Benefits of Drinking Kombucha : ಕೊಂಬುಚಾ ಎಂಬ ಹೆಸರು ನೀವು ಮೊಟ್ಟಮೊದಲ ಬಾರಿಗೆ ಕೇಳುತ್ತಿರಬಹುದು. ಕೊಂಬುಚಾ ಒಂದು ಹಗುರವಾದ ಎನರ್ಜೆಟಿಕ್ ಡ್ರಿಂಕ್ ಆಗಿದ್ದು, ಬ್ಲಾಕ್ ಅಥವಾ ಗ್ರೀನ್ ಟೀ ರೀತಿಯೇ ಇದೆ. ಆರೋಗ್ಯ ಲಾಭಕ್ಕಾಗಿ ಇದನ್ನು ಹೆಚ್ಚನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಇದರಲ್ಲಿರುವ ಹೆಲ್ದಿ ಎಲಿಮೆಂಟ್ಸ್ ಗಳು ಹೊಟ್ಟೆಯ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಈ ಆರೋಗ್ಯಕರ ಸಂಗತಿಗಳು ತೂಕ ಇಳಿಕೆ


COMMERCIAL BREAK
SCROLL TO CONTINUE READING

ಗೂ ಕೂಡ ಸಹಕಾರಿಯಾಗಿವೆ. ಹಲವು ಬಾಲಿವುಡ್ ನಟ-ನಟಿಯರು ತಮ್ಮನ್ನು ತಾವು ಫಿಟ್ ಆಗಿರಿಸಲು ಈ ಪಾನೀಯವನ್ನು ಸೇವಿಸಿ ಎನರ್ಜೆಟಿಕ್ ಆಗಿ ಇರುತ್ತಾರೆ. ಹಾಗಾದರೆ ಬನ್ನಿ ಈ ಕೊಂಬುಚಾ ಡ್ರಿಂಕ್ ಸೇವನೆಯಿಂದಾಗುವ ಲಾಭಗಲೇನು ತಿಳಿದುಕೊಳ್ಳೋಣ,


ಏನಿದು ಕೊಂಬುಚಾ?
ಕೊಂಬುಚಾ ಒಂದು ರೀತಿಯ ಫರ್ಮೆಂಟೆಡ್ ಕಪ್ಪು ಚಹಾ ಅಂದರೆ ಬ್ಲಾಕ್ ಟೀ ಆಗಿದೆ. ಈ ಬ್ಲಾಕ್ ಟೀ ಅನ್ನು ಟೀ ಫಂಗಸ್ ಸಹಾಯದಿಂದ ಫರ್ಮೆಂಟ್ ಮಾಡಲಾಗುತ್ತದೆ. ಕೆಲ ದಿನಗಳಿಂದ ಹಿಡಿದು, ಕೆಲ ವಾರಗಳವರೆಗೆ ಈ ಪ್ರಕ್ರಿಯೆ ನಡೆಸಲಾಗುತ್ತದೆ ಎನ್ನಲಾಗಿದೆ. ಈ ಪ್ರಕ್ರಿಯೆಯಲ್ಲಿ ಸಕ್ಕರೆಯನ್ನು ಕೂಡ ಬಳಸಲಾಗುತ್ತದೆ. ಈ ಫರ್ಮೆಂಟ್ ಪ್ರಕ್ರಿಯೆ ಮುಗಿದ ಬಳಿಕ, ನೀವು ನಿಮ್ಮ ಇಚ್ಛೆಗೆ ಅನುಗುಣವಾಗಿ ಇದರಲ್ಲಿ ಪದಾರ್ಥಗಳನ್ನು ಬೆರೆಸಬಹುದು. ಇದನ್ನು ಬಿಸಿ ಅಥವಾ ತಣ್ಣಗೆ ಎರಡೂ ವಿಧದಲ್ಲಿ  ಕುಡಿಯಬಹುದು. ಇದು ಕೆಫೀನ್ ಮುಕ್ತವಾಗಿರುವ ಒಂದು ಪಾನೀಯವಾಗಿದೆ.


ಕೊಂಬುಚಾ  ಡ್ರಿಂಕ್ ಸೇವನೆಯ ಲಾಭಗಳು
ಟೀಸ್ಟಿ ಟೀ-
ಕೊಂಬುಚಾ ನಿಧಾನ ಗತಿಯಲ್ಲಿ ಫರ್ಮೆಂಟ್ ಮಾಡಲಾಗುವ ಕಾರಣ, ಅದರಲ್ಲಿರುವ ಹಲವಾರು ಕಿಣ್ವಗಳು, ಸಕ್ಕರೆ ಮತ್ತು ಚಹಾವನ್ನು 7 ರಿಂದ 10 ದಿನಗಳ ಅವಧಿಯಲ್ಲಿ ಸ್ವಲ್ಪ ಹುಳಿ, ಕಾರ್ಬೊನೇಟೆಡ್ ಮತ್ತು ರಿಫ್ರೆಶ್ ಪಾನೀಯವಾಗಿ ಪರಿವರ್ತಿಸುತ್ತದೆ, ಹೀಗಾಗಿ ಅದು  ಉತ್ತಮ ರುಚಿಯನ್ನು ನೀಡುತ್ತದೆ.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ- ಕೊಂಬುಚಾ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಳಗೆ ಕಂಡುಬರುವ ಬ್ಯಾಕ್ಟೀರಿಯಾವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಆದರೆ, ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ.
 
ತೂಕ ಇಳಿಕೆಗೆ ಸಹಕಾರಿ- ತೂಕ ಇಳಿಕೆಗೆ ಗ್ರೀನ್ ಟೀ ಅತ್ಯುತ್ತಮ ಎಂದು ಹೇಳಲಾಗುತ್ತದೆ. ಹೋಲಿಸುವುದು ತಪ್ಪಾದರೂ ಕೂಡ, ನೀವು ಚಹಾದಿಂದ ಕೊಂಬುಚಾವನ್ನು ತಯಾರಿಸಿದಾಗ, ಅದು ನಿಮ್ಮ ಕರುಳನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳುವಲ್ಲಿ ಇದು ಸಹಾಯ ಮಾಡುತ್ತದೆ.


ಇದನ್ನೂ ಓದಿ-ತೂಕ ಇಳಿಕೆಗೆ ಮಾಡಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಒಂದು ಅದ್ಭುತ ಪಾನೀಯ!
 
ಯಕೃತ್ತು ಆರೋಗ್ಯಕ್ಕೆ ಉತ್ತಮ- ದೇಹಕ್ಕೆ ಹಾನಿ ಉಂಟುಮಾಡುವ ಹಲವು ಅಂಶಗಳನ್ನು ಕೊಂಬುಚಾ ಕೊಲ್ಲುತ್ತದೆ. ಜೊತೆಗೆ, ಕೊಂಬುಚಾ ಯಕೃತ್ತನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಅದನ್ನು ಹಾನಿಗೊಳಗಾಗುವ ವಸ್ತುಗಳಿಂದ ರಕ್ಷಿಸುತ್ತದೆ.


ಇದನ್ನೂ ಓದಿ-Anti-Hairfall Oil: ಈ ಎಣ್ಣೆ ಹಚ್ಚಿ ಕೇವಲ 5 ನಿಮಿಷ ಮಸಾಜ್ ಮಾಡಿ, ಕೂದಲುದುರುವಿಕೆ ತಕ್ಷಣ ನಿಂತ್ಹೋಗುತ್ತದೆ!

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.