ಜೂನ್ 14 ರವರೆಗೆ ಈ ರಾಶಿಯವರಿಗೆ ಭಾರೀ ಅದೃಷ್ಟ..! ಎಲ್ಲಾ ಕೆಲಸವನ್ನು ಕೈ ಗೂಡಿಸಲಿದ್ದಾನೆ ಸೂರ್ಯ ದೇವ
ಸೂರ್ಯನು ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಜೂನ್ 14 ರವರೆಗೆ ಸೂರ್ಯನು ವೃಷಭ ರಾಶಿಯಲ್ಲಿಯೇ ಇರಲಿದ್ದಾನೆ.
ಬೆಂಗಳೂರು : ಜ್ಯೋತಿಷ್ಯದಲ್ಲಿ ಸೂರ್ಯ ದೇವರಿಗೆ ವಿಶೇಷ ಸ್ಥಾನವಿದೆ. ಸೂರ್ಯ ದೇವರನ್ನು ಎಲ್ಲಾ ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯನು ಮಂಗಳಕರ ಸ್ಥಾನದಲ್ಲಿದ್ದಾಗ ವ್ಯಕ್ತಿಯ ಅದೃಷ್ಟ ಕೂಡಾ ಸೂರ್ಯನಂತೆಯೇ ಬೆಳಗುತ್ತದೆ. ಈ ಸಮಯದಲ್ಲಿ ಸೂರ್ಯ ದೇವನು ವೃಷಭ ರಾಶಿಯಲ್ಲಿದ್ದಾನೆ. ಸೂರ್ಯನು ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಜೂನ್ 14 ರವರೆಗೆ ಸೂರ್ಯನು ವೃಷಭ ರಾಶಿಯಲ್ಲಿಯೇ ಇರಲಿದ್ದಾನೆ. ಇದರ ನಂತರ ಸೂರ್ಯನು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ.
ವೃಷಭ ರಾಶಿಯಲ್ಲಿರುವ ಸೂರ್ಯ ಈ ರಾಶಿಯವರಿಗೆ ನೀಡಲಿದ್ದಾನೆ ಅದೃಷ್ಟ :
ವೃಷಭ ರಾಶಿ :
ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗಲಿದೆ. ಪ್ರಯಾಣದಿಂದ ಲಾಭವಾಗುವ ಸಾಧ್ಯತೆ ಇದೆ. ಆದಾಯ ಹೆಚ್ಚಾಗಬಹುದು. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರ ಆರಂಭಿಸಲು ಸಮಯ ಅನುಕೂಲಕರವಾಗಿದೆ.
ಇದನ್ನೂ ಓದಿ : ಈ ರಾಶಿಯವರ ಮೇಲೆ ಬೀಳಲಿದೆ ಶನಿಯ ವಕ್ರ ದೃಷ್ಟಿ .! ಆದರೆ ನಾಲ್ಕು ರಾಶಿಯವರ ಮೇಲೆ ಭಾರೀ ಕೃಪಾ ಕಟಾಕ್ಷ
ವೃಶ್ಚಿಕ ರಾಶಿ :
ಈ ಸಮಯದಲ್ಲಿ, ಕೆಲಸದಲ್ಲಿ ಬಡ್ತಿ ಪಡೆಯುವ ಸಾಧ್ಯತೆಗಳಿವೆ. ಪ್ರತಿಷ್ಠೆ ಹೆಚ್ಚಾಗಬಹುದು. ವಾಹನವನ್ನು ಖರೀದಿಸುವ ಅವಕಾಶಗಳು ದಟ್ಟವಾಗಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ. ವಹಿವಾಟಿನಿಂದ ಲಾಭವಿರುತ್ತದೆ. ಗಣಪತಿ ದೇವರ ವಿಶೇಷ ಅನುಗ್ರಹ ಈ ರಾಶಿಯವರ ಮೆಲಿರಲಿದೆ.
ಧನು ರಾಶಿ :
ಆದಾಯದ ಹೆಚ್ಚಳವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಇದರಿಂದಾಗಿ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಈ ಸಮಯವು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ವರದಾನಕ್ಕಿಂತ ಕಡಿಮೆಯಾಗಿರುವುದಿಲ್ಲ ಎಂದೇ ಹೇಳಬಹುದು. ಈ ಅವಧಿಯಲ್ಲಿ ಹೂಡಿಕೆ ಲಾಭದಾಯಕವಾಗಿರುತ್ತದೆ.
ಇದನ್ನೂ ಓದಿ : Shani Vakri June 2022: ನಾಳೆಯಿಂದ ಹಿಮ್ಮುಖವಾಗಿ ಚಲಿಸಲಿರುವ ಶನಿದೇವ, ಈ 5 ರಾಶಿಯವರು ಎಚ್ಚರದಿಂದಿರಬೇಕು
ಕುಂಭ ರಾಶಿ :
ಈ ಸಮಯದಲ್ಲಿ ನೀವು ನಿಮ್ಮ ಕೆಲಸದಲ್ಲಿ ಪ್ರಗತಿಯ ಅವಕಾಶಗಳನ್ನು ಪಡೆಯುತ್ತೀರಿ. ಹೊಸ ಕೆಲಸವನ್ನು ಪ್ರಾರಂಭಿಸಬಹುದು. ವ್ಯಾಪಾರಿಗಳು ಲಾಭ ಗಳಿಸಬಹುದು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶ ದೊರೆಯುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಸಮಯವು ಮಂಗಳಕರವಾಗಿರುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.