Lucky People: ಒಬ್ಬ ವ್ಯಕ್ತಿ ತುಂಬಾ ಅದೃಷ್ಟ ಹೊತ್ತು ಜನಿಸಿದ್ದಾನೆ ಎಂದು ಆಗಾಗ್ಗೆ ಜನರು ಆಡಿಕೊಳ್ಳುವುದನ್ನು ನೀವು ಕೇಳಿರಬಹುದು ಮತ್ತು ಆತನಿಗೆ ಜೀವನದಲ್ಲಿ ಎಲ್ಲವೂ ಸುಲಭವಾಗಿ ಸಿಗುತ್ತದೆ ಎನ್ನುತ್ತಾರೆ. ಇದು ಬಹುತೇಕ ಮಟ್ಟಿಗೆ ನಿಜ. ಕೆಲವರು ತಮ್ಮ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಅವರಿಗೆ ಉನ್ನತ ಸ್ಥಾನ, ಹಣ, ಪ್ರತಿಷ್ಠೆ ಎಲ್ಲವೂ ಸಿಗುತ್ತದೆ. ಜ್ಯೋತಿಷ್ಯದ ಪ್ರಕಾರ, ಅವರ ರಾಶಿಯಲ್ಲಿ ಮತ್ತು ಜಾತಕದಲ್ಲಿ ಶುಭ ಗ್ರಹಗಳ ಸ್ಥಾನಗಳು ಇದರ ಹಿಂದಿನ ಕಾರಣ ಎನ್ನಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ರಾಶಿಗಳ ಜನರು ಹುಟ್ಟಿನಿಂದ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಈ ರಾಶಿಗಳ ಜನರು ತುಂಬಾ ಅದೃಷ್ಟವಂತರು
ಮೇಷ ರಾಶಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಜನರು ಹುಟ್ಟಿನಿಂದಲೇ ಅದೃಷ್ಟವಂತರು. ಈ ಜನರು ಅಂತಹ ಕೆಲವು ಗುಣಗಳನ್ನು ಹೊಂದಿರುತ್ತಾರೆ, ಅವುಗಳ ಆಧಾರದ ಮೇಲೆ ತಮ್ಮ ಜೀವನದಲ್ಲಿ ಬಹಳಷ್ಟು ಯಶಸ್ಸು ಮತ್ತು ಪ್ರಗತಿಯನ್ನು ಸಾಧಿಸುತ್ತಾರೆ. ಅಪಾರ ಸಂಪತ್ತು ಕೂಡ ಅವರಿಗೆ ಪ್ರಾಪ್ತಿಯಾಗುತ್ತದೆ. ಈ ಜನರು ತಮ್ಮ ಕೆಲಸವನ್ನು ಎಲ್ಲರಿಂದ ಸುಲಭವಾಗಿ ಮಾಡಿಸಿಕೊಳ್ಳುತ್ತಾರೆ. ಆದಾಗ್ಯೂ, ಇತರರಿಗೆ ಒಳ್ಳೆಯದನ್ನು ಮಾಡುವುದರಲ್ಲಿ ಇವರು ಹಿಂದೆ ಸರಿಯುವುದಿಲ್ಲ.


ಇದನ್ನೂ ಓದಿ-Hindu New Year: ಶೀಘ್ರದಲ್ಲಿಯೇ ಹೊಸ ಸಂವತ್ಸರ ಆರಂಭ, 30 ವರ್ಷಗಳ ಬಳಿಕ ಶುಭ ಸಂಯೋಗ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ


ಕರ್ಕ ರಾಶಿ: ಕರ್ಕ ರಾಶಿಯ ಜನರು ಶ್ರಮಜೀವಿಗಳು ಮತ್ತು ಶುದ್ಧ ಹೃದಯವಂತರು ಆಗಿರುತ್ತಾರೆ. ಇವರು ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ತಮ್ಮ ಪ್ರತಿಯೊಂದು ಕನಸನ್ನು ನನಸಾಗಿಸುತ್ತಾರೆ. ಅವರು ಸಾಕಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಸಾಕಷ್ಟು ಖರ್ಚು ಮಾಡುತ್ತಾರೆ. ಇವರು ಇತರರಿಗೆ ಸಹಾಯ ಮಾಡಲು ಹಣವನ್ನು ನೀಡಲು ಹಿಂಜರಿಯುವುದಿಲ್ಲ.


ಇದನ್ನೂ ಓದಿ-ದೇವಗುರು ಬೃಹಸ್ಪತಿಯ ಮನೆಗೆ ಶುಕ್ರನ ಪ್ರವೇಶ, 3 ರಾಶಿಗಳ


ಸಿಂಹ ರಾಶಿ: ಸಿಂಹ ರಾಶಿಯ ಜನರು ಬಲಿಷ್ಠರು, ಧೈರ್ಯವಂತರು ಮತ್ತು ನಿರ್ಭೀತರಾಗಿರುತ್ತಾರೆ. ಇವರ ವ್ಯಕ್ತಿತ್ವದಲ್ಲಿ ಒಂದು ವಿಭಿನ್ನ ರೀತಿಯ ಆಕರ್ಷಣೆ ಇರುತ್ತದೆ. ಇವರು ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಇವರಿಲ್ಲಿರುವ ನಾಯಕತ್ವದ ಸಾಮರ್ಥ್ಯ ಅದ್ಭುತವಾಗಿರುತ್ತದೆ. ಇವರು ಯಾವಾಗಲೂ ಇತರರಿಗೆ ಸಹಾಯ ಮಾಡಲು ತತ್ಪರಾಗಿರುತ್ತಾರೆ.


ಇದನ್ನೂ ಓದಿ-ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ, ಮೂರು ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಭಾಗ್ಯೋದಯ!


ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ತುಂಬಾ ಅದೃಷ್ಟವಂತರು ಮತ್ತು ಪ್ರತಿಯೊಂದು ಕೆಲಸದಲ್ಲೂ ನಿಪುಣರಾಗಿರುತಾರೆ. ಇವರು ಸಾಕಷ್ಟು ಶ್ರಮಶೀಲರು ಮತ್ತು ಬುದ್ಧಿವಂತರು ಕೂಡ ಹೌದು. ಇವರು ಯಾವಾಗಲೂ ತಮ್ಮ ಕನಸುಗಳನ್ನು ಪೂರೈಸುತ್ತಾರೆ.


ಇದನ್ನೂ ಓದಿ-Garud Puran Lessons: ಇಂತಹ ಸಂಗಾತಿ ಇದ್ದರೆ ಜೀವನವೇ ನರಕಾಗುತ್ತದೆ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.