Changes From 1st December: ಜನ ಸಾಮಾನ್ಯರ ಪಾಲಿಗೊಂದು ಉಪಯೋಗದ ಸುದ್ದಿ ಪ್ರಕಟವಾಗಿದೆ. ನಾಳೆಯಿಂದ ಈ ವರ್ಷದ ಅಂದರೆ 2022ರ ಕೊನೆಯ ತಿಂಗಳು ಡಿಸೆಂಬರ್ ಪ್ರಾರಂಭವಾಗುತ್ತಿದೆ.
Changes From 1st December: ಜನ ಸಾಮಾನ್ಯರ ಪಾಲಿಗೊಂದು ಉಪಯೋಗದ ಸುದ್ದಿ ಪ್ರಕಟವಾಗಿದೆ. ನಾಳೆಯಿಂದ ಈ ವರ್ಷದ ಅಂದರೆ 2022ರ ಕೊನೆಯ ತಿಂಗಳು ಡಿಸೆಂಬರ್ ಪ್ರಾರಂಭವಾಗುತ್ತಿದೆ. ಪ್ರತಿ ತಿಂಗಳಿನಂತೆ, ಈ ತಿಂಗಳ ಆರಂಭದೊಂದಿಗೆ, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಅನೇಕ ದೊಡ್ಡ ಬದಲಾವಣೆಗಳು ನಡೆಯಲಿವೆ. ಈ ಬದಲಾವಣೆಗಳಲ್ಲಿ CNG ಮತ್ತು LPG ಬೆಲೆಗಳಲ್ಲಿ ಸಂಭವನೀಯ ಬದಲಾವಣೆಗಳು ಮತ್ತು ಪಿಂಚಣಿ ಸಂಬಂಧಿತ ಬದಲಾವಣೆಗಳನ್ನು ಶಾಮೀಲಾಗಿವೆ. ಇದಲ್ಲದೇ ಹಲವು ರೈಲುಗಳ ವೇಳಾಪಟ್ಟಿಯನ್ನು ಕೂಡ ರೈಲ್ವೇ ಬದಲಾಯಿಸಿದೆ. ನಾಳೆಯಿಂದ ಆಗುತ್ತಿರುವ ಈ ಮಹತ್ವದ ಬದಲಾವಣೆಗಳು ಯಾವುದು ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ-Employee's Pension Limit: ಇನ್ಮುಂದೆ 25000 ರೂ. ಪೆನ್ಷನ್ ಸಿಗಲಿದೆ! ಶೇ.333 ವೃದ್ಧಿ, ಹೇಗೆ ಇಲ್ಲಿ ತಿಳಿದುಕೊಳ್ಳಿ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಡಿಸೆಂಬರ್ನಲ್ಲಿ ಹೆಚ್ಚುತ್ತಿರುವ ಮಂಜಿನಿಂದಾಗಿ ರೈಲ್ವೆ ಹಲವು ಬದಲಾವಣೆಗಳನ್ನು ಮಾಡಿದೆ. ಇದರ ಅಡಿಯಲ್ಲಿ, ಅನೇಕ ರೈಲುಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ರೈಲ್ವೆಯು ಡಿಸೆಂಬರ್ 2022 ರಿಂದ ಮುಂದಿನ ವರ್ಷ ಮಾರ್ಚ್ ವರೆಗೆ ಸುಮಾರು 50 ರೈಲುಗಳನ್ನು ರದ್ದುಗೊಳಿಸಿದೆ.
2. ಪಿಂಚಣಿದಾರರಿಗೆ ಒಂದು ಮಹತ್ವದ ಮಾಹಿತಿ. ಪಿಂಚಣಿದಾರರ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕ 30 ನವೆಂಬರ್ 2022 ಆಗಿದೆ. ಅಂದರೆ ನಾಳೆಯಿಂದ ಅವರು ಜೀವನ ಪ್ರಮಾಣಪತ್ರ ಸಲ್ಲಿಸಲು ಸಾಧ್ಯವಿಲ್ಲ. ನೀವು ನಿಮ್ಮ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ ನಿಮ್ಮ ಪಿಂಚಣಿಯನ್ನು ಸಹ ನಿಂತುಹೋಗಬಹುದು. ಹೀಗಾಗಿ ಇಂದೇ ನಿಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು.
3. ಗಮನಾರ್ಹವಾಗಿ, ಸಿಎನ್ಜಿ ಮತ್ತು ಪಿಎನ್ಜಿ ಬೆಲೆಗಳನ್ನು ಪ್ರತಿ ತಿಂಗಳ ಮೊದಲನೆಯ ದಿನದಂದು ಪರಿಶೀಲಿಸಲಾಗುತ್ತದೆ. ಕಳೆದ ಕೆಲವು ತಿಂಗಳುಗಳಲ್ಲಿ ಸಿಎನ್ಜಿ ಮತ್ತು ಪಿಎನ್ಜಿ ಬೆಲೆಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಡಿಸೆಂಬರ್ 1 ರಿಂದ ಸಿಎನ್ಜಿ ಮತ್ತು ಪಿಎನ್ಜಿ ಬೆಲೆಯಲ್ಲಿ ಬದಲಾವಣೆಯಾಗಬಹುದು.
4. ಡಿಸೆಂಬರ್ 1 ರಿಂದ ಪಿಎನ್ಬಿ ಗ್ರಾಹಕರಿಗೆ ಪಾಲಿಗೆ ಒಂದು ದೊಡ್ಡ ಬದಲಾವಣೆಯಾಗುತ್ತಿದೆ.ಡಿಸೆಂಬರ್ 1 ರಿಂದ, PNB ATM ನಿಂದ ಹಣವನ್ನು ಹಿಂತೆಗೆದುಕೊಳ್ಳುವ ವಿಧಾನ ಬದಲಾಗುವ ಸಾಧ್ಯತೆ ಇದೆ. ಈಗ ಯಂತ್ರದಲ್ಲಿ ಕಾರ್ಡ್ ಅನ್ನು ಸೇರಿಸಿದಾಗ, ನೀವು ಫೋನ್ನಲ್ಲಿ OTP ಅನ್ನು ಪಡೆಯುವಿರಿ, ಓಟಿಪಿ ನಮೂದಿಸಿದ ನಂತರವೇ ನೀವು ಹಣವನ್ನು ಹಿಂಪಡೆಯಲು ಸಾಧ್ಯವಾಗಲಿದೆ. ಹೀಗಾಗಿ ಗ್ರಾಹಕರು ಅದರ ಬಗ್ಗೆ ತಿಳಿದುಕೊಳ್ಳಬೇಕು.
5. ನಾಳೆಯಿಂದ ಆಗುವ ಬದಲಾವಣೆಗಳಲ್ಲಿ ಥರ್ಡ್ ಪಾರ್ಟಿ ವಿಮೆಗೆ ಸಂಬಂಧಿಸಿದ ಶುಲ್ಕಗಳ ಹೆಚ್ಚಳ ಕೂಡ ಶಾಮೀಲಾಗಿದೆ. ಆದರೆ, ಈ ಹೆಚ್ಚಳವು ತುಂಬಾ ಮಾಮೂಲಿಯಾಗಿರಲಿದೆ