Dream Sign: ನವದೆಹಲಿ : ಸಾಮಾನ್ಯವಾಗಿ ನಾವೆಲ್ಲರೂ ಕನಸು ಕಾಣುತ್ತೇವೆ. ಕನಸಿನಲ್ಲಿ ಬೇರೆ ಬೇರೆ ವಿಷಯಗಳು ಕಾಣಿಸುತ್ತವೆ. ಕೆಲವೊಮ್ಮೆ ನಾವು ಕಾಣುವ ಕನಸು ಅರ್ಥ ಹೀನ ಎಂದು ಅನಿಸುತ್ತದೆ. ಆದರೆ ಬೀಳುವ ಎಲ್ಲಾ  ಕನಸುಗಳಿಗೂ  ತನ್ನದೇ ಆದ ಅರ್ಥ (meaning of dreams) ಇದೆ ಎನ್ನುತ್ತದೆ ಸ್ವಪ್ನ ಶಾಸ್ತ್ರ . ಕೆಲವೊಂದು ವಸ್ತುಗಳು ಕನಸಿನಲ್ಲಿ ಕಂಡರೆ ಶುಭವಂತೆ. ಇನ್ನು ಕೆಲವು ವಸ್ತುಗಳು ವಿಚಾರಗಳು ಕನಸಿನಲ್ಲಿ ಬಂದರೆ ಅದು ಅಶುಭವಂತೆ.  ಇನ್ನು ಕೆಲವು ವಿಷಯಗಳು ಕನಸಿನಲ್ಲಿ ಕಾಣಿಸಿದರೆ ಅದು ಸಾವಿನ ಸಂಕೇತವಂತೆ.  


COMMERCIAL BREAK
SCROLL TO CONTINUE READING

ಕಪ್ಪು ನೆರಳು : ಕನಸಿನಲ್ಲಿ ಕಪ್ಪು ನೆರಳು ಕಂಡರೆ ಅದು ಅಶುಭವಂತೆ. ಈ ಕನಸು ಅಪಾಯ, ರಹಸ್ಯ,ಸಾವು, ಶೋಕ, ದ್ವೇಷದ ಸಂಕೇತವೆಂದು (meaning of dreams) ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಕಪ್ಪು ನೆರಳು ಕಂಡರೆ ಅದನ್ನು  ಶುಭವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : July Born People: ಜುಲೈನಲ್ಲಿ ಜನಿಸಿದ ವ್ಯಕ್ತಿಯ ಸ್ವಭಾವ ಹೇಗಿರುತ್ತೆ? ಇಲ್ಲಿದೆ ಕೆಲವು ಆಸಕ್ತಿದಾಯಕ ಮಾಹಿತಿ


ಕಪ್ಪು ಬೆಕ್ಕು : ಕಪ್ಪು ಬೆಕ್ಕುಗಳನ್ನು ಕನಸಿನಲ್ಲಿ ನೋಡುವುದನ್ನು ಅಭದ್ರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಕಪ್ಪು ಬೆಕ್ಕನ್ನು (black cat) ನೋಡುವುದು ಅಂದರೆ ಭವಿಷ್ಯದಲ್ಲಿ ಕೆಲವು ಕೆಟ್ಟ ಘಟನೆ ಸಂಭವಿಸಲಿದೆ ಎನ್ನುವ ಸೂಚನೆ ಎಂದೇ ಹೇಳಲಾಗುತ್ತದೆ. 


ಕಾಗೆ :ಕನಸಿನಲ್ಲಿ ಕಾಗೆಯನ್ನು ನೋಡುವುದು ಒಳ್ಳೆಯ ಸಂಕೇತವಲ್ಲ. ಒಬ್ಬ ವ್ಯಕ್ತಿಯು ಕಾಗೆಯನ್ನು ಕನಸಿನಲ್ಲಿ ನೋಡಿದರೆ, ಅದು ಅಹಿತಕರ ಘಟನೆ ಸಂಭವಿಸಲಿದೆ ಎನ್ನುವುದನ್ನು ಸೂಚಿಸುತ್ತದೆಯಂತೆ. 


ಪ್ರಯಾಣ : ಕನಸಿನಲ್ಲಿ, ಪ್ರಯಾಣಿಸುತ್ತಿರುವುದು ಕಂಡರೆ ಅಥವಾ ಪ್ರಯಾಣಕ್ಕೆ (travelling in dreams) ತಯಾರಿ ನಡೆಸುತ್ತಿರುವುದು ಕಂಡರೂ ಅದು ಅಶುಭವಂತೆ.  ಒಂದು ವೇಳೆ ಪ್ರಯಾಣದ ಕನಸು ಬಿದ್ದರೆ ಮುಂದಿನ ದಿನಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು. ಕನಸಿನಲ್ಲಿ ಪ್ರಯಾಣಿಸುವುದು ಕಂಡರೆ ಅದು ಸಾವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ :ಬೇಡಿದ್ದನ್ನು ಈಡೇರಿಸುತ್ತಾಳೆ ಮನೆಯಂಗಳದ ತುಳಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.