ಬೆಂಗಳೂರು: ಸುಂದರವಾದ ಕೂದಲು ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಆರೋಗ್ಯಕರವಾದ ಹೊಳೆಯುವ ಕೂದಲು ಎಲ್ಲರನ್ನೂ ಆಕರ್ಷಿಸುತ್ತದೆ. ಹೊಳೆಯುವ ಕೂದಲು ಆರೋಗ್ಯಕರ ಕೂದಲಿನ ಸಂಕೇತ ಎಂತಲೂ ಬಣ್ಣಿಸಲಾಗುತ್ತದೆ. ಹಾಗಾಗಿಯೇ, ಅನಾದಿ ಕಾಲದಿಂದಲೂ ಹೊಳೆಯುವ, ಉದ್ದವಾದ, ಸ್ಟ್ರಾಂಗ್ ಕೂದಲು ನಮ್ಮದಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ನೀವೂ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ ಕೂದಲ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿಯಾದ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಹೇರ್ ಕೇರ್ ಜ್ಯೂಸ್ ಬಗ್ಗೆ ಈ ಲೇಖನದಲ್ಲಿದೆ ಮಾಹಿತಿ.


COMMERCIAL BREAK
SCROLL TO CONTINUE READING

ಹೊಳೆಯುವ, ಉದ್ದ ಕೂದಲಿಗೆ ಮನೆಯಲ್ಲಿಯೇ ತಯಾರಿಸಿ ಈ ಹೇರ್ ಜ್ಯೂಸ್: 
ಹೌದು, ತಜ್ಞರ ಪ್ರಕಾರ, ನೀವು ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳನ್ನು ಬಳಸಿ ಜ್ಯೂಸ್ ತಯಾರಿಸಿ ಬಳಸುವ ಮೂಲಕ ಉದ್ದವಾದ, ಬಲವಾದ, ಹೊಳೆಯುವ ಕೂದಲನ್ನು ನಿಮ್ಮದಾಗಿಸಬಹುದು. ಇದಕ್ಕಾಗಿ ಕೆಲವೇ ಕೆಲವು ಪದಾರ್ಥಗಳು ಬೇಕಾಗುತ್ತವೆ. 


ಇದನ್ನೂ ಓದಿ- Dandruff Problem​: ಡ್ಯಾಂಡ್ರಫ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೆ ಈ ಮನೆಮದ್ದು


ಕೂದಲು ಬೆಳವಣಿಗೆಯ ಜ್ಯೂಸ್ ತಯಾರಿಸಲು ಬೇಕಾಗುವ ಪದಾರ್ಥಗಳು:
* ಕಿತ್ತಳೆ ಹಣ್ಣು
* ನೆಲ್ಲಿ ಕಾಯಿ 
* ಬೀಟ್ರೂಟ್
* ಎಳನೀರು 
* ಆಲಿವ್ ಸೀಡ್ಸ್ 


ಹೇರ್ ಕೇರ್ ಜ್ಯೂಸ್ ತಯಾರಿಸುವ ವಿಧಾನ:
ಉದ್ದವಾದ, ಬಲವಾದ, ಹೊಳೆಯುವ ಕೂದಲನ್ನು ಪಡೆಯಲು ಮೊದಲು ಕಿತ್ತಳೆ ಹಣ್ಣು, ನೆಲ್ಲಿ ಕಾಯಿ, ಎಳನೀರು, ಬೀಟ್ರೂಟ್ ಮತ್ತು ನೆನೆಸಿದ ಆಲಿವ್ ಸೀಡ್ಸ್ ಗಳನ್ನು ತೆಗೆದುಕೊಂಡು  ಗ್ರೈಂಡರ್ನಲ್ಲಿ  ಚೆನ್ನಾಗಿ ರುಬ್ಬಿಕೊಳ್ಳಿ. ಈ ಅದ್ಭುತವಾದ ಜ್ಯೂಸ್ ಅನ್ನು ವಾರದಲ್ಲಿ ಕನಿಷ್ಠ ಮೂರರಿಂದ ನಾಲ್ಕು ಬಾರಿ ಸೇವಿಸುತ್ತಾ ಬಂದರೆ ಶೀಘ್ರದಲ್ಲೇ ನಿರೀಕ್ಷಿತ ಫಲಿತಾಂಶ ಗೋಚರಿಸಲಿದೆ. 


ಇದನ್ನೂ ಓದಿ- Hair Care : ಉದ್ದ, ದಪ್ಪ ಕೂದಲಿಗಾಗಿ ಈ ವಸ್ತುಗಳನ್ನು ಎಣ್ಣೆಯಲ್ಲಿ ಬೆರೆಸಿ ಹಚ್ಚಿ.!


ಕಿತ್ತಳೆ ಹಣ್ಣು, ನೆಲ್ಲಿ ಕಾಯಿ, ಎಳನೀರು, ಬೀಟ್ರೂಟ್ ಕೂದಲಿಗೆ ಹೇಗೆ ಪ್ರಯೋಜನಕಾರಿ ಆಗಿದೆ?
* ಕಿತ್ತಳೆಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ವಿಟಮಿನ್ ಸಿ ಕೂದಲಿನ ಬೆಳವಣಿಗೆಯನ್ನು ಸ್ಥಿರಗೊಳಿಸಲು ಮತ್ತು ಅವುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.


* ಅನಾದಿ ಕಾಲದಿಂದಲೂ ಕೂದಲ ಆರೋಗ್ಯಕ್ಕೆ ನೆಲ್ಲಿಕಾಯಿಯನ್ನು ಅತ್ಯುತ್ತಮ ಪದಾರ್ಥ ಎಂದು ಪರಿಗಣಿಸಲಾಗಿದೆ. ಇದು ನೈಸರ್ಗಿಕವಾಗಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಅಮಲ್ಟಾಗಳನ್ನು ಹೊಂದಿರುತ್ತದೆ. ನೆಲ್ಲಿ ಕಾಯಿ ಬಳಕೆಯಿಂದ ಹೇರ್ ಫಾಲ್, ತಲೆಹೊಟ್ಟಿನ ಸಮಸ್ಯೆ ದೂರವಾಗುವುದರ ಜೊತೆಗೆ ಉದ್ದವಾದ, ಹೊಳೆಯುವ ಕೂದಲನ್ನೂ ಕೂಡ ನಿಮ್ಮದಾಗಿಸಬಹುದು.


* ಬಹಳಷ್ಟು ವಿಟಮಿನ್‌ಗಳು ಮತ್ತು ಮಿನರಲ್‌ಗಳ ಆಗರವಾಗಿರುವ ಎಳನೀರು ಕೂದಲ ಬೆಳವಣಿಗೆಗೆ ಅಗತ್ಯವಾದ ವಿಟಮಿನ್ ಸಿ, ವಿಟಮಿನ್ ಬಿ 6, ಪೊಟ್ಯಾಸಿಯಮ್ ಮತ್ತು ರಂಜಕವನ್ನು ಹೊಂದಿದೆ.


* ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಹೊಂದಿರುವ ಬೀಟ್ರೂಟ್ ಕೂಡ ಕೂದಲ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.