Astrology: ಸೆಪ್ಟೆಂಬರ್ 14 ರವರೆಗೆ ಗುರುವಿನ ಹಿಮ್ಮುಖ ಚಲನೆ, ಈ ಮೂರು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಅವಧಿಯಲ್ಲಿ ದೇವಗುರು ಗುರುವಿನ ಅನುಗ್ರಹವು ಮೂರು ರಾಶಿಚಕ್ರ ಚಿಹ್ನೆಗಳ ಮೇಲೆ ಇರುತ್ತದೆ. ಆ ಮೂರು ರಾಶಿಗಳೆಂದರೆ ವೃಶ್ಚಿಕ, ಧನು ಮತ್ತು ಮೀನ..
ನವದೆಹಲಿ : ಗುರು ಗ್ರಹವನ್ನು ಶಿಕ್ಷಕ, ಜ್ಞಾನ, ಸದ್ಗುಣ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ, ಗುರು (Jupiter) ಗ್ರಹ ಹಿಮ್ಮುಖ ಚಲನೆಯಲ್ಲಿದೆ. ಸೆಪ್ಟೆಂಬರ್ 14 ರವರೆಗೆ ಗುರುವಿನ ಹಿಮ್ಮುಖ ಚಲನೆಯೇ ಇರುತ್ತದೆ. ಈ ಸಮಯದಲ್ಲಿ, ಮೂರೂ ರಾಶಿಚಕ್ರ ಚಿಹ್ನೆಗಳ (Zodiac Sign) ಜನರ ಮೇಲೆ ಗುರುವಿನ ವಿಶೇಷ ಆಶೀರ್ವಾದ ಇರುತ್ತದೆ.
ದೇವಗುರು ಬೃಹಸ್ಪತಿಯಿಂದ ಸಿಗಲಿದೆ ಆಶೀರ್ವಾದ :
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಈ ಅವಧಿಯಲ್ಲಿ ದೇವಗುರು ಗುರುವಿನ ಅನುಗ್ರಹವು ಮೂರು ರಾಶಿಚಕ್ರ ಚಿಹ್ನೆಗಳ ಮೇಲೆ ಇರುತ್ತದೆ. ಆ ಮೂರು ರಾಶಿಗಳೆಂದರೆ ವೃಶ್ಚಿಕ, ಧನು ಮತ್ತು ಮೀನ. ಈ ರಾಶಿಚಕ್ರದವರಿಗೆ, ಸೆಪ್ಟೆಂಬರ್ 14 ರವರೆಗಿನ ಸಮಯವು ವರದಾನಕ್ಕಿಂತ ಕಡಿಮೆಯಿರುವುದಿಲ್ಲ. ಈ ಸಮಯದಲ್ಲಿ ಅವರು ಎಲ್ಲಾ ರೀತಿಯ ಸಂತೋಷಗಳನ್ನು ಅನುಭವಿಸುತ್ತಾರೆ.
ಇದನ್ನೂ ಓದಿ : Ganesh Chaturthi 2021 : ಈ ದಿನದಿಂದ ಆರಂಭವಾಗಲಿದೆ ಗಣೇಶ ಉತ್ಸವ, ಈ ಶುಭ ಮುಹೂರ್ತದಲ್ಲಿ ಮನೆಗೆ ಬರಲಿ ಗಣಪ
ಈ ರಾಶಿಚಕ್ರದ (Zodiac Sign) ಜನರು ಹೊಸ ವಾಹನ ಅಥವಾ ಮನೆಯನ್ನು ಖರೀದಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ, ಅವರ ಗೌರವ ಮತ್ತು ಪ್ರತಿಷ್ಠೆಯು ಹೆಚ್ಚಾಗುತ್ತದೆ. ಹಣಕಾಸಿನ ಸಮಸ್ಯೆಗಲು ಕೂಡಾ ನಿವಾರಣೆಯಾಗಲಿದೆ.
ಈ ಸಮಯ ವರದಾನವೇ ಸರಿ :
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ, ಈ ಸಮಯವು ವರದಾನಕ್ಕಿಂತ ಕಡಿಮೆಯಿರುವುದಿಲ್ಲ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿರುತ್ತದೆ. ಶತ್ರುಗಳ ಮೇಲೆ ಜಯ ಸಾಧಿಸುತ್ತೀರಿ. ಆರೋಗ್ಯ (Health problem) ಸಂಬಂಧಿತ ಸಮಸ್ಯೆಗಳನ್ನು ದೂರ ಮಾಡಬಹುದು. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿರುತ್ತದೆ.
ಇದನ್ನೂ ಓದಿ : Astrology: ಅಪಾಯದೊಂದಿಗೆ ಸರಸ ಆಡುವುದೆಂದರೆ ಈ ರಾಶಿಯವರಿಗೆ ಅಚ್ಚುಮೆಚ್ಚು
ವ್ಯಾಪಾರದಲ್ಲಿ ಲಾಭ :
ಕಠಿಣ ಪರಿಶ್ರಮದಿಂದ, ಖಂಡಿತವಾಗಿಯೂ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ. ವೈವಾಹಿಕ ಜೀವನದಲ್ಲಿ (Married life) ಸಂತೋಷವನ್ನು ಅನುಭವಿಸುವಿರಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ. ಕೆಲಸದ ಸ್ಥಳದಲ್ಲಿ ಎಲ್ಲರೂ ನಿಮ್ಮನ್ನು ಹೊಗಳುತ್ತಾರೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ತಾಳ್ಮೆಯಿಂದ ಕೆಲಸ ಮಾಡುವ ಮೂಲಕ, ಖಂಡಿತವಾಗಿಯೂ ಯಶಸ್ಸು ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ