Remedy for Dark Underarms: ನಿಂಬೆ ರಸಭರಿತವಾದ ಆಹಾರವಾಗಿದ್ದು ಅದು ರುಚಿಯಲ್ಲಿ ಹುಳಿಯಾಗಿದೆ. ನಿಂಬೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಕಂಡುಬರುತ್ತದೆ. ಇದು ನಿಮ್ಮ ಚರ್ಮವನ್ನು ಕಾಂತಿಯುತಗೊಳಿಸುವ ಕಾರ್ಯನಿರ್ವಹಿಸುತ್ತದೆ. ಇಂದು ನಾವು ನಿಂಬೆ ಅಂಡರ್ ಆರ್ಮ್ಸ್ ಮಾಸ್ಕ್ ಮಾಡುವ ವಿಧಾನವನ್ನು ನಿಮಗೆ ಹೇಳಲಿದ್ದೇವೆ. ಅಂಡರ್ ಆರ್ಮ್ಸ್ ಅಥವಾ ಕಂಕುಳ ಭಾಗವು ಸಂಪೂರ್ಣವಾಗಿ ಆವರಿಸಿರುವ ಕಾರಣ ಗಾಳಿಯು ಒಳಗೆ ಪ್ರವೇಶಿಸುವುದಿಲ್ಲ. ಇದರಿಂದಾಗಿ ನೀವು ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆಯನ್ನು ಎದುರಿಸಲು ಪ್ರಾರಂಭಿಸುತ್ತೀರಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Diabetes : ಬೆಳಗ್ಗೆ ಎದ್ದ ತಕ್ಷಣ ಈ ಸಮಸ್ಯೆಗಳಾದ್ರೆ ನಿರ್ಲಕ್ಷ್ಯ ಬೇಡ! ಇದು ಮಧುಮೇಹದ ಸೂಚನೆ


ಆದರೆ ಈ ಸಮಸ್ಯೆಯನ್ನು ನಿಂಬೆ ರಸ ಬಳಸುವ ಮೂಲಕ ತೆಗೆದುಹಾಕಬಹುದು, ಇದರಿಂದ ಮೈಬಣ್ಣ ಸುಧಾರಿಸುತ್ತದೆ. ನಿಂಬೆ ಅಂಡರ್ ಆರ್ಮ್ಸ್ ಮಾಸ್ಕ್ ಮಾಡುವ ವಿಧಾನವನ್ನು ತಿಳಿಯೋಣ.


ನಿಂಬೆ ಅಂಡರ್ ಆರ್ಮ್ಸ್ ಮಾಸ್ಕ್ ಮಾಡಲು ಬೇಕಾಗುವ ಸಾಮಾಗ್ರಿಗಳು:


  • ಅರ್ಧ ಟೀಚಮಚ ನಿಂಬೆ ರಸ

  • ಗ್ಲಿಸರಿನ್ ಒಂದು ಟೀಚಮಚ


ನಿಂಬೆ ಅಂಡರ್ ಆರ್ಮ್ಸ್ ಮಾಸ್ಕ್ ಮಾಡುವುದು ಹೇಗೆ?


  • ನಿಂಬೆ ಅಂಡರ್ ಆರ್ಮ್ಸ್ ಮಾಸ್ಕ್ ಮಾಡಲು, ಮೊದಲು ಒಂದು ಬೌಲ್ ತೆಗೆದುಕೊಳ್ಳಿ.

  • ನಂತರ ಅದಕ್ಕೆ ನಿಂಬೆ ರಸವನ್ನು ಹಾಕಿ. ಬಳಿಕ ಒಂದು ಚಮಚ ಗ್ಲಿಸರಿನ್ ಬೆರೆಸಿ ಮಿಶ್ರಣ ಮಾಡಿ

  • ಈ ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ

  • ಈಗ ನಿಮ್ಮ ನಿಂಬೆ ಅಂಡರ್ ಆರ್ಮ್ಸ್ ಮಾಸ್ಕ್ ಸಿದ್ಧವಾಗಿದೆ.


ನಿಂಬೆ ಅಂಡರ್ ಆರ್ಮ್ಸ್ ಮಾಸ್ಕ್ ಅನ್ನು ಹೇಗೆ ಹಚ್ಚಬೇಕು?


  • ಮಾಸ್ಕ್ ನ್ನು ಕಂಕುಳಿಗೆ ಚೆನ್ನಾಗಿ ಹಚ್ಚಿರಿ.

  • ನಂತರ ಸುಮಾರು 15 ನಿಮಿಷಗಳ ಕಾಲ ಬಿಡಿ.

  • ಅಂತಿಮವಾಗಿ ನೀರಿನಿಂದ ಅದನ್ನು ಸ್ವಚ್ಛಗೊಳಿಸಿ.

  • ತಕ್ಷಣವೇ ನಿಮಗೆ ಫಲಿತಾಂಶ ಸಿಗುತ್ತದೆ.


ಇದನ್ನೂ ಓದಿ: Health Tips: ಒಂದಲ್ಲ ಎರಡಲ್ಲ, 14 ಗುಣಗಳಿಂದ ಕೂಡಿದ ಈ ವಿಶೇಷ ಹಣ್ಣು ಕ್ಯಾನ್ಸರ್ ರೋಗವನ್ನು ಬುಡಸಮೇತ ಕಿತ್ತುಹಾಕುತ್ತದೆ


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.