Saturday Remedies: ಶನಿವಾರ ಅಪ್ಪಿ-ತಪ್ಪಿಯೂ ಕೂಡ ಈ ವಸ್ತುಗಳನ್ನು ಖರೀದಿಸಬೇಡಿ, ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ

Saturday Remedies - ಶನಿವಾರ (Saturday) ಶನಿ ದೇವನಿಗೆ (Shani Dev) ಸಮರ್ಪಿತ ದಿನ. ಈ ದಿನ ಕೆಲ ವಸ್ತುಗಳನ್ನು ಖರೀದಿಸಿ ಮನೆಗೆ ತರಬಾರದು ಎನ್ನಲಾಗುತ್ತದೆ. ಒಂದು ವೇಳೆ ನೀವೂ ಕೂಡ ನಿಮ್ಮ ಮನೆಯಲ್ಲಿ ಸುಖ-ಶಾಂತಿ ನೆಲೆಸಲು ಬಯಸುತ್ತಿದ್ದರೆ, ಶನಿವಾರ ಈ ಕೆಲಸಗಳನ್ನು ಮಾಡುವುದರಿಂದ ದೊರವಿರಿ.

Written by - Nitin Tabib | Last Updated : Apr 23, 2021, 09:49 PM IST
  • ಶನಿವಾರ ಶನಿದೇವನ ದಿನ
  • ಈ ದಿನ ಕೆಲ ವಸ್ತುಗಳ ಖರೀದಿಯಿಂದ ದೂರ ಉಳಿಯಿರಿ.
  • ಜೊತೆಗೆ ಕೂದಲು ಹಾಗೂ ಉಗುರುಗಳನ್ನು ಕಟ್ ಮಾಡಬೇಡಿ.
Saturday Remedies: ಶನಿವಾರ ಅಪ್ಪಿ-ತಪ್ಪಿಯೂ ಕೂಡ ಈ ವಸ್ತುಗಳನ್ನು ಖರೀದಿಸಬೇಡಿ, ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ title=
Saturday Remedies

ನವದೆಹಲಿ: Saturday Remedies - ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ದಿನ ಮತ್ತು ತಿಥಿ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶನಿದೇವ ಅತಿ ಬೇಗ ಮುನಿಸಿಕೊಳ್ಳುತ್ತಾರೆ ಎನ್ನಲಾಗುತ್ತದೆ ಹಾಗೂ ವಾರದ ಈ ದಿನ ಶನಿದೇವ ಮುನಿಸಿ ಕೊಳ್ಳುವ ಯಾವುದೇ ಕೆಲಸ ಮಾಡಬಾರದು ಎಂದು ಹೇಳಲಾಗಿದೆ. ಮನೆಯಲ್ಲಿ ಸುಖ-ಶಾಂತಿ ಬಯಸುತ್ತಿದ್ದರೆ, ಶನಿವಾರ ಕೆಲ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಆವಶ್ಯಕ.

ಶನಿವಾರ ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ (What Not To Do On Saturday)
ಬಹುತೇಕ ಜನರಿಗೆ ಶನಿವಾರ ರಜಾದಿನ ಇರುತ್ತದೆ. ಹೀಗಾಗಿ ಅವರು ಶಾಪಿಂಗ್ ಮಾಡಲು ಹಾಗೂ ತಿರುಗಾಡಲು ಶನಿವಾರವನ್ನು ಕಾಯ್ದಿರಿಸುತ್ತಾರೆ. ಆದರೆ, ಹಿಂದೂ ಧರ್ಮದಲ್ಲಿ ಶನಿವಾರಕ್ಕಾಗಿ ಕೆಲ ನಿಯಮಗಳನ್ನು ಮಾಡಲಾಗಿದೆ. ಈ ನಿಯಮಗಳ ಪ್ರಕಾರ ಶನಿವಾರದ ದಿನ ಕೆಲ ವಸ್ತುಗಳನ್ನು ಖರೀದಿಸಬಾರದು ಮತ್ತು ಕೆಲ ಕೆಲಸಗಳನ್ನು ಮಾಡುವುದರಿಂದ ದೂರವಿರಬೇಕು  (Saturday Remedies).

ಇದನ್ನೂ ಓದಿ-HOME REMEDIES- ಹೊಟ್ಟೆ ಸಮಸ್ಯೆಯಿಂದ ಹಿಡಿದು ಮನೆ ಕ್ಲೀನ್ ವರೆಗೆ ಉಪಯುಕ್ತ, ಬೆಲೆ ಕೇವಲ 8 ರೂ.

ಶನಿವಾರ ಏನನ್ನು ಖರೀದಿಸಬಾರದು?
ಶನಿವಾರ ಕಬ್ಬಿಣ, ಲೋಹದಿಂದ ತಯಾರಿಸಿದ ವಸ್ತುಗಳು, ಉಪ್ಪು, ಕರಿ ಎಳ್ಳು, ಸಾಸಿವೆ ಎಣ್ಣೆ, ಕರಿ ಚಪ್ಪಲಿ ಇತ್ಯಾದಿಗಳನ್ನು ಖರೀದಿಸಬಾರದು. ಈ ದಿನ ಉಪ್ಪು ಖರೀದಿಸುವುದರಿಂದ ಸಾಲದ ಹೊರೆ ಹೆಚ್ಚಾಗುತ್ತದೆ. ಕರಿ ಎಳ್ಳು ಅಥವಾ ಕರಿ ಚಪ್ಪಲಿ ಖರೀದಿಸುವುದರಿಂದ ಆಗುವ ಕೆಲಸಗಳು ನಿಂತು ಹೋಗುತ್ತವೆ. ಶನಿವಾರ ಬಟ್ಟೆಗಳನ್ನು ಕೂಡ ಖರೀದಿಸಬಾರದು (What Not To Buy On Saturday).

ಇದನ್ನೂ ಓದಿ- ಧನಲಾಭವೋ ದಟ್ಟ ದಾರಿದ್ರ್ಯವೋ.? ಮನೆಯಲ್ಲಿನ ಈ ಐದು ಶಕುನ ಹೇಳುತ್ತೆ ನಿಮ್ಮ ಗ್ರಹಗತಿ

ಶನಿವಾರ ಈ ಕೆಲಸಗಳನ್ನು ಮಾಡಬಾರದು
ಶನಿವಾರ ಉಗುರು ಹಾಗೂ ಕೂದಲುಗಳನ್ನು ಕತ್ತರಿಸಬಾರದು. ಜೊತೆಗೆ ಕೆಂಪು ಬಣ್ಣದ ಆಹಾರ ಪದಾರ್ಥಗಳ ಸೇವನೆಯಿಂದ ಕೂಡ ದೂರ ಇರಬೇಕು. ಈ ದಿನ ಉಪ್ಪು, ಪೊರಕೆ ಹಾಗೂ ಬಟ್ಟೆಗಳನ್ನು ದಾನವಾಗಿ ನೀಡಬಾರದು. ವಿನಾಕಾರಣ ಯಾರೊಂದಿಗೂ ಕೂಡ ಜಗಳ ಕಾಯಬೇಡಿ.

ಇದನ್ನೂ ಓದಿ- Rashi Parivartan 2021: ಮೇ ತಿಂಗಳಿನಲ್ಲಿ 3 ದೊಡ್ಡ ಗ್ರಹಗಳ ನಡೆ ಪರಿವರ್ತನೆ, ಈ ರಾಶಿಯ ಮೇಲೆ ಅತಿ ಹೆಚ್ಚು ಪ್ರಭಾವ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News