ಬೆಂಗಳೂರು : ಜೂನ್ ತಿಂಗಳಲ್ಲಿ, ಸೂರ್ಯ, ಶುಕ್ರ ಮತ್ತು ಮಂಗಳ ಸೇರಿದಂತೆ ಅನೇಕ ಗ್ರಹಗಳ ರಾಶಿ ಬದಲಾವಣೆಯಾಗಲಿದೆ. ಇದರೊಂದಿಗೆ, ಗ್ರಹಗಳ ರಾಜಕುಮಾರ ಬುಧ ಹಿಮ್ಮುಖ ಚಲನೆಯಲ್ಲಿದೆ. ಬುಧವನ್ನು ಸಂಪತ್ತು, ಐಶ್ವರ್ಯ, ಬುದ್ಧಿವಂತಿಕೆ ಮತ್ತು ವ್ಯಾಪಾರ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಬುಧನ ಹೊರತಾಗಿ, ಶನಿದೇವನು ತನ್ನದೇ ಆದ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾರೆ. ಬುಧ ಮತ್ತು ಶನಿಯ ಹಿಮ್ಮುಖ ಚಲನೆಯು ಅನೇಕ ರಾಶಿಯವರ ಜೀವನದಲ್ಲಿ ಹೊಸ  ಸಂತೋಷವನ್ನು ತರುತ್ತದೆ. ಹೊಸ ವೃತ್ತಿ ಅವಕಾಶಗಳು ದೊರೆಯಬಹುದು. 


COMMERCIAL BREAK
SCROLL TO CONTINUE READING

ಮೇಷ ರಾಶಿ : ಬುಧ ಮತ್ತು ಶನಿಯ ಹಿಮ್ಮುಖ ಚಲನೆಯು ಮೇಷ ರಾಶಿಯ ಜನರಿಗೆ ಪ್ರಯೋಜನಕಾರಿಯಾಗಿದೆ.  ವ್ಯಾಪಾರದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಹೊಸ ಹೂಡಿಕೆಗಳನ್ನು ಮಾಡುವುದು ಲಾಭದಾಯಕವಾಗಿರುತ್ತದೆ. ಉದ್ಯೋಗಾಕಾಂಕ್ಷಿಗಳು ಹೊಸ ಅವಕಾಶಗಳನ್ನು ಪಡೆಯಬಹುದು.


ಇದನ್ನೂ ಓದಿ Rahu Nakshatra Parivartan: ಈ 4 ರಾಶಿಯವರ ವೃತ್ತಿ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದ್ದಾನೆ ರಾಹು!


ವೃಷಭ : ವೃಷಭ ರಾಶಿಯವರಿಗೆ ಶನಿ ಮತ್ತು ಬುಧ ಸ್ಥಾನವು ಶುಭವಾಗಲಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯುವ ಅವಕಾಶಗಳು ಹೆಚ್ಚಿವೆ. ಆದಾಯದಲ್ಲಿಯೂ ಹೆಚ್ಚಳವಾಗುವ ಸಾಧ್ಯತೆ ಇದೆ. ನಿರ್ದಿಷ್ಟ ವ್ಯಕ್ತಿಯ ಮಾರ್ಗದರ್ಶನದಿಂದ ವ್ಯಾಪಾರಿಗಳು ಲಾಭ ಗಳಿಸಬಹುದು.  ಆದರೆ ನೆನಪಿರಲಿ ನಿಮ್ಮ ಮಾತಿನಲ್ಲಿ ತಾಳ್ಮೆ ಇರಲಿ. 


ಮಿಥುನ : ಶನಿ ಮತ್ತು ಬುಧನ ಹಿಮ್ಮುಖ ಚಲನೆಯು ಮಿಥುನ ರಾಶಿಯ ಜನರ ಮೇಲೆ ಅನುಕೂಲಕರ ಪರಿಣಾಮವನ್ನು ಬೀರುತ್ತದೆ. ಈ ಅವಧಿಯಲ್ಲಿ ಅಧಿಕ  ಹಣ ಸಂಪಾದನೆಗೆ ಹೊಸ ಮಾರ್ಗ ತೆರೆಯುತ್ತದೆ. ಉದ್ಯೋಗ ಬದಲಾವಣೆಯೊಂದಿಗೆ ಬಡ್ತಿಯ ಅವಕಾಶ ಕೂಡಾ ಸಿಗಲಿದೆ. ಹೊಸ ವಾಹನ ಅಥವಾ ಮನೆ ಖರೀದಿಸುವ  ಯೋಗವಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಯಶಸ್ಸು ಸಿಗಲಿದೆ. 


ಇದನ್ನೂ ಓದಿ : Rahu Nakshatra Parivartan: ಇಂದಿನಿಂದ ಈ 3 ರಾಶಿಯವರಿಗೆ ಹೊಸ ಉದ್ಯೋಗ-ಹಣ ಪ್ರಾಪ್ತಿ


ಧನು ರಾಶಿ : ಧನು ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗುವುದು. ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಲಕ್ಷ್ಮೀಯ  ಆಶೀರ್ವಾದ ಈ ರಾಶಿಯವರ ಮೇಲಿರಲಿದೆ. ನಿಂತು ಹೋಗಿರುವ ಕೆಲಸಗಳನ್ನು ಈ ಸಮಯದಲ್ಲಿ ಪೂರ್ಣಗೊಳಿಸಬಹುದು. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ದೊರೆಯಲಿವೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.