ಬೆಂಗಳೂರು: ಗುರುವಾರ ದಿನವನ್ನು ಭಗವಾನ್ ಹರಿ ವಿಷ್ಣುವಿಗೆ ಅರ್ಪಿಸಲಾಗಿದೆ. ಹಾಗಾಗಿ ಗುರುವಾರದಂದು ಶ್ರದ್ಧಾ ಭಕ್ತಿಯಿಂದ ಸ್ವಚ್ಚ ಮನಸ್ಸಿನಿಂದ ವಿಷ್ಣುವನ್ನು ಪೂಜಿಸುವುದರಿಂದ ಅಪೇಕ್ಷಿತ ಫಲ ನಿಮಗೆ ದೊರೆಯುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ ಗುರುವಾರ ಉಪವಾಸವು ಜೀವನದ ಅನೇಕ ಕಷ್ಟಕರ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಈ ಉಪವಾಸವನ್ನು ಆಚರಿಸಲು ಕೆಲವು ವಿಶೇಷ ನಿಯಮಗಳಿವೆ, ಈ ಬಗ್ಗೆ ಗಮನ ಕೊಡುವುದು ಸಹ ಬಹಳ ಮುಖ್ಯ.


COMMERCIAL BREAK
SCROLL TO CONTINUE READING

ಗುರುವಾರದ ಉಪವಾಸದ ವೇಳೆ ಈ ನಿಯಮಗಳನ್ನು ತಪ್ಪದೇ ಪಾಲಿಸಿ:
1. ಗುರುವಾರ ಬೆಳಿಗ್ಗೆ ಬೇಗನೆ ಎದ್ದು ಹರಿ ವಿಷ್ಣುವಿನ (Vishnu) ಹೆಸರಿನಲ್ಲಿ ಸಂಕಲ್ಪ ಮಾಡಿ ಉಪವಾಸ ಮಾಡಿ. ಬೆಳಿಗ್ಗೆ ಸ್ನಾನ ಮಾಡಿದ ನಂತರ ಸ್ವಚ್ಛವಾದ ಹಳದಿ ಬಟ್ಟೆಗಳನ್ನು ಮಾತ್ರ ಧರಿಸಬೇಕು ಎಂಬುದನ್ನು ನೆನಪಿನಲ್ಲಿಡಿ.


ಇದನ್ನೂ ಓದಿ- Snake Plant Benefits: ಬಹಳ ಉಪಯುಕ್ತ ಈ ಸ್ನೇಕ್ ಪ್ಲಾಂಟ್, ಖರೀದಿಸುವ ಮೊದಲು ಇದನ್ನು ತಿಳಿಯಿರಿ


2. ವಿಷ್ಣುವನ್ನು ಪೂಜಿಸಿ ಮತ್ತು ಗುರುವಾರ ಉಪವಾಸದ ಕಥೆಯನ್ನು ಕೇಳಿ. ಪೂಜೆ ಸಮಯದಲ್ಲಿ ಭಗವಾನ್ ವಿಷ್ಣುವಿಗೆ ಹಳದಿ ಹೂವುಗಳು, ಹಳದಿ ಸಿಹಿತಿಂಡಿಗಳು, ಹಳದಿ ಅಕ್ಕಿ, ಬೇಳೆ, ಒಣ ದ್ರಾಕ್ಷಿ ಮತ್ತು ಅರಿಶಿನ ಸೇರಿದಂತೆ ಹಳದಿ ವಸ್ತುಗಳನ್ನು ಅರ್ಪಿಸಬೇಕು. ಈ ಪೂಜೆಯ ಸಂದರ್ಭದಲ್ಲಿ ನೀವು ನಿಮ್ಮ ಮನಸ್ಸಿನ ಇಚ್ಛೆಯನ್ನು ಪೂರ್ಣಗೊಳಿಸುವಂತೆ ವಿಷ್ಣುವನ್ನು ಪ್ರಾರ್ಥಿಸಿ.


3. ಇದರ ನಂತರ, ಬಾಳೆ (Banana) ಮರವನ್ನು ಪೂಜಿಸಿ. ನೀರಿನಲ್ಲಿ ಸ್ವಲ್ಪ ಅರಿಶಿನ ಬೆರೆಸಿ ಬಾಳೆ ಮರದ ಮೇಲೆ ಅರ್ಪಿಸಿ. ಮರದ ಬೇರುಗಳಿಗೆ ಬೇಳೆ ಮತ್ತು ಒಣ ದ್ರಾಕ್ಷಿಯನ್ನು ಅರ್ಪಿಸಿ. ಈಗ ಒಂದು ದೀಪವನ್ನು ಬೆಳಗಿಸಿ ಬಾಳೆ ಮರಕ್ಕೆ ಆರತಿಯನ್ನು ಮಾಡಿ.


ಇದನ್ನೂ ಓದಿ- Saturday Remedies: ಶನಿವಾರ ಅಪ್ಪಿ-ತಪ್ಪಿಯೂ ಕೂಡ ಈ ವಸ್ತುಗಳನ್ನು ಖರೀದಿಸಬೇಡಿ, ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ


4. ಈ ಉಪವಾಸದ ಸಮಯದಲ್ಲಿ, ಸಂಜೆಯ ಕಥೆ ಮತ್ತು ಆರತಿಯನ್ನು ಮಾಡಿನ ನಂತರ ಆಹಾರ ಸೇವಿಸಿ. ನೆನಪಿಡಿ ಉಪವಾಸದ ವೇಳೆ ಒಂದೇ ಸಮಯ ಮಾತ್ರ ಆಹಾರ ಸೇವಿಸಬೇಕು.  ಈ ದಿನ ಉಪ್ಪು ಸೇವಿಸುವುದನ್ನು ತಪ್ಪಿಸಿ. ಸಾಧ್ಯವಾದರೆ, ಈ ದಿನ  ಹಳದಿ ಹಣ್ಣುಗಳನ್ನು ಮಾತ್ರ ಸೇವಿಸಿ.


5. ಈ ದಿನ, ಬಟ್ಟೆ ಒಗೆಯುವುದು, ಕೂದಲು ಅಥವಾ ಗಡ್ಡವನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಉಪವಾಸದ ದಿನ ಯಾರನ್ನೂ ಗೇಲಿ ಮಾಡಬೇಡಿ. ಇದಕ್ಕೆ ವಿರುದ್ಧವಾಗಿ, ಇಂದು ಜನರಿಗೆ ಸೇವೆ ಮಾಡಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.