Perl Disadvantages: ರತ್ನ ಶಾಸ್ತ್ರದ ಪ್ರಕಾರ ಪ್ರತಿಯೊಂದು ರತ್ನ ಯಾವುದಾದರೊಂದು ಗ್ರಹಕ್ಕೆ ಸಂಬಂಧಿಸಿದೆ.ರತ್ನ ಶಾಸ್ತ್ರದಲ್ಲಿ ಈ ಕುರಿತು ನಿಖರವಾಗಿ ವರ್ಣಿಸಲಾಗಿದೆ. ಆದರೆ ಯಾವುದೇ ಒಂದು ರತ್ನವನ್ನು ಧರಿಸುವ ಮುನ್ನ ರತ್ನ ತಜ್ಞರ ಸಲಹೆಯನ್ನು ಪಡೆಯಬೇಕು, ಇಲ್ಲದಿದ್ದರೆ ಲಾಭದ ಬದಲು ನಿಮಗೆ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ. ಮುತ್ತು ರತ್ನದ ಕುರಿತು ಹೇಳುವುದಾದರೆ, ಮುತ್ತು ಚಂದ್ರನಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಇದನ್ನು ಧರಿಸುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಕೋಪ ನಿಯಂತ್ರಣದಲ್ಲಿರುತ್ತದೆ. ಆದರೂ ಕೂಡ ಅದನ್ನು ಧರಿಸುವುದು ಎಲ್ಲರಿಗೂ ಪ್ರಯೋಜನಕಾರಿಯಲ್ಲ. ಕೆಲ ಸ್ಥಳೀಯ ಜಾತಕದವರಿಗೆ ಅದು ಹಾನಿಕಾರಕ ಕೂಡ ಸಾಬೀತಾಗಬಹುದು.


COMMERCIAL BREAK
SCROLL TO CONTINUE READING

ಈ ಜಾತಕದವರಿಗೆ ಹಾನಿಯಾಗಬಹುದು
ವೃಷಭ, ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿಯವರು ಮುತ್ತುಗಳನ್ನು ಧರಿಸಬಾರದು. ಇನ್ನೊಂದೆಡೆ, ಶುಕ್ರ, ಬುಧ ಮತ್ತು ಶನಿಗ್ರಹಗಳ ಅಧಿಪತ್ಯ ಹೊಂದಿದವರು ಕೂಡ  ಮುತ್ತುಗಳನ್ನು ಧರಿಸಬಾರದು. ಈ ರಾಶಿಗಳ ಜನರು ಮುತ್ತುಗಳನ್ನು ಧರಿಸುವುದರಿಂದ ಧನಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗುವುದಿಲ್ಲ. ಇದರೊಂದಿಗೆ, ಭಾವನಾತ್ಮಕ ಜನರು ಮುತ್ತುಗಳನ್ನು ಧರಿಸುವುದನ್ನು ತಪ್ಪಿಸಬೇಕು.


ಈ ರತ್ನಗಳೊಂದಿಗೆ ಮುತ್ತುಗಳನ್ನು ಧರಿಸಬೇಡಿ
ಮುತ್ತು ಧರಿಸಲು ಸಲಹೆಗಳನ್ನು ನೀಡುವ ತಜ್ಞರು, ಈಗಾಗಲೇ ನೀಲಮಣಿ, ಓನಿಕ್ಸ್ ಮತ್ತು ವಜ್ರವನ್ನು ಧರಿಸಿದ ಜನರು ಅವುಗಳನ್ನು ಧರಿಸಬಾರದು ಎಂದು ಹೇಳುತ್ತಾರೆ. ಈ ರತ್ನಗಳೊಂದಿಗೆ ಮುತ್ತು ಧರಿಸುವುದು ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.


ಇದನ್ನೂ ಓದಿ-Hybrid Surya Grahan 2023: ಈ ದಿನ ಗೋಚರಿಸಲಿದೆ ಸೂರ್ಯ ಗ್ರಹಣ, 100 ವರ್ಷಗಳಲ್ಲಿ ಇಂತಹ ಗ್ರಹಣ ಇದೆ ಮೊದಲು


ಜಲತತ್ವದ ಸಮಸ್ಯೆ
ಜಾತಕದ 12 ಅಥವಾ 10 ನೇ ಮನೆಯಲ್ಲಿ ಚಂದ್ರ ಇರುವ ಜನರು ಕೂಡ ಮುತ್ತುಗಳನ್ನು ಧರಿಸಬಾರದು. ಇದರೊಂದಿಗೆ ದೇಹದಲ್ಲಿ ಕಫ, ಜಲತತ್ವದ ಸಮಸ್ಯೆಗಳಿದ್ದರೆ ಮುತ್ತುಗಳನ್ನು ಧರಿಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ.


ಇದನ್ನೂ ಓದಿ-Goddess Lakshmi Blessings: ನಿರಂತರವಾಗಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ನಿತ್ಯ ಬೆಳಗ್ಗೆ ಈ ಕೆಲಸ ಮಾಡಲು ಮರೆಯದಿರಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.