ದೇವಗುರು ಬೃಹಸ್ಪತಿಯ ಮನೆಗೆ ಶುಕ್ರನ ಪ್ರವೇಶ, 3 ರಾಶಿಗಳ ಜನರ ಮೇಲೆ ಭಾರಿ ಹಣದ ಸುರಿಮಳೆ, ಸಿಗಲಿದೆ ಬಡ್ತಿ ಭಾಗ್ಯ!

Venus Entry To Jupiter House: ಪಂಚಾಂಗದ ಪ್ರಕಾರ ವೈಭವ-ಧನಸಂಪತ್ತು ಕರುಣಿಸುವ ಶುಕ್ರ ಗ್ರಹ ಶೀಘ್ರದಲ್ಲೇ  ತನ್ನ ಉಚ್ಛ ರಾಶಿಯಾಗಿರುವ ಮೀನ ರಾಶಿಯಲ್ಲಿ ಗೋಚರಿಸಲಿದೆ. ಇದರಿಂದ 3 ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಬಡ್ತಿ ಭಾಗ್ಯ ಸಿಗಲಿದೆ. ದೇವ ಗುರು ಬೃಹಸ್ಪತಿಯ ಮನೆ ಎಂದೇ ಕರೆಯಲಾಗುವ ಮೀನ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಯಾವ ಮೂರು ರಾಶಿಗಳ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ ನೋಡೋಣ ಬನ್ನಿ,  

Written by - Nitin Tabib | Last Updated : Feb 12, 2023, 01:03 PM IST
  • ಈ ಸಂಕ್ರಮಣದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಸ್ಥಳೀಯರ ಮೇಲೆ ಗೋಚರಿಸಲಿದೆ.
  • ಆದರೆ ಶುಕ್ರನ ರಾಶಿ ಪರಿವರ್ತನೆ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ತುಂಬಾ ಫಲಪ್ರದ ಸಾಬೀತಾಗಲಿದೆ.
  • ಆ ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ದೇವಗುರು ಬೃಹಸ್ಪತಿಯ ಮನೆಗೆ ಶುಕ್ರನ ಪ್ರವೇಶ, 3 ರಾಶಿಗಳ ಜನರ ಮೇಲೆ ಭಾರಿ ಹಣದ ಸುರಿಮಳೆ, ಸಿಗಲಿದೆ ಬಡ್ತಿ ಭಾಗ್ಯ! title=
ಬೃಹಸ್ಪತಿಯ ರಾಶಿಯಲ್ಲಿ ಶುಕ್ರ

Shukra Gochar In Pisces: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ಉಚ್ಛ ಹಾಗೂ ನೀಚ ರಾಶಿಯನ್ನು ಪ್ರವೇಶಿಸುತ್ತವೆ. ಇದರ ಪರಿಣಾಮ ಮಾನವ ಜೀವನ ಮತ್ತು ಭೂಮಿಯ ಮೇಲೆ ಕಂಡುಬರುತ್ತದೆ. ಸಂಪತ್ತು ಮತ್ತು ಧನ ಸಂಪತ್ತನ್ನು ಕರುಣಿಸುವ ಶುಕ್ರನು ತನ್ನ ಉತ್ಕೃಷ್ಟ ರಾಶಿಯಾಗಿರುವ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಮೀನ ರಾಶಿಗೆ ದೇವಗುರು ಬೃಹಸ್ಪತಿ ಅಧಿಪತಿ ಮತ್ತು ಗುರು ಗ್ರಹವು ಪ್ರಸ್ತುತ ಯುವಾವಸ್ಥೆಯಲ್ಲಿ ಸಂಚರಿಸುತ್ತಿದೆ. ಹೀಗಾಗಿ ಈ ಸಂಕ್ರಮಣದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಸ್ಥಳೀಯರ ಮೇಲೆ ಗೋಚರಿಸಲಿದೆ. ಆದರೆ ಶುಕ್ರನ ರಾಶಿ ಪರಿವರ್ತನೆ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ತುಂಬಾ ಫಲಪ್ರದ ಸಾಬೀತಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. 

ವೃಷಭ ರಾಶಿ
ವೃಷಭ ರಾಶಿಯವರಿಗೆ ಶುಕ್ರ ಸಂಕ್ರಮನ ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ಶುಕ್ರ ಗ್ರಹವು ನಿಮ್ಮ ರಾಶಿಯಿಂದ ಏಕಾದಶ ಭಾವದಲ್ಲಿ ಚಲಿಸಲಿದೆ. ಈ ಸ್ಥಳದಲ್ಲಿ ಶುಕ್ರನು ತುಂಬಾ ಬಲಿಷ್ಠನಾಗಿದ್ದಾನೆ. ಹೀಗಾಗಿ ನೀವು ಹಳೆಯ ಹೂಡಿಕೆಗಳಿಂದ ಲಾಭ ಪಡೆಯಬಹುದು. ಇದರೊಂದಿಗೆ ವ್ಯಾಪಾರ ವರ್ಗದ ಜನರ ಆದಾಯದಲ್ಲಿ ಹೆಚ್ಚಳವಾಗಲಿದೆ. ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಲಾಭದ ಸಂಕೆತಗಳಿವೆ. ಅಲ್ಲದೆ, ಈ ಅವಧಿಯಲ್ಲಿ ನಿಮ್ಮ ಎಲ್ಲಾ ಆಸೆಗಳು ಈಡೇರಲಿವೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.

ಇದನ್ನೂ ಓದಿ-ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ, ಮೂರು ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಭಾಗ್ಯೋದಯ!

ಮಿಥುನ ರಾಶಿ
ಶುಕ್ರನ ರಾಶಿ ಬದಲಾವಣೆಯು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಇದರಿಂದ ಮಾಲವ್ಯ ಮತ್ತು ಹಂಸ ಎಂಬ ಎರಡು ರಾಜಯೋಗಗಳು ರೂಪುಗೊಳ್ಳಲಿವೆ. ಹೀಗಾಗಿ ಈ ಅವಧಿಯಲ್ಲಿ ಉದ್ಯೋಗ ವೃತ್ತಿಯ ಜನರು ಇನ್ಕ್ರಿಮೆಂಟ್ ಮತ್ತು ಬಡ್ತಿ ಪಡೆಯಬಹುದು. ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆಯಬಹುದು. ಇದರೊಂದಿಗೆ, ಉದ್ಯಮಿಗಳಿಗೆ ಹಠಾತ್ ಧನ ಲಾಭದ ಸಾಧ್ಯತೆಗಳಿವೆ. ನೀವು ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಲಕ್ಷಣಗಳು ಕಂಡುಬರುತ್ತಿವೆ.

ಇದನ್ನೂ ಓದಿ-Garud Puran Lessons: ಇಂತಹ ಸಂಗಾತಿ ಇದ್ದರೆ ಜೀವನವೇ ನರಕಾಗುತ್ತದೆ!

ಧನು ರಾಶಿ
ಶುಕ್ರನ ಸಂಚಾರ ಧನು ರಾಶಿಯವರಿಗೆ ತುಂಬಾ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದಲ್ಲಿಯೂ ಮಾಲವ್ಯ ಮತ್ತು ಹಂಸ ಎಂಬ ರಾಜಯೋಗಗಳು ರೂಪುಗೊಳ್ಳಲಿವೆ. ಹೀಗಾಗಿ ನೀವು ಈ ಅವಧಿಯಲ್ಲಿ ಆಸ್ತಿಯನ್ನು ಖರೀದಿಸಬಹುದು. ನಿಮಗೆ ಪಿತ್ರಾರ್ಜಿತ ಆಸ್ತಿ ಕೂಡ ಲಭಿಸಲಿದೆ ಮತ್ತು ಪ್ರವಾಸೋದ್ಯಮ, ಪ್ರಯಾಣ, ರಿಯಲ್ ಎಸ್ಟೇಟ್, ಹೋಟೆಲ್ ಲೈನ್‌ಗೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಈ ಸಮಯವು ಉತ್ತಮ ಸಾಬೀತಗಲಿದೆ. ಅಲ್ಲದೆ, ನಿಮ್ಮ ತಾಯಿಯೊಂದಿಗಿನ ನಿಮ್ಮ ಸಂಬಂಧವು ಈ ಸಮಯದಲ್ಲಿ ಉತ್ತಮವಾಗಿರುತ್ತದೆ. ಇದೇ ವೇಳೆ, ನೀವು ಕ್ರಾರ್ಯಕ್ಷೇತ್ರದಲ್ಲಿ ಕಿರಿಯ ಮತ್ತು ಹಿರಿಯರ ಬೆಂಬಲ ಪಡೆಯುವಿರಿ. ಬಡ್ತಿಯ ಅವಕಾಶಗಳೂ ಸೃಷ್ಟಿಯಾಗುತ್ತಿವೆ.

ಇದನ್ನೂ ಓದಿ-Valentine's Day 2023: ಸಂಗಾತಿಗೆ ಮರೆತೂ ಕೂಡ ಈ 5 ಉಡುಗೊರೆಗಳನ್ನು ಕೊಡಬೇಡಿ, ಇಲ್ದಿದ್ರೆ ಸಂಬಂಧದಲ್ಲಿ ಬಿರುಕು ತಪ್ಪಿದ್ದಲ್ಲ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News