ನವದೆಹಲಿ : ಹಿಂದೂ ಧರ್ಮದಲ್ಲಿ, ಅರಿಶಿನಕ್ಕೆ (Turmeric) ವಿಶೇಷ ಪ್ರಾಮುಖ್ಯತೆ ಇದೆ. ಇದು ಭಗವಾನ್ ವಿಷ್ಣು ಮತ್ತು ಗುರು ಗ್ರಹಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತದೆ (importance of turmeric). ಜೀವನದಲ್ಲಿ ಇವರಿಬ್ಬರ ಕೃಪೆಯಿದ್ದರೆ ವ್ಯಕ್ತಿಯ ಜೀವನದಲ್ಲಿ ಎಲ್ಲವೂ ಸುಖಮಯ. ಎಲ್ಲಾ ಕೆಲಸ ಕಾರ್ಯಗಳಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ.  ಆದರೆ, ವಿಷ್ಣು (Lord Vishnu) ಮತ್ತು ಗುರು ಗ್ರಹದ (Jupiter) ಅನುಗ್ರಹವಿಲ್ಲದಿದ್ದರೆ, ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುವುದಿಲ್ಲ. ಗುರು ಕೃಪೆಯಿಂದ ಜಾತಕದ ಅನೇಕ ಗ್ರಹದೋಷಗಳು ನಿವಾರಣೆಯಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುವ ದಾರಿ ಸುಲಭವಾಗುತ್ತದೆ. ಗುರುವಾರ ಭಗವಾನ್ ವಿಷ್ಣು ಮತ್ತು ಗುರು ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಗುರುವಾರದ ದಿನ ಅರಶಿನವನ್ನು ಈ ರೀತಿ ಬಳಸಿದರೆ,  ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ತುಂಬಿ ತುಳುಕುತ್ತದೆ. 


COMMERCIAL BREAK
SCROLL TO CONTINUE READING

ಈ ಅರಿಶಿನವನ್ನು ಈ ರೀತಿ ಬಳಸಿದರೆ ಒಲಿಯುತ್ತದೆ ಯಶಸ್ಸು :  
ಗುರುವಾರದಂದು ಭಗವಾನ್ ವಿಷ್ಣುವನ್ನು (Lord Vishnu) ಪೂಜಿಸಬೇಕು. ಮತ್ತು ವಿಷ್ಣುವಿಗೆ ಅರಿಶಿನದ ತಿಲಕವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಶೀಘ್ರವೇ ವಿವಾಹ ಯೋಗ ಕೂಡಿ ಬರುತ್ತದೆ.  ವೈವಾಹಿಕ ಜೀವನದ ಸಮಸ್ಯೆಗಳನ್ನು ತೊಡೆದುಹಾಕಲು ಇದು ಉತ್ತಮ ಮಾರ್ಗವಾಗಿದೆ.  


ಇದನ್ನೂ ಓದಿ : 2022ರಲ್ಲಿ ಸಂಭವಿಸಲಿರುವ ಸೂರ್ಯಗ್ರಹಣ,ಚಂದ್ರಗ್ರಹಣಗಳು ಎಷ್ಟು? ಯಾರ ಮೇಲೆ ಹೇಗೆ ಪರಿಣಾಮ ಬೀರಲಿದೆ ?


ಗುರುವಾರದಂದು ಪೂಜೆಯ ವೇಳೆ, ಮಣಿಕಟ್ಟಿಗೆ ಮತ್ತು ಕುತ್ತಿಗೆಗೆ ಅರಿಶಿನವನ್ನು (Turmeric) ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ಗುರು ಗ್ರಹವು ಬಲಗೊಳ್ಳುತ್ತದೆ ಮತ್ತು ಪ್ರತಿ ಕೆಲಸದಲ್ಲಿ ಯಶಸ್ಸನ್ನು ನೀಡುತ್ತದೆ. 


ಗುರುವಾರದಂದು ಸ್ನಾನ ಮಾಡುವ ನೀರಿನಲ್ಲಿ ಚಿಟಿಕೆ ಅರಿಶಿನ ಸೇರಿಸಿ ಸ್ನಾನ ಮಾಡುವುದರಿಂದ ಉದ್ಯೋಗ-ವ್ಯವಹಾರದಲ್ಲಿ ಲಾಭವಾಗುತ್ತದೆ. ಇದು ಆದಾಯವನ್ನು ಹೆಚ್ಚಿಸುತ್ತದೆ. 


ನೀವು ಸಂದರ್ಶನ ಅಥವಾ ಪರೀಕ್ಷೆಗೆ ಹೊರಡುವಾಗ ಒಂದು ಚಿಟಿಕೆ ಅರಿಶಿನವನ್ನು ಕರವಸ್ತ್ರದಲ್ಲಿ ಹಾಕಿಕೊಳ್ಳಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಯಶಸ್ಸು ಪಡೆಯಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ : Parivartan: ಈ 4 ರಾಶಿಯವರಿಗೆ ಸೂರ್ಯನ ಕೃಪೆಯಿಂದ ದೊಡ್ಡ ಲಾಭ


- ಮನೆಯ ಹೊರಗೋಡೆ ಮತ್ತು ಮುಖ್ಯ ದ್ವಾರದ ಮೇಲೆ ಅರಿಶಿನದ ಗೆರೆಯನ್ನು ಹಾಕುವುದರಿಂದ ನಕಾರಾತ್ಮಕ ಶಕ್ತಿಗಳು (Negetive energy) ಮನೆಯೊಳಗೆ ಪ್ರವೇಶಿಸುವುದಿಲ್ಲ.  


ಬಾಳೆಮರಕ್ಕೆ (Banana plant) ಅರಿಶಿನ ತಿಲಕವನ್ನು ಹಚ್ಚಿ ನೀರನ್ನು ಅರ್ಪಿಸಿ. ಇದರಿಂದ ಮದುವೆಗೆ ಸಂಬಂಧಿಸಿದ ಸಮಸ್ಯೆಗಳೂ ಪರಿಹಾರವಾಗುತ್ತವೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.