ಬೆಂಗಳೂರು :  ದೀಪಾವಳಿ ದಿನದಂದು ಲಕ್ಷ್ಮೀದೇವಿಯನ್ನು ಪೂಜಿಸಲಾಗುತ್ತದೆ. ಇಡೀ ವರ್ಷ ಸುಖ ಸಮೃದ್ದಿ ಕರುಣಿಸುವಂತೆ ಪ್ರಾರ್ಥಿಸಲಾಗುತ್ತದೆ. ಈ ದೀಪಾವಳಿಯು ಕೆಲವು ರಾಶಿಯವರ ಜೀವನದ ಚಕ್ರವನ್ನೇ ಬದಲಾಯಿಸಲಿದೆ. ಈ ದೀಪಾವಳಿಯಿಂದ ಮುಂದಿನ ದೀಪಾವಳಿವರೆಗೆ ಈ ರಾಶಿಯವರ ಅದೃಷ್ಟ ವೇ ಬದಲಾಗಲಿದೆ. ಇಡೀ ವರ್ಷ ಈ ರಾಶಿಯವರ ಕೈ ಹಿಡಿಯಲಿದ್ದಾಳೆ ಅದೃಷ್ಟ ಲಕ್ಷ್ಮೀ.  


COMMERCIAL BREAK
SCROLL TO CONTINUE READING

ಉತ್ತಮವಾಗಿರಲಿದೆ ಈ ವರ್ಷ : 
ದೀಪಾವಳಿಯಿಂದ ಮುಂದಿನ ದೀಪಾವಳಿಯವರೆಗೆ ಸಮಯವು ಉತ್ತಮವಾಗಿ ರಲಿರುವ ರಾಶಿಚಕ್ರ ಚಿಹ್ನೆಗಳೆಂದರೆ ಮೇಷ, ಕನ್ಯಾ, ತುಲಾ, ಧನು  ಮಕರ ಮತ್ತು ಮೀನ. ಈ ಜನರು ಇಡೀ ವರ್ಷ ಬಹಳಷ್ಟು ಯಶಸ್ಸನ್ನು ಪಡೆಯುತ್ತಾರೆ. ವೃತ್ತಿಜೀವನದ ದೃಷ್ಟಿಯಿಂದಲೂ ಈ ವರ್ಷ ತುಂಬಾ ಚೆನ್ನಾಗಿರಲಿದೆ. 


ಇದನ್ನೂ ಓದಿ : ಬೆಳಕಿನ ಹಬ್ಬದಂದು ಗ್ರಹಣದ ಕರಿಛಾಯೆ .! ಈ ದಿನ ಮಾಡಬೇಕು ದೀಪಾವಳಿ ಲಕ್ಷ್ಮೀ ಪೂಜೆ.!


ಮೇಷ ರಾಶಿ : 
ಮೇಷ ರಾಶಿಯವರಿಗೆ ಈ ವರ್ಷ ಉತ್ತಮವಾಗಿರಲಿದೆ. ಈ ವರ್ಷ ಈ ರಾಶಿಯವರ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ. ಹಣ ಮತ್ತು ಆಸ್ತಿಯ ವಿಷಯದಲ್ಲಿ ಈ ವರ್ಷ ಉತ್ತಮವಾಗಿರಲಿದೆ. ವರ್ಷದ ಆರಂಭದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆ ಇದೆ. ಈ ವರ್ಷ ಹೊಸ ವಾಹನ ಖರೀದಿ ಯೋಗವಿದೆ. 


ಕನ್ಯಾ ರಾಶಿ :
ದೀಪಾವಳಿಯ ನಂತರ ಯಾವುದೇ ಸಮಯದಲ್ಲಿ ವರ್ಗಾವಣೆಯಾಗಬಹುದು. ಈ ವರ್ಗಾವಣೆಯು ವೃತ್ತಿಜೀವನಕ್ಕೆ ಹೊಸ ದಿಕ್ಕನ್ನು ನೀಡುತ್ತದೆ.  ಕನ್ಯಾ ರಾಶಿಯವರಿಗೆ ಈ ವರ್ಷ ಶಿವನ ಆರಾಧನೆ ಮಾಡುವುದು ಶುಭಕರವಾಗಿರುತ್ತದೆ.


ತುಲಾ ರಾಶಿ : 
ಈ ವರ್ಷ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ವೃತ್ತಿಜೀವನದಲ್ಲಿ ಬದಲಾವಣೆಯೊಂದಿಗೆ, ಉತ್ತಮ ಯಶಸ್ಸು ಕೂಡ ಬರುತ್ತದೆ. ಸಾಕಷ್ಟು ಧನಲಾಭವಿರುತ್ತದೆ. ದೀಪಾವಳಿಯ ನಂತರ ಯಾವಾಗ ಬೇಕಾದರೂ ಸ್ವಂತ ಮನೆಯ ಕನಸು ನನಸಾಗಬಹುದು. 


ಇದನ್ನೂ ಓದಿ : Shani Margi 2022: ಶನಿಯ ಚಲನೆಯಲ್ಲಿ ಬದಲಾವಣೆ, ಈ ರಾಶಿಯವರ ಮೇಲೆ ಪರಿಣಾಮ!


ಧನು ರಾಶಿ  :
ಧನು ರಾಶಿಯವರಿಗೆ ಈ ವರ್ಷ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ. ಅತ್ಯುತ್ತಮ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಆರಾಧನೆ ಮತ್ತು ಪೂಜೆಯ ಮೇಲೆ  ಹೆಚ್ಚಿನ ಗಮನವಿರಲಿ. 


ಮಕರ ರಾಶಿ :
ಈ ವರ್ಷ, ಮಕರ ರಾಶಿಯ ಜನರು ಅಪಾರ ಹಣ ಗಳಿಸುತ್ತಾರೆ. ಎಲ್ಲ ರೀತಿಯ ಸಾಲದಿನದ ಮುಕ್ತಿ ಸಿಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಶನಿದೇವರ ಆರಾಧನೆಯಿಂದ ಲಾಭವಾಗುತ್ತದೆ.


ಮೀನ ರಾಶಿ  :
ಮೀನ ರಾಶಿಯವರು ಶನಿ ಮಂತ್ರವನ್ನು ನಿರಂತರವಾಗಿ ಜಪಿಸಿದರೆ, ಯಾವುದೇ ಸಮಸ್ಯೆಯನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ. ಈ ವರ್ಷ, ಹೊಸ ಕೆಲಸಗಳಲ್ಲಿ ಲಾಭದ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಸಾಲ ಮತ್ತು ಹಣದ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ