Best Zodiac Signs For Marriage: ತನ್ನ ಜೀವನ ಸಂಗಾತಿಯಲ್ಲಿ ಒಳ್ಳೆಯ ಗುಣಗಳಿರಬೇಕು ಮತ್ತು ಭಾಗ್ಯಶಾಲಿಗಳಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳಿರುತ್ತವೆ. ಪ್ರತಿಯೊಂದು ರಾಶಿಯ ಸ್ವಭಾವ ಇತರ ರಾಶಿಗಳಿಗಿಂತ  ಭಿನ್ನವಾಗಿರುತ್ತದೆ. ಕೆಲವರು ಕಠಿಣ ಪರಿಶ್ರಮಿಗಳಾಗಿದ್ದರೆ, ಕೆಲವರು ತುಂಬಾ ಸೋಮಾರಿಗಳಾಗಿರುತ್ತಾರೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ರಾಶಿಗಳ ಜನರು ತುಂಬಾ ಸದ್ಗುಣಿಗಲಾಗಿರುತ್ತಾರೆ. ಈ ರಾಶಿಗಳ ಜನರು ತಮ್ಮ ಕಾರ್ಯಕ್ಷೇತ್ರದಲ್ಲಿ ತುಂಬಾ ನಿಪುಣರಾಗಿರುತ್ತಾರೆ. ಹಾಗಾದರೆ ಬನ್ನಿ ಈ ಸದ್ಗುಣಿ ಹಾಗೂ ಉತ್ತಮ ಬಾಳಸಂಗಾತಿ ಸಾಬೀತಾಗುವ ಜನರ ಜಾತಕಗಳ ಕುರಿತು ತಿಳಿದುಕೊಳ್ಳೋಣ,


COMMERCIAL BREAK
SCROLL TO CONTINUE READING

ವೃಷಭ ರಾಶಿ
>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯವರು ಉತ್ತಮ ಗುಣವುಳ್ಳವರಾಗಿರುತ್ತಾರೆ.
>> ಈ ರಾಶಿ ಜನರು ತಮ್ಮ ಸಂಗಾತಿಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ.
>> ಈ ಜನರಿಗೆ ಇತರರನ್ನು ಹೇಗೆ ಸಂತೋಷಪಡಿಸಬೇಕೆಂದು ಚನ್ನಾಗಿ ತಿಳಿದಿದೆ.
>> ವೃಷಭ ರಾಶಿಯ ಜನರು ವಿಶ್ವಾಸಾರ್ಹರು ಮತ್ತು ಪ್ರಾಮಾಣಿಕರು.
>> ಈ ಜನರು  ಉತ್ತಮ ಸ್ನೇಹಿತರೆಂದು ಸಹ ಸಾಬೀತುಪಡಿಸುತ್ತಾರೆ. 


ಸಿಂಹ ರಾಶಿ
>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯ ಜನರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ.
>> ಈ ಜನರು ಎಲ್ಲದರಲ್ಲೂ ನಿಪುಣರಾಗಿರುತ್ತಾರೆ.
>> ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಈ ಜನರಿಗೆ ಚನ್ನಾಗಿ ತಿಳಿದಿರುತ್ತದೆ.
>> ಈ ಜನರು ತಮ್ಮ ಸಂಗಾತಿಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ ಮತ್ತು ಪ್ರತಿ ಕೆಲಸದಲ್ಲಿ ಅವರಿಗೆ ಸಹಾಯ ಮಾಡುತ್ತಾರೆ.
>> ಸಿಂಹ ರಾಶಿಯ ಜನರು ತುಂಬಾ ಶ್ರಮಜೀವಿಗಳು.
>> ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ, ಈ ಜನರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.


ಕರ್ಕ ರಾಶಿ
>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕ ರಾಶಿಯ ಜನರು ತಮ್ಮ ಸಂಗಾತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.
>> ಈ ಜನರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಯಾವುದೇ ಹಂತಕ್ಕೆ ಹೋಗಲು ಕೂಡ ರೆಡಿಯಾಗಿರುತ್ತಾರೆ.
>> ಕರ್ಕ ರಾಶಿಯ ಜನರು ತುಂಬಾ ಸದ್ಗುಣಿಗಳಾಗಿರುತ್ತಾರೆ.
>> ಈ ಜನರು ಎಲ್ಲಾ ಕೆಲಸಗಳಲ್ಲಿ ಪರಿಣಿತಿಯನ್ನು  ಹೊಂದಿರುತ್ತಾರೆ. 
>> ಆದರೆ, ಈ ಜನರು ಅಷ್ಟೇ ಭಾವನಾತ್ಮಕರು ಕೂಡ ಹೌದು.


ಇದನ್ನೂ ಓದಿ-Chanakya niti : ಈ ಕೆಲಸ ಮಾಡಲು ಮುಜುಗರ ಪಡಲೇ ಬಾರದು, ಇಲ್ಲೇ ಅಡಗಿದೆ ಯಶಸ್ಸಿನ ಗುಟ್ಟು


ಮೀನ  ರಾಶಿ
>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಯವರನ್ನು ಪ್ರತಿಯೊಂದು ಕೆಲಸದಲ್ಲಿ ನಿಪುಣ್ಯರು ಎಂದು ಪರಿಗಣಿಸಲಾಗುತ್ತದೆ.
>> ಈ ಜನರು ತಮ್ಮ ಬಾಳಸಂಗಾತಿ ಅಥವಾ ಪತ್ನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ.
>> ಈ ಜನರು ಯಾವಾಗಲೂ ಸಹಾಯ ಮಾಡಲು ತತ್ಪರರಾಗಿರುತ್ತಾರೆ. 
>> ಎಂತಹ ಕಠಿಣ ಪರಿಸ್ಥಿತಿ ಬಂದರು ಕೂಡ ಮೀನ ರಾಶಿಯ ಜನರು ತಮ್ಮ ಸಂಗಾತಿಗೆ ಬೆಂಬಲವಾಗಿ ನಿಲ್ಲುತ್ತಾರೆ. 


ಇದನ್ನೂ ಓದಿ-ರಾತ್ರಿ ಅನ್ನ ಸೇವನೆ ಆರೋಗ್ಯಕ್ಕೆ ಹಾನಿಕಾರಕವೇ ? ಏನು ಹೇಳುತ್ತಾರೆ ತಜ್ಞರು ?


(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.