂಗವನ್ನು ಮಸಾಲೆಯಾಗಿ ಬಳಸಲಾಗುತ್ತದೆ. ಲವಂಗದ ಕೆಲವು ಸುಲಭ ಪರಿಹಾರಗಳ ಬಗ್ಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಈ ಸಲಹೆ ಪಾಲಿಸಿದ್ರೆ ನೀವು ಸಾಕಷ್ಟು ಹಣ ಗಳಿಸಬಹುದು. ಇದಲ್ಲದೆ ನೀವು ಕೆಲಸದ ಸ್ಥಳದಲ್ಲಿ ಮಹತ್ತರ ಪ್ರಗತಿ ಸಾಧಿಸುತ್ತೀರಿ. ಇಂದು ನಾವು ಲವಂಗ ಮತ್ತು ಕರ್ಪೂರದ ಕೆಲವು ಪರಿಣಾಮಕಾರಿ ಪರಿಹಾರಗಳ ನಿಮಗೆ ತಿಳಿಸಿಕೊಡಲಿದ್ದೇವೆ.
ಲವಂಗ-ಕರ್ಪೂರದ ಪರಿಣಾಮಕಾರಿ ಪರಿಹಾರಗಳು
ನಕಾರಾತ್ಮಕ ಶಕ್ತಿ ಹೋಗಲಾಡಿಸಲು: ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಓಡಿಸಲು ಒಂದು ಬಟ್ಟಲಿನಲ್ಲಿ 5 ಲವಂಗ, ಕರ್ಪೂರ ಮತ್ತು ಹಸಿರು ಏಲಕ್ಕಿ ತೆಗೆದುಕೊಂಡು ಅವುಗಳನ್ನು ಸುಡಬೇಕು. ಹೀಗೆ ಮಾಡುವುದರಿಂದ ವಾತಾವರಣದಲ್ಲಿ ಸಕಾರಾತ್ಮಕತೆ ಮೂಡುತ್ತದೆ. ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಇರುತ್ತದೆ. ಮನೆಯ ಜನರು ಆರೋಗ್ಯವಾಗಿ ಮತ್ತು ಒತ್ತಡವಿಲ್ಲದೆ ಇರುತ್ತಾರೆ. ಉತ್ತಮ ಫಲಿತಾಂಶಕ್ಕಾಗಿ, ವಾರಕ್ಕೆ ಕನಿಷ್ಠ 2 ಬಾರಿ ಈ ರೀತಿ ಮಾಡಬೇಕು.
ಇದನ್ನೂ ಓದಿ: Inauspicious Sign: ಅಚಾನಕ್ ಆಗಿ ಕೈಯಿಂದ ಪಾತ್ರೆ ಬಿದ್ದರೆ ಸಂಭವಿಸಬಹುದು ಈ ದುರಂತ! ಈಗಲೇ ತಿಳಿಯಿರಿ ಅರ್ಥ
ಹಣ ಪಡೆಯಲು ಉಪಾಯ: ನೀವು ಬೇಗನೆ ಶ್ರೀಮಂತರಾಗಬಯಸಿದರೆ, ರಾತ್ರಿ ವೇಳೆ ಬೆಳ್ಳಿಯ ಬಟ್ಟಲಿನಲ್ಲಿ ಲವಂಗ ಮತ್ತು ಕರ್ಪೂರವನ್ನು ಸುಟ್ಟು ಹಾಕಿ. ಈ ಪರಿಹಾರವನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದು ಹಠಾತ್ ಹಣದ ಲಾಭವನ್ನು ನೀಡುತ್ತದೆ.
ತಾಯಿ ಲಕ್ಷ್ಮಿದೇವಿ ಮೆಚ್ಚಿಸಲು: 5 ಕರ್ಪೂರ ಮತ್ತು 5 ಲವಂಗವನ್ನು ಶುದ್ಧವಾದ ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಶುಕ್ರವಾರ ರಾತ್ರಿ ತಾಯಿ ಲಕ್ಷ್ಮಿದೇವಿಯ ಪಾದಗಳಿಗೆ ಇರಿಸಿ. ಪೂಜಿಸಿದ ನಂತರ ಅದನ್ನು ನಿಮ್ಮ ಕಮಾನಿನಲ್ಲಿ ಇರಿಸಿ. ಇದು ಹಗಲು ರಾತ್ರಿ 4 ಪಟ್ಟು ಆಶೀರ್ವಾದ ಸಿಗುವಂತೆ ಮಡುತ್ತದೆ.
ಇದನ್ನೂ ಓದಿ: ಕುಂಡಲಿಯಲ್ಲಿ ಈ 2 ಗ್ರಹಗಳ ಪ್ರಭಾವದಿಂದಲೂ ಹೆಚ್ಚಾಗುತ್ತಂತೆ ತೂಕ
ಶತ್ರುಗಳಿಂದ ಮುಕ್ತಿ ಹೊಂದಲು: ಪ್ರತಿ ಮಂಗಳವಾರದಂದು 5 ಲವಂಗ ಮತ್ತು ತಾಮ್ರವನ್ನು ಸುಟ್ಟು ಹನುಮಂತನಿಗೆ ಪೂಜೆ ಮಾಡಿ. ಹನುಮಾನ್ ಚಾಲೀಸಾವನ್ನು ಪಠಿಸಿ. ಕೊನೆಗೆ ಲವಂಗ ಮತ್ತು ಕರ್ಪೂರವನ್ನು ಸುಟ್ಟ ನಂತರ ಉಳಿದ ಭಸ್ಮದಿಂದ ಹಣೆಯ ಮೇಲೆ ತಿಲಕ ಹಚ್ಚಿ. ಇದರಿಂದ ನೀವು ಶತ್ರುಗಳನ್ನು ಸುಲಭವಾಗಿ ಸೋಲಿಸಬಹುದು.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.