ಮೆಟ್ಟಿಲು ಹತ್ತುವಾಗ ಮತ್ತು ಇಳಿಯುವಾಗ ಏರುಸಿರು ಬರುತ್ತಿದ್ದರೆ ಈ ರೋಗದ ಅಪಾಯವಿರಬಹುದು ..!
ಕೆಲವರಿಗೆ 3ರಿಂದ 4 ಮೆಟ್ಟಿಲು ಹತ್ತಿದ ಕೂಡಲೇ ಉಸಿರುಗಟ್ಟುತ್ತದೆ. ಇದು ಸಾಮಾನ್ಯವಲ್ಲ. ಈ ರೀತಿಯಾದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು .
ಬೆಂಗಳೂರು : ಮೂರು ನಾಲ್ಕು ಮಹಡಿಗಳ ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆ ಎದುರಾಗುವುದು ಸಹಜ. ಆದರೆ ಕೆಲವರಿಗೆ 3ರಿಂದ 4 ಮೆಟ್ಟಿಲು ಹತ್ತಿದ ಕೂಡಲೇ ಉಸಿರುಗಟ್ಟುತ್ತದೆ. ಇದು ಸಾಮಾನ್ಯವಲ್ಲ. ಈ ತೊಂದರೆ ಎದುರಿಸುತ್ತಿದ್ದರೆ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಇದರ ಹಿಂದೆ ಹಲವು ಕಾರಣಗಳಿರಬಹುದು.
ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆಯ ಲಕ್ಷಣಗಳು :
ಎದೆ ನೋವು, ಜ್ವರ ಅಥವಾ ಬೆವರುವುದು, ಕೆಮ್ಮು, ಕೈ ಕಾಲು ವಿಪರೀತ ನೋವು, ಪಾದಗಳ ಊತ, ತುರಿಕೆ ಅಥವಾ ದದ್ದು, ತಲೆ ಸುತ್ತುವುದು.
ಇದನ್ನೂ ಓದಿ : ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಪರಿಣಾಮಕಾರಿಯಾಗಿವೆ ಈ ನಾಲ್ಕು ಡ್ರೈ ಫ್ರೂಟ್ಸ್ ..!
ಯಾವ ಕಾರಣಗಳಿಂದಾಗಿ, ಮೆಟ್ಟಿಲುಗಳನ್ನು ಹತ್ತುವಾಗ ಏರುಸಿರು ಬರುತ್ತದೆ :
ಅಲರ್ಜಿ ಅಥವಾ ಅಸ್ತಮಾ :
ದೇಹದಿಂದ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಹಾಕಲು ಮತ್ತು ಆಮ್ಲಜನಕವನ್ನು ಒದಗಿಸಲು ಉಸಿರಾಟದ ವ್ಯವಸ್ಥೆಗೆ ಶ್ವಾಸಕೋಶಗಳು, ಮೆದುಳು ಮತ್ತು ಎದೆಯ ಸ್ನಾಯುಗಳ ಅಗತ್ಯವಿದೆ. ನೀವು ಮೆಟ್ಟಿಲುಗಳನ್ನು ಹತ್ತಿದ ತಕ್ಷಣ ಉಸಿರಾಟದ ತೊಂದರೆ ಎದುರಾದರೆ ಅದು ಅಲರ್ಜಿ ಅಥವಾ ಅಸ್ತಮಾದ ಕಾರಣದಿಂದಾಗಿರಬಹುದು.
ಸ್ಥೂಲಕಾಯತೆ :
ಅಧಿಕ ತೂಕ ಹೊಂದಿರುವ ಜನರು ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆಯನ್ನು ಎದುರಿಸಬೇಕಾಗುತ್ತದೆ.ಆದ್ದರಿಂದ ನಿಮಗೆ ಉಸಿರಾಟದ ತೊಂದರೆ ಇದ್ದರೆ ತೂಕವನ್ನು ನಿಯಂತ್ರಿಸಿಕೊಳ್ಳಿ.
ಇದನ್ನೂ ಓದಿ : ಆಯುರ್ವೇದದಲ್ಲಿ ಬಳಸುವ ಈ ಎಲೆ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ
ಜಡ ಜೀವನಶೈಲಿ :
ಜಡ ಜೀವನಶೈಲಿ ಅಂದರೆ ನಿಷ್ಕ್ರಿಯ ಜೀವನಶೈಲಿ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಕ್ರಿಯಾಶೀಲವಾಗಿರುವುದರಿಂದ ಹೃದಯ ಸ್ನಾಯುಗಳಿಗೆ ಹೆಚ್ಚಿನ ಶ್ರಮ ಬೇಕಾಗುತ್ತದೆ. ಈ ಕಾರಣದಿಂದಾಗಿ ನೀವು ಮೆಟ್ಟಿಲುಗಳನ್ನು ಹತ್ತಿದ ತಕ್ಷಣ ಉಸಿರಾಟವು ಪ್ರಾರಂಭವಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.