Chanakya niti : ಈ ಕೆಲಸ ಮಾಡಲು ಮುಜುಗರ ಪಡಲೇ ಬಾರದು, ಇಲ್ಲೇ ಅಡಗಿದೆ ಯಶಸ್ಸಿನ ಗುಟ್ಟು

ಚಾಣಕ್ಯ ನೀತಿಯಲ್ಲಿ, ಜೀವನದಲ್ಲಿ ಏನು ಮಾಡಬೇಕು ಮತ್ತು ಯಾವುದರಿಂದ  ದೂರವಿರಬೇಕು, ಯಾವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸಲಾಗಿದೆ. ಅಲ್ಲದೆ ಕೆಲವೊಂದು ಕೆಲಸಗಳನ್ನು ಮಾಡಲು ಯಾವುದೇ ಕಾರಣಕ್ಕೂ ಮುಜುಗರ ಪಡಬಾರದು ಎಂದು ಕೂಡಾ ಹೇಳಲಾಗಿದೆ.

Written by - Ranjitha R K | Last Updated : May 17, 2022, 12:35 PM IST
  • ಗುರುವು ಜ್ಞಾನವನ್ನು ನೀಡಿದಾಗ ತಡೆಹಿಡಿಯಬೇಡಿ
  • ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹಿಂಜರಿಕೆ ಬೇಡ
  • ಹಳೆಯ ಮತ್ತು ಸಾದಾ ಬಟ್ಟೆಗಳನ್ನು ಧರಿಸಲು ನಾಚಿಕೆಬೇಡ
Chanakya niti : ಈ ಕೆಲಸ ಮಾಡಲು ಮುಜುಗರ ಪಡಲೇ ಬಾರದು, ಇಲ್ಲೇ ಅಡಗಿದೆ ಯಶಸ್ಸಿನ ಗುಟ್ಟು  title=
Chanakya niti (file photo)

ಬೆಂಗಳೂರು : ಆಚಾರ್ಯ ಚಾಣಕ್ಯ ಮಹಾನ್ ವಿದ್ವಾಂಸ ಮತ್ತು ಯೋಗ್ಯ ಶಿಕ್ಷಕರಾಗಿದ್ದರು.  ಚಾಣಕ್ಯ ಅವರಿಗೆ ಅನೇಕ ವಿಷಯಗಳ ಬಗ್ಗೆ ಆಳವಾದ ತಿಳುವಳಿಕೆ ಇತ್ತು. ಚಾಣಕ್ಯ ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ರಚಿಸಿದ್ದರು. ಚಾಣಕ್ಯ ನೀತಿಯಲ್ಲಿ, ಅನೇಕ ಕಷ್ಟಕರವಾದ ತತ್ವಗಳನ್ನು ಸುಲಭವಾದ ಭಾಷೆಯಲ್ಲಿ ವಿವರಿಸಲಾಗಿದೆ. ಆಚಾರ್ಯ ಚಾಣಕ್ಯ ಚಕ್ರವರ್ತಿ ಚಂದ್ರಗುಪ್ತ ಮೌರ್ಯನಿಗೆ ಮಾರ್ಗದರ್ಶನ ನೀಡಿದ್ದಲ್ಲದೆ, ಚಾಣಕ್ಯ ನೀತಿಯ ಮೂಲಕ, ಈಗಿನ ಕಾಲದಲ್ಲೂ ದಾರಿ ತಪ್ಪಿದ ಜನರು ಸರಿದಾರಿಗೆ ತರುವಂತೆ ಮಾಡುವಲ್ಲಿ ಸಹಾಯವಾಗಿದ್ದಾರೆ.  ಚಾಣಕ್ಯ ನೀತಿಯಲ್ಲಿ, ಜೀವನದಲ್ಲಿ ಏನು ಮಾಡಬೇಕು ಮತ್ತು ಯಾವುದರಿಂದ  ದೂರವಿರಬೇಕು, ಯಾವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸಲಾಗಿದೆ. ಅಲ್ಲದೆ ಕೆಲವೊಂದು ಕೆಲಸಗಳನ್ನು ಮಾಡಲು ಯಾವುದೇ ಕಾರಣಕ್ಕೂ ಮುಜುಗರ ಪಡಬಾರದು ಎಂದು ಕೂಡಾ ಹೇಳಲಾಗಿದೆ.

1. ಗುರುವು ಜ್ಞಾನವನ್ನು ನೀಡಿದಾಗ ತಡೆಹಿಡಿಯಬೇಡಿ :
ಆಚಾರ್ಯ ಚಾಣಕ್ಯರ ಪ್ರಕಾರ ತನ್ನ ಗುರುಗಳು ಹೇಳಿದ ಜ್ಞಾನವನ್ನು ಯಾವುದೇ ಭಯ ಮತ್ತು ಸಂಕೋಚವಿಲ್ಲದೆ ಸ್ವೀಕರಿಸುವ ವಿದ್ಯಾರ್ಥಿ ಅತ್ಯುತ್ತಮ ವಿದ್ಯಾರ್ಥಿಯಾಗಿರುತ್ತಾನೆ. ಭಯ ಮತ್ತು  ಸಂಕೋಚದ ಕಾರಣದಿಂದ ಗುರುಗಳಿಗೆ ಪ್ರಶ್ನೆಗಳನ್ನು ಕೇಳದ ವಿದ್ಯಾರ್ಥಿಯು ಭವಿಷ್ಯದಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ : Vastu Tips: ಮನೆಗೆ ಲಕ್ಷ್ಮಿ ಬರುವ ಮುನ್ನವೇ ಸಿಗುತ್ತೆ ಹಲವು ಸಂಕೇತ

2. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹಿಂಜರಿಕೆ ಬೇಡ : 
ಚಾಣಕ್ಯ ನೀತಿಯ ಪ್ರಕಾರ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎಂದಿಗೂ ಹಿಂಜರಿಯಬಾರದು. ಹಣದ ವಿಷಯದಲ್ಲಿ ಹಿಂಜರಿಯುವವರು ಹಣವನ್ನು ಕಳೆದುಕೊಳ್ಳಬೇಕಾಗಬಹುದು. ಕೊಟ್ಟ ಸಾಲವನ್ನು ಕೇಳಲು ಎಂದಿಗೂ ಹಿಂಜರಿಯಬಾರದು. ಅದೇ ರೀತಿಯಲ್ಲಿ, ನೀವು ಯಾರೊಂದಿಗಾದರೂ ವ್ಯಾಪಾರ ಮಾಡಿದರೆ, ಅವನೊಂದಿಗೆ ಸ್ಪಷ್ಟವಾದ ವ್ಯವಹಾರವನ್ನು ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಹಣವನ್ನು ಕಳೆದುಕೊಳ್ಳಬಹುದು.

3. ಹಳೆಯ ಮತ್ತು ಸಾದಾ ಬಟ್ಟೆಗಳನ್ನು ಧರಿಸಲು ನಾಚಿಕೆಬೇಡ : 
ಹಳೆಯ ಅಥವಾ ಸರಳವಾದ ಬಟ್ಟೆಗಳನ್ನು ಧರಿಸಲು ನಾಚಿಕೆಪಡಬಾರದು. ನೀವು ಹಳೆಯ ಬಟ್ಟೆಗಳನ್ನು ಧರಿಸಿರಲಿ ಅಥವಾ ದುಬಾರಿಯಾಗಿದರಲಿ ಅದು ಮುಖ್ಯವಲ್ಲ. ಆದರೆ ನೀವು ಬಟ್ಟೆಯನ್ನು ಹೇಗೆ ಧರಿಸುತ್ತೀರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ : ಮನಿ ಪ್ಲಾಂಟ್ ಹಾಕುವಾಗ ಆಗುವ ಈ 5 ತಪ್ಪುಗಳ ಬಗ್ಗೆ ಇರಲಿ ಎಚ್ಚರ ..! ಮನೆಯಿಂದ ಆಗಬಹುದು ಲಕ್ಷ್ಮೀಯ ನಿರ್ಗಮನ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News