2022 ರಲ್ಲಿ ಸಂಭವಿಸಲಿರುವ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳು ಎಷ್ಟು? ಯಾರ ಮೇಲೆ ಹೇಗೆ ಪರಿಣಾಮ ಬೀರಲಿದೆ ?

ಈ ವರ್ಷ ಅಂದರೆ 2022ರಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ಎರಡು ಸೂರ್ಯಗ್ರಹಣ ಮತ್ತು 2 ಚಂದ್ರಗ್ರಹಣಗಳು ಸೇರಿವೆ. 

Written by - Ranjitha R K | Last Updated : Feb 10, 2022, 11:03 AM IST
  • 2022 ರಲ್ಲಿ 4 ಗ್ರಹಣಗಳು ಸಂಭವಿಸುತ್ತವೆ
  • ಇದರಲ್ಲಿ 2 ಸೂರ್ಯಗ್ರಹಣಗಳು ಮತ್ತು 2 ಚಂದ್ರ ಗ್ರಹಣಗಳು ಸೇರಿವೆ
  • ಜೀವನದ ಮೇಲೆ ಬೀರಲಿದೆ ದೊಡ್ಡ ಪರಿಣಾಮ
2022 ರಲ್ಲಿ ಸಂಭವಿಸಲಿರುವ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳು ಎಷ್ಟು? ಯಾರ ಮೇಲೆ ಹೇಗೆ ಪರಿಣಾಮ ಬೀರಲಿದೆ ? title=
2022 ರಲ್ಲಿ 4 ಗ್ರಹಣಗಳು ಸಂಭವಿಸುತ್ತವೆ (file photo)

ನವದೆಹಲಿ : ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರ ಎರಡರಲ್ಲೂ ಸೂರ್ಯಗ್ರಹಣ (Solar Eclipse) ಮತ್ತು ಚಂದ್ರಗ್ರಹಣದ (Lunar Eclipse) ಘಟನೆಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಖಗೋಳಶಾಸ್ತ್ರಜ್ಞರು ಗ್ರಹಣಗಳನ್ನು ವೀಕ್ಷಿಸಲು ಕುತೂಹಲದಿಂದ ಕಾಯುತ್ತಿರುತ್ತಾರೆ. ಅದೇ ಜ್ಯೋತಿಷ್ಯದಲ್ಲಿ (Astrology) ಗ್ರಹಣಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಗ್ರಹಣಗಳು ಜೀವನದ ಮೇಲೆ ದೊಡ್ಡ ಪರಿಣಾಮ (effects of grahana) ಬೀರುತ್ತವೆ. ಈ ವರ್ಷ ಅಂದರೆ 2022ರಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ಎರಡು ಸೂರ್ಯಗ್ರಹಣ ಮತ್ತು 2 ಚಂದ್ರಗ್ರಹಣಗಳು ಸೇರಿವೆ. 

ಯಾವಾಗ ಸಂಭವಿಸಲಿವೆ ಗ್ರಹಣಗಳು : 
ವರ್ಷದ ಮೊದಲ ಗ್ರಹಣ : ವರ್ಷದ ಮೊದಲ ಗ್ರಹಣ ಸೂರ್ಯಗ್ರಹಣವಾಗಿರುತ್ತದೆ (Solar eclipse). ಇದು ಏಪ್ರಿಲ್ 30  2022 ರಂದು ಮಧ್ಯಾಹ್ನ 12:15 ರಿಂದ 04:07 ರವರೆಗೆ ಕಾಣಿಸಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಇದು ನೈಋತ್ಯ ಅಮೆರಿಕ, ಪೆಸಿಫಿಕ್ ಅಟ್ಲಾಂಟಿಕ್ ಮತ್ತು ಅಂಟಾರ್ಟಿಕಾದಲ್ಲಿ ಗೋಚರಿಸುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಅದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. 

ಇದನ್ನೂ ಓದಿ: Surya Rashi Parivartan: ಈ 4 ರಾಶಿಯವರಿಗೆ ಸೂರ್ಯನ ಕೃಪೆಯಿಂದ ದೊಡ್ಡ ಲಾಭ

ವರ್ಷದ ಎರಡನೇ ಗ್ರಹಣ : ವರ್ಷದ ಎರಡನೇ ಗ್ರಹಣವು ಚಂದ್ರಗ್ರಹಣವಾಗಿರುತ್ತದೆ (Lunar eclipse). 2022 ರ ಎರಡನೇ ಗ್ರಹಣ ಮತ್ತು ಮೊದಲ ಚಂದ್ರಗ್ರಹಣ ಮೇ 16 ರಂದು ಗೋಚರಿಸಲಿದೆ. ಬೆಳಗ್ಗೆ 07:02 ರಿಂದ ಮಧ್ಯಾಹ್ನ 12:20 ರವರೆಗೆ ಸಂಭವಿಸಲಿದೆ (time of lunar eclipse). ಮೊದಲ ಸೂರ್ಯಗ್ರಹಣದಂತೆ ಈ ಚಂದ್ರಗ್ರಹಣವೂ ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ, ಅದರ ಸೂತಕ ಅವಧಿಯು ಮಾನ್ಯವಾಗುವುದಿಲ್ಲ. ಈ ಗ್ರಹಣವು ನೈಋತ್ಯ ಯುರೋಪ್, ನೈಋತ್ಯ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾ, ಹಿಂದೂ ಮಹಾಸಾಗರದಲ್ಲಿ ಗೋಚರಿಸಲಿದೆ.

ವರ್ಷದ ಮೂರನೇ ಗ್ರಹಣ : 2022 ರ ಮೂರನೇ ಗ್ರಹಣ ಮತ್ತು ಎರಡನೇ ಸೂರ್ಯಗ್ರಹಣ ಅಕ್ಟೋಬರ್ 25 ರಂದು ಸಂಭವಿಸುತ್ತದೆ. ಇದು ಕೂಡ ಭಾಗಶಃ ಗ್ರಹಣವಾಗಿದ್ದು, ಸಂಜೆ 04:29 ರಿಂದ 05:42 ರವರೆಗೆ ಇರುತ್ತದೆ (date and time of solar eclipse). ಇದು ಕೂಡ ಭಾರತದಲ್ಲಿ ಕಾಣಿಸುವುದಿಲ್ಲ. ಇದನ್ನು ಯುರೋಪ್, ನೈಋತ್ಯ ಏಷ್ಯಾ, ಆಫ್ರಿಕಾ ಮತ್ತು ಅಟ್ಲಾಂಟಿಕಾದಲ್ಲಿ ಕಾಣಬಹುದು. ಈ ಗ್ರಹಣದ ಸೂತಕ ಕಾಲವೂ ಮಾನ್ಯವಾಗುವುದಿಲ್ಲ. 

ವರ್ಷದ ಕೊನೆಯ ಗ್ರಹಣ : ವರ್ಷದ ಕೊನೆಯ ಮತ್ತು ಎರಡನೇ ಚಂದ್ರಗ್ರಹಣವು ನವೆಂಬರ್ 8 ರಂದು ಮಧ್ಯಾಹ್ನ 01:32 ರಿಂದ 07:27 ರವರೆಗೆ ಇರುತ್ತದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದು, ಭಾರತದಲ್ಲಿ ಗೋಚರಿಸಲಿದೆ. ಆದ್ದರಿಂದ, ಅದರ ಸೂತಕ್ಅವಧಿಯು ಮಾನ್ಯವಾಗಿರುತ್ತದೆ. ಭಾರತದೊಂದಿಗೆ, ಈ ಗ್ರಹಣವನ್ನು ಆಗ್ನೇಯ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಕಾಣಬಹುದು. 

ಇದನ್ನೂ ಓದಿ: valentine weekನ ಕೊನೆಯ 5 ದಿನಗಳು ಈ ರಾಶಿಯವರಿಗೆ ವರದಾನವಾಗಿರಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News